For Quick Alerts
  ALLOW NOTIFICATIONS  
  For Daily Alerts

  ಓಹೋ..ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ಜೋಡಿಯಾಗುತ್ತಾರಂತೆ.!

  By Naveen
  |

  ನಟಿ ರಶ್ಮಿಕಾ ಮಂದಣ್ಣ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ಮೊದಲ ಸಿನಿಮಾ ಮಾಡಿ ಬಂಪರ್ ಹೊಡೆದ ರಶ್ಮಿಕಾ ಬಳಿಕ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು.

  ಪುನೀತ್ ರಾಜ್ ಕುಮಾರ್ ಮತ್ತು ಗಣೇಶ್ ಜೊತೆಗೆ ರಶ್ಮಿಕಾ ಈಗಾಗಲೇ ನಟಿಸುತ್ತಿದ್ದಾರೆ. ಇದರ ಹಿಂದೆಯೇ ಇದೀಗ 'ಭರ್ಜರಿ' ಹುಡುಗ ಧ್ರುವ ಸರ್ಜಾ ಸಿನಿಮಾದಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಹೊರಬಂದಿದೆ. ಮುಂದೆ ಓದಿ...

  'ಪೊಗರು' ಸಿನಿಮಾ

  'ಪೊಗರು' ಸಿನಿಮಾ

  ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ. ಆದರೆ ಈಗ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಬಹುದು ಎನ್ನುವ ಮಾತುಗಳು ಹೆಚ್ಚಾಗಿದೆ.

  ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ

  ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ

  ಸದ್ಯ ನಾಯಕಿಯ ಹುಡುಕಾಟದಲ್ಲಿರುವ 'ಪೊಗರು' ತಂಡ ನಟಿ ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ... ಇಬ್ಬರಲ್ಲಿ ಒಬ್ಬರನ್ನು ಚಿತ್ರಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆಯಂತೆ.

  ಶೃತಿ ಹಾಸನ್ ಬರಲಿಲ್ಲ

  ಶೃತಿ ಹಾಸನ್ ಬರಲಿಲ್ಲ

  ಮೊದಲು ಚಿತ್ರಕ್ಕೆ ನಟಿ ಶೃತಿ ಹಾಸನ್ ಕರೆತರಲು ನಿರ್ದೇಶಕ ನಂದ ಕಿಶೋರ್ ತಯಾರಿ ನಡೆಸಿದ್ದರು. ಆದರೆ ಈಗ ಕನ್ನಡದ ಹುಡುಗಿಯೇ ಚಿತ್ರದಲ್ಲಿ ಇರುತ್ತಾರಂತೆ.

  ಧ್ರುವ ಅಭಿಪ್ರಾಯ

  ಧ್ರುವ ಅಭಿಪ್ರಾಯ

  ನಟ ಧ್ರುವ ಸರ್ಜಾ ಅವರ ಮೂರು ಸಿನಿಮಾಗಳಲ್ಲಿ ಕನ್ನಡದ ನಾಯಕಿರೇ ಇದ್ದರು. ಅದೇ ರೀತಿ ಈ ಸಿನಿಮಾದಲ್ಲಿಯೂ ಕನ್ನಡದ ಹುಡುಗಿಯೇ ಇರಲಿ ಎನ್ನುವುದು ಧ್ರುವ ಅವರ ಅಭಿಪ್ರಾಯವಂತೆ.

  ದರ್ಶನ್, ಸುದೀಪ್ ಸಮಕ್ಕೆ ಬಂದು ನಿಂತ ಧ್ರುವ ಸರ್ಜಾ ಸಂಭಾವನೆ!

  ಡೇಟ್ಸ್ ತೊಂದರೆ ಆಗಲ್ಲ

  ಡೇಟ್ಸ್ ತೊಂದರೆ ಆಗಲ್ಲ

  ರಶ್ಮಿಕಾ ಮಂದಣ್ಣ ಸದ್ಯ ತೆಲುಗಿನ ಸಿನಿಮಾ ಬಿಟ್ಟರೆ ಕನ್ನಡದಲ್ಲಿ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಇತ್ತ ಲತಾ ಹೆಗಡೆ ಕೈ ನಲ್ಲಿ 'ಅನಂತು ವರ್ಸಸ್ ನುಸ್ರತ್' ಸಿನಿಮಾ ಇದೆ. ಸೋ, ಈ ಇಬ್ಬರು ನಾಯಕಿಯರಿಂದ 'ಪೊಗರು' ಚಿತ್ರಕ್ಕೆ ಡೇಟ್ಸ್ ತೊಂದರೆ ಆಗುವುದು ಕಡಿಮೆ.

  ನಿಜ ಕಣ್ರೀ... ಇನ್ನೂ ಆರು ವರ್ಷ ಧ್ರುವ ಸರ್ಜಾ ಫ್ರೀ ಇಲ್ಲ.!

  ಅಧಿಕೃತವಾಗಿಲ್ಲ

  ಅಧಿಕೃತವಾಗಿಲ್ಲ

  'ಪೊಗರು' ಸಿನಿಮಾಗೆ ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ ಇಬ್ಬರಲ್ಲಿ ಒಬ್ಬರು ನಾಯಕಿಯಾಗುತ್ತಾರೆ ಎನ್ನುವ ಸುದ್ದಿ ಇದೆ. ಆದರೆ ನಾಯಕಿಯ ಆಯ್ಕೆ ಬಗ್ಗೆ ಚಿತ್ರತಂಡದಿಂದ ಇನ್ನು ಅಧಿಕೃತ ಮಾಹಿತಿ ಹೊರ ಬಂದಿಲ್ಲ.

  English summary
  According to the sources, Rashmika Mandanna or Latha Hegde to play lead opposite Dhruva Sarja in 'Pogaru' movie. ಧ್ರುವ ಸರ್ಜಾ ಅವರ 'ಪೋಗರು' ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ ಆಯ್ಕೆ ಆಗುವ ಸಾದ್ಯತೆ ಇದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X