»   » ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು.!

ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು.!

Posted By:
Subscribe to Filmibeat Kannada

ಬಹುಭಾಷಾ ಚಿತ್ರಕ್ಕೆ ನಾಯಕನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಪುತ್ರ ವಿಕ್ರಮ್ ಆಯ್ಕೆ ಆಗಿರುವ ಸುದ್ದಿಯನ್ನ ನೀವು ಕೇಳಿರಬಹುದು. ಹಾಗೇ, ಆ ಚಿತ್ರಕ್ಕೆ 'ನಾನು ಅವಳು' ಎಂಬ ಟೈಟಲ್ ಫಿಕ್ಸ್ ಆಗಿರುವುದನ್ನೂ ನಾವೇ ನಿಮಗೆ ಹೇಳಿದ್ವಿ.

ನಾಗಶೇಖರ್ ನಿರ್ದೇಶನವಿರುವ 'ನಾನು ಅವಳು' ಚಿತ್ರದಲ್ಲಿ ವಿಕ್ರಮ್ ಗೆ 'ಸಕಲಕಲಾವಲ್ಲಭ' ಕಮಲ್ ಹಾಸನ್ ಎರಡನೇ ಪುತ್ರಿ ಅಕ್ಷರಾ ಹಾಸನ್ ನಾಯಕಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ವಿಕ್ರಮ್ ಚಿತ್ರಕ್ಕೆ ಅಕ್ಷರಾ ಹಾಸನ್ ಬಣ್ಣ ಹಚ್ಚುವುದು ಡೌಟು. ಹೀಗಾಗಿ ಬೇರೆ ನಾಯಕಿಯ ಹುಡುಕಾಟದಲ್ಲಿ ನಾಗಶೇಖರ್ ತೊಡಗಿದ್ದಾರೆ. ಮುಂದೆ ಓದಿರಿ...

ನಾಗಶೇಖರ್ ತಲೆಯಲ್ಲಿ ಈಕೆಯ ಹೆಸರು....

'ನಾನು ಅವಳು' ಚಿತ್ರಕ್ಕೆ ಮಲಯಾಳಂನ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾರು ಈ ಸಾಯಿ ಪಲ್ಲವಿ.?

ಮಲಯಾಳಂನ 'ಪ್ರೇಮಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ, ಹರೆಯದ ಹುಡುಗರ ಅಚ್ಚುಮೆಚ್ಚಿನ ನಟಿ. ಮಾಲಿವುಡ್ ನಲ್ಲಿ ಸಖತ್ ಬಿಜಿ ಆಗಿರುವ ಸಾಯಿ ಪಲ್ಲವಿ ಇದೀಗ 'ನಾನು ಅವಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುವ ಸಾಧ್ಯತೆ ಇದೆ.

ಇನ್ನೂ ಪಕ್ಕಾ ಆಗಿಲ್ಲ.!

ಸಾಯಿ ಪಲ್ಲವಿ ಜೊತೆ ನಿರ್ದೇಶಕ ನಾಗಶೇಖರ್ ಒಂದು ರೌಂಡ್ ಮಾತುಕತೆ ನಡೆಸಿದ್ದಾರೆ ಅಂತ ಹೇಳಲಾಗಿದೆ ಅಷ್ಟೇ. ಹೀಗಾಗಿ ಇನ್ನೂ ಯಾವುದೂ ಪಕ್ಕಾ ಆಗಿಲ್ಲ.

ಅದ್ಧೂರಿಯಾಗಿ ನಡೆಯಲಿದೆ ಫೋಟೋ ಶೂಟ್

ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ 'ನಾನು ಅವಳು' ಚಿತ್ರದಲ್ಲಿನ ವಿಕ್ರಮ್ ರವರ ಫೋಟೋ ಶೂಟ್ ಅದ್ದೂರಿಯಾಗಿ ನಡೆಯಲಿದೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಲಿದ್ದು, ಕನಕಪುರ ಶ್ರೀನಿವಾಸ್ ಬಂಡವಾಳ ಹಾಕಲಿದ್ದಾರೆ.

English summary
Will Mollywood Actress Sai Pallavi share screen space with Vikram Ravichandran in 'Naanu Avalu'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada