»   » ಮತ್ತೆ ಅಣ್ಣ - ತಂಗಿಯಾಗಿ ಕಾಣಿಸಿಕೊಳ್ಳುತ್ತಾರ ಶಿವಣ್ಣ - ರಾಧಿಕಾ ?

ಮತ್ತೆ ಅಣ್ಣ - ತಂಗಿಯಾಗಿ ಕಾಣಿಸಿಕೊಳ್ಳುತ್ತಾರ ಶಿವಣ್ಣ - ರಾಧಿಕಾ ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅಣ್ಣ - ತಂಗಿ ಎಂದ ತಕ್ಷಣ ಶಿವಣ್ಣ ಮತ್ತು ರಾಧಿಕಾ ಕುಮಾರಸ್ವಾಮಿ ಜೋಡಿ ನೆನಪಾಗುತ್ತದೆ. 'ತವರಿಗೆ ಬಾ ತಂಗಿ' ಮತ್ತು 'ಅಣ್ಣ ತಂಗಿ' ಸಿನಿಮಾ ಮಾಡಿದ ಈ ಜೋಡಿ ಈಗ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಂತೆ.

ಶಿವಣ್ಣ ಮತ್ತು ರಾಧಿಕಾ ಮತ್ತೆ ತೆರೆ ಮೇಲೆ ಅಣ್ಣ ತಂಗಿಯಾಗಿ ಮಿಂಚಲಿದ್ದಾರಂತೆ. ಸಾಯಿಪ್ರಕಾಶ್ ಮತ್ತೆ ಶಿವಣ್ಣ, ರಾಧಿಕಾ ಜೋಡಿಗೆ ಒಂದು ಕಥೆ ಮಾಡಿದ್ದು, ಈ ಚಿತ್ರದ ಬಗ್ಗೆ ಈಗ ಸುದ್ದಿಯೊಂದು ಕೇಳಿ ಬಂದಿದೆ. ವಿಶೇಷ ಅಂದರೆ ಈ ಚಿತ್ರ ರಾಧಿಕಾ ಕುಮಾರಸ್ವಾಮಿ ಅವರ ಬ್ಯಾನರ್ ನಲ್ಲಿಯೇ ನಿರ್ಮಾಣವಾಗಲಿದೆಯಂತೆ.

Will Shiva Rajkumar and Radhika Kumaraswamy act together again ?

ಅದೇನೇ ಸುದ್ದಿ ಇದ್ದರು ಸದ್ಯ ನಿರ್ದೇಶಕ ಸಾಯಿಪ್ರಕಾಶ್ ಆಗಲಿ ಅಥಾವ ಶಿವಣ್ಣ ಮತ್ತು ರಾಧಿಕಾ ಆಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಶಿವಣ್ಣ ಸಾಲು ಸಾಲು ಸಿನಿಮಾದಲ್ಲಿ ಒಂದು ಕಡೆ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ರಾಧಿಕಾ ಕೂಡ ಅರ್ಜುನ್ ಸರ್ಜಾ ಅವರ 'ಕಾಂಟ್ರಾಕ್ಟ್' ಮತ್ತು ರವಿಚಂದ್ರನ್ ಜೊತೆ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಮಾಡುತ್ತಿದ್ದಾರೆ.

ಸದ್ಯ ಹರಿದಾಡಿರುವ ಈ ಸುದ್ದಿಯಂತೆ ಮತ್ತೆ ಶಿವಣ್ಣ ಮತ್ತು ರಾಧಿಕಾ ಜೋಡಿಯ ಹೊಸ ಸಿನಿಮಾ ಬಂದರೆ 12 ವರ್ಷದ ನಂತರ ಮತ್ತೆ ಅಣ್ಣ ತಂಗಿಯ ಸಮಾಗಮವಾಗಲಿದೆ.

English summary
Will Shiva Rajkumar and Radhika Kumaraswamy act together again ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada