ಮಹೇಶ್ ಬಾಬು ಸಿನಿಮಾಗೆ 'ಕೆಜಿಎಫ್ 2' ರಮಿಕಾ ಸೇನ್ ಎಂಟ್ರಿ? ಏನಂತಿದೆ ಟಾಲಿವುಡ್?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪ್ರತಿಯೊಂದು ಸಿನಿಮಾವನ್ನೂ ಅದ್ಧೂರಿಯಾಗಿ ಇರಬೇಕು ಅಂತ ಇಷ್ಟ ಪಡುತ್ತಾರೆ. ಮಹೇಶ್ ಬಾಬು ಜೊತೆ ನಟಿಸುವ ನಾಯಕಿಯಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.

Recommended Video

ಸೌತ್ ಸಿನಿಮಾ ಮಂದಿ ಕಣ್ಣು ರಮಿಕಾ ಸೇನ್ ಮೇಲೆ | Ramika Sen | KGF 2 | Raveena Tandon | Yash | Prashanth Neel

ಕೆಲವೊಮ್ಮೆ ಪ್ರಿನ್ಸ್ ಸಿನಿಮಾದಲ್ಲಿ ಯಾರು ನಟಿಸಬೇಕು ಅನ್ನುವುದನ್ನೂ ಅವರೇ ತೀರ್ಮಾನ ಮಾಡುತ್ತಾರೆ. ನಾಯಕಿಯರ ಆಯ್ಕೆಯಿಂದ ಹಿಡಿದು ಪ್ರತಿಯೊಂದರಲ್ಲೂ ತಮ್ಮ ಅಭಿಪ್ರಾಯವನ್ನು ಓಪನ್ ಆಗಿ ಶೇರ್ ಮಾಡುತ್ತಾರೆ. ಆ ಕಾರಣಕ್ಕೆ ಮಹೇಶ್ ಬಾಬು ಸಿನಿಮಾಗೆ ಆಕ್ಷನ್ ಕಟ್ ಹೇಳುವ ಪ್ರತಿಯೊಬ್ಬ ನಿರ್ದೇಶಕ ಕೂಡ ಪಾತ್ರಗಳ ಆಯ್ಕೆಯಲ್ಲಿ ತುಂಬಾನೇ ಹುಷಾರಾಗಿರುತ್ತಾರೆ.

ಈಗ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ 10 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಸಿನಿಮಾಗೆ ಪಾತ್ರಗಳ ಆಯ್ಕೆ ಕೂಡ ನಡೆಯುತ್ತಿದೆ. ಇದೇ ವೇಳೆ ಟಾಲಿವುಡ್‌ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಹೆಸರು ಜೋರಾಗಿಯೇ ಕೇಳಿಬರುತ್ತಿದೆ. ಮಹೇಶ್ ಬಾಬು ಸಿನಿಮಾದಲ್ಲಿ ರವೀನಾ ನಟಿಸುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ.

ಮಹೇಶ್-ತ್ರಿವಿಕ್ರಮ್ ಚಿತ್ರದಲ್ಲಿ ರವೀನಾ?

ಮಹೇಶ್-ತ್ರಿವಿಕ್ರಮ್ ಚಿತ್ರದಲ್ಲಿ ರವೀನಾ?

ಬೆಂಕಿ ಇಲ್ಲದೆ ಹೊಗೆಯಾಡಲ್ಲ ಅನ್ನೋ ಗಾದೆನೇ ಇದೆ. ಟಾಲಿವುಡ್‌ನಲ್ಲೂ ಇಂತಹದ್ದೊಂದು ಸದ್ದು ಜೋರಾಗಿಯೇ ಒಡಾಡುತ್ತಿದೆ. 10 ವರ್ಷಗಳ ಬಳಿಕ ಮಹೇಶ್ ಬಾಬು ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಟಂಡನ್‌ರನ್ನು ಪ್ರಮುಖ ಪಾತ್ರವೊಂದಕ್ಕೆ ಕರೆತರಲು ಸ್ಕೆಚ್ ಹಾಕಿದ್ದಾರಂತೆ. ಮಹೇಶ್ ಬಾಬು ಕೂಡ ತ್ರಿವಿಕ್ರಮ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ತ್ರಿವಿಕ್ರಮ್ ಮಾತ್ರ ಈ ವಿಷಯದ ಬಗ್ಗೆ ಎಲ್ಲೂ ಬಾಯಿ ಬಿಡುತ್ತಲೇ ಇಲ್ಲ.

ಮಹೇಶ್ ಬಾಬು ಫ್ಯಾನ್ಸ್‌ಗೆ ರವೀನಾ ಮೇಲೆ ಕಣ್ಣು

ಮಹೇಶ್ ಬಾಬು ಫ್ಯಾನ್ಸ್‌ಗೆ ರವೀನಾ ಮೇಲೆ ಕಣ್ಣು

'ಕೆಜಿಎಫ್ 2' ಸಿನಿಮಾದಲ್ಲಿ ರವೀನಾ ಟಂಡನ್ ನಟಿಸಿದ ರಮೀಕಾ ಸೇನ್ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ. ತೆಲುಗು ಪ್ರೇಕ್ಷಕರೂ ರವೀನಾ ಟಂಡನ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇತ್ತ ಮಹೇಶ್ ಬಾಬು ಅಭಿಮಾನಿಗಳು ಕೂಡ ಮಹೇಶ್ ಬಾಬು ಸಿನಿಮಾದಲ್ಲಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಬೇಕು ಎಂದು ಆಸೆ ಪಟ್ಟಿದ್ದಾರಂತೆ. ತ್ರಿವಿಕ್ರಮ್ ಹೇಳಿ-ಕೇಳಿ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ತೆರೆಮೇಲೆ ತರುತ್ತಾರೆ. ಈ ಕಾರಣಕ್ಕೆ ರವೀನಾ ಟಂಡನ್ ಕೂಡ ನಟಿಸಲಿ ಎಂಬುದು ಅವರ ಆಸೆಯಂತೆ.

ತ್ರಿವಿಕ್ರಮ ಸಿನಿಮಾದಲ್ಲಿ ಸ್ಟಾರ್ ನಟಿಯರು

ತ್ರಿವಿಕ್ರಮ ಸಿನಿಮಾದಲ್ಲಿ ಸ್ಟಾರ್ ನಟಿಯರು

ತ್ರಿವಿಕ್ರಮ್ ಪ್ರತಿಯೊಂದು ಸಿನಿಮಾದಲ್ಲಿಯೂ ಪ್ರಮುಖ ಪಾತ್ರಗಳಿಗೆ ಸ್ಟಾರ್ ನಟಿಯರನ್ನು ಕರೆದುಕೊಂಡು ಬರುತ್ತಾರೆ. ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಈಗಾಗಲೇ ನಾದಿಯಾ, ಖುಷ್ಬು, ಟಬುರನ್ನು ತಮ್ಮ ಸಿನಿಮಾಗಾಗಿ ತ್ರಿವಿಕ್ರಮ್ ಕರೆದುಕೊಂಡು ಬಂದಿದ್ದಾರೆ. 90ರ ದಶಕದಲ್ಲಿ ಮಿಂಚಿದ ಸ್ಟಾರ್ ನಟಿಯರನ್ನು ತ್ರಿವಿಕ್ರಮ್ ತಮ್ಮ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನೀಡುತ್ತಲೇ ಇದ್ದಾರೆ. ಈ ಬಾರಿ ರವೀನಾ ಟಂಡನ್‌ರನ್ನು ಕರೆತರಲಿದ್ದಾರೆ ಎಂದು ಹೇಳಿಲಾಗಿದೆ.

ಜಕ್ಕಣ್ಣ ಪ್ರಿನ್ಸ್ ಸಿನಿಮಾದ ಕಥೆಯೇನು?

ಜಕ್ಕಣ್ಣ ಪ್ರಿನ್ಸ್ ಸಿನಿಮಾದ ಕಥೆಯೇನು?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಫುಲ್ ಸ್ವಿಂಗ್‌ನಲ್ಲಿ ನಡೆಯುತ್ತಿದೆ. ಹೀಗಾಗಿ ಇವೆರಡು ಸಿನಿಮಾಗಳಲ್ಲಿ ಒಂದರಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಬಹುದು ಎಂದು ಮಹೇಶ್ ಬಾಬು ಅಭಿಮಾನಿಗಳು ಕಾದು ಕೂತಿದ್ದಾರೆ.

More from Filmibeat

English summary
Will Raveena Tandon Join Mahesh Babu And Trivikram next Movie, Here is More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X