»   » ನಟಿ ಸುಮಲತಾ ಅಂಬರೀಶ್ ಕುರಿತ ಈ ಸುದ್ದಿಯ ಹಿಂದೆ 'ರಾಜಕೀಯ' ಐತೆ.!

ನಟಿ ಸುಮಲತಾ ಅಂಬರೀಶ್ ಕುರಿತ ಈ ಸುದ್ದಿಯ ಹಿಂದೆ 'ರಾಜಕೀಯ' ಐತೆ.!

By: ಒನ್ಇಂಡಿಯಾ ವಾರ್ತೆ
Subscribe to Filmibeat Kannada

ಪತಿ ರೆಬೆಲ್ ಸ್ಟಾರ್ ಅಂಬರೀಶ್ ಕಾಂಗ್ರೆಸ್ ತೊರೆಯುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬ ಗುಲ್ಲಿನ ನಡುವೆ ನಟಿ ಸುಮಲತಾ ಅಂಬರೀಶ್ ಬಗ್ಗೆ ಹೊಸ ಸುದ್ದಿ ಕೇಳಿಬರುತ್ತಿದೆ. ಅದೂ ಕೂಡ 'ರಾಜಕೀಯ'ದ ಕುರಿತು.!

ಪತಿ ಅಂಬರೀಶ್ ರವರಂತೆ ಪತ್ನಿ ಸುಮಲತಾ ಅಂಬರೀಶ್ ಕೂಡ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಖಚಿತ ಸುದ್ದಿ ಅಂತ ಹೇಳಲಾಗಿದೆ.!

ನಟಿ ಸುಮಲತಾ ಅಂಬರೀಶ್ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ಧತೆ ನಡೆಸುತ್ತಿರುವುದು ಖಚಿತ ಎಂಬುದು ಬಲ್ಲಮೂಲಗಳ ಮಾಹಿತಿ.[ನಟಿ ಸುಮಲತಾ ಅಂಬರೀಶ್ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ.?]

'ಕಮಲ' ಹಿಡಿಯಲಿದ್ದಾರಂತೆ ಸುಮಲತಾ ಮೇಡಂ!

ಕೆಲ ವರದಿಗಳ ಪ್ರಕಾರ, ನಟಿ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸುಮಲತಾ ರವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. [ಖಚಿತ ಸುದ್ದಿ: ಸುಮಲತಾ ಮುಡಿಗೇರಲಿದೆ 'ಕಮಲ']

ಅಂಬರೀಶ್ ಕಂಡೀಷನ್ ಹಾಕಿದ್ದಾರಂತೆ.!

''ಪತ್ನಿ ಸುಮಲತಾ ರವರಿಗೆ ಬೆಂಗಳೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾನು ಬಿಜೆಪಿ ಸೇರುತ್ತೇನೆ'' ಎಂಬ ಕಂಡೀಷನ್ ನೊಂದಿಗೆ ಅಂಬರೀಶ್ ಬಿಜೆಪಿ ಸೇರಲು ಮುಂದಾಗಿದ್ದಾರಂತೆ.

ಆರ್.ಅಶೋಕ್ ಹೇಳುವುದೇನು.?

''ಅಂಬರೀಶ್ ಹಾಗೂ ಸುಮಲತಾ ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ. ಬಿಜೆಪಿಯ ರಾಜ್ಯ ಮುಖಂಡರು ಅಂಬರೀಶ್ ರವರೊಂದಿಗೆ ಮಾತುಕತೆ ನಡೆಸಿದ್ದಾರೆ'' ಎಂದು ಹಿಂದೊಮ್ಮೆ ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದರು.

ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸ್ತಾರಾ.?

ಸುಮಲತಾ ಅಂಬರೀಶ್ ರವರು ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಅಂತ ಕಳೆದ ಬಾರಿ ಸುದ್ದಿಯಾಗಿತ್ತು. ಈಗ ರಾಜರಾಜೇಶ್ವರಿ ನಗರ ಕ್ಷೇತ್ರ ಅಂತ ವರದಿ ಆಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಟಿ ಸುಮಲತಾ ಅಂಬರೀಶ್ ಕ್ಲಾರಿಟಿ ಕೊಟ್ಟರೆ ಒಳಿತು.

ಇದು ಮೊದಲಲ್ಲ.!

ನಟಿ ಸುಮಲತಾ ಅಂಬರೀಶ್ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಸುದ್ದಿ ಸ್ಫೋಟಗೊಂಡಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್ ನಲ್ಲಿ ಇಂತಹ ಗಾಸಿಪ್ ಕೇಳಿಬಂದಿತ್ತು. ಅದಕ್ಕೂ ಮುನ್ನ ಸುಮಲತಾ ಎಂ.ಎಲ್.ಸಿ ಆಗಲಿದ್ದಾರೆ ಅಂತ ಹೇಳಲಾಗಿತ್ತು.

ಸುಮಲತಾ ಅಂಬರೀಶ್ ತುಟಿಕ್ ಪಿಟಿಕ್ ಎಂದಿಲ್ಲ.

ತಮ್ಮ ಬಗ್ಗೆ ಇಷ್ಟೆಲ್ಲ ಸುದ್ದಿಯಾಗುತ್ತಿದ್ದರೂ, ನಟಿ ಸುಮಲತಾ ಅಂಬರೀಶ್ ಇನ್ನೂ ತುಟಿಕ್ ಪಿಟಿಕ್ ಎಂದಿಲ್ಲ. ರಾಜಕೀಯಕ್ಕೆ ಬರುವ ಬಗ್ಗೆ ಸುಮಲತಾ ಎಲ್ಲೂ ಬಹಿರಂಗ ಹೇಳಿಕೆ ನೀಡಿಲ್ಲ. ಹೀಗಾಗಿ, ಸದ್ಯಕ್ಕೆ ಇವೆಲ್ಲ ಊಹಾಪೋಹಗಳು ಅಷ್ಟೆ.

English summary
According to the latest buzz, Kannada Actress, Wife of Congress Politician Ambareesh, Sumalatha Ambareesh will join BJP.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada