For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ? ಜಕ್ಕಣ್ಣ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?

  |

  ರಾಜಮೌಳಿ ನಿರ್ದೇಶನದ ಸಿನಿಮಾ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಜಕ್ಕಣ್ಣನ ಮುಂದಿನ ಚಿತ್ರಕ್ಕೆ ಸೂಪರ್ ಸ್ಟಾರ್ ಮಹೇಶ್ ಬಾಬು ಹೀರೊ ಅನ್ನುವುದು ಪಕ್ಕಾ ಆಗಿದೆ. ಇನ್ನುಳಿದ ತಾರಾಗಣದಲ್ಲಿ ಯಾರೆಲ್ಲಾ ಇರ್ತಾರೆ ಎನ್ನುವುದರ ಬಗ್ಗೆ ದಿನಕ್ಕೊಂದು ನ್ಯೂಸ್ ಕೇಳಿಬರ್ತಿದೆ. ಈ ಹಿಂದೆ ಕಮಲ್ ಹಾಸನ್, ಬಾಲಕೃಷ್ಣ ಹೆಸರುಗಳು ಕೇಳಿಬಂದಿತ್ತು. ಆದರೆ ಚಿತ್ರದ ಮುಖ್ಯ ಪಾತ್ರಕ್ಕೆ ಈಗ ತಮಿಳಿನ ಮತ್ತೊಬ್ಬ ಸ್ಟಾರ್ ನಟನ ಹೆಸರು ಚಾಲ್ತಿಗೆ ಬಂದಿದೆ.

  RRR ನಂತರ ಮೌಳಿ ಮುಂದಿನ ಚಿತ್ರಕ್ಕಾಗಿ ಹಾಲಿವುಡ್ ಪ್ರೇಕ್ಷಕರು ಕೂಡ ಕಾಯುವಂತಾಗಿದೆ. ಈ ಬಾರಿ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಒಂದು ಜಬರ್ದಸ್ತ್ ಆಕ್ಷನ್ ಚಿತ್ರಕ್ಕೆ ಜಕ್ಕಣ್ಣ ಅಂಡ್ ಟೀಮ್ ಪ್ಲ್ಯಾನ್ ಮಾಡ್ತಿದೆ. ಹಾಲಿವುಡ್ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಹಾಲಿವುಡ್ ಕಲಾವಿದರು ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ವಿಜಯೇಂದ್ರ ಪ್ರಸಾದ್ ಸದ್ಯ ಕಥೆಯನ್ನು ಫೈನಲ್ ಮಾಡುವ ಪ್ರಯತ್ನದಲ್ಲಿದ್ದಾರೆ. ಮಹೇಶ್ ಬಾಬು ಆದಷ್ಟು ಬೇಗ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಶೂಟಿಂಗ್ ಮುಗಿಸಿ, ರಾಜಮೌಳಿ ಕ್ಯಾಂಪ್ ಸೇರಿಕೊಳ್ಳುವ ದಾವಂತದಲ್ಲಿದ್ದಾರೆ.

  "ನಾನು ಮುಂದೆ ಮಹೇಶ್‌ ಬಾಬು ಸಿನಿಮಾ ಮಾಡ್ತಿದ್ದು, ಇದು ನನ್ನ ಅತಿ ದೊಡ್ಡ ಸಿನಿಮಾ ಆಗಿರಲಿದೆ, ಅದು ಪ್ರಪಂಚದ ಸುತ್ತಾ ಸುತ್ತಾಡುವಂತೆ ಸಾಹಸಮಯ ಸಿನಿಮಾ, ಈಗ ಇದೇ ಭಾರತದಲ್ಲಿ ಟ್ರೆಂಡಿಂಗ್ ಟಾಪಿಕ್" ಎಂದು ರಾಜಮೌಳಿ ಇತ್ತೀಚೆಗೆ ಹೇಳಿದ್ದರು. ಹಾಗಾಗಿ ಸಹಜವಾಗಿಯೇ ಈ ಸಿನಿಮಾ ಕಥೆ ಏನು? ಯಾವ ಜಾನರ್? ಮಹೇಶ್ ಬಾಬು ಜೊತೆ ಬೇರೆ ಯಾರೆಲ್ಲಾ ನಟಿಸ್ತಾರೆ? ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸದ್ಯ ಚಿತ್ರದಲ್ಲಿ ತಮಿಳು ನಟ ಕಾರ್ತಿ ನಟಿಸ್ತಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಚಕ್ಕರ್ ಹೊಡೀತಿದೆ. ಮೊದಲಿನಿಂದಲೂ ಮೌಳಿ ತಮ್ಮ ಸಿನಿಮಾಗಳ ಪಾತ್ರಕ್ಕಾಗಿ ಪರಭಾಷೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾ ಬರ್ತಿದ್ದಾರೆ. 'ಈಗ' ಚಿತ್ರದಲ್ಲಿ ಸುದೀಪ್, 'ಬಾಹುಬಲಿ' ಚಿತ್ರದಲ್ಲಿ ಸತ್ಯರಾಜ್, RRR ಚಿತ್ರದಲ್ಲಿ ಅಜಯ್ ದೇವಗನ್ ಹೀಗೆ ಪರಭಾಷೆಯ ಸ್ಟಾರ್ ನಟರು ಮೌಳಿ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಕಾರ್ತಿ ನಟಿಸ್ತಾರೆ ಎನ್ನಲಾಗ್ತಿದೆ.

  ಈಗಾಗಲೇ ರಾಜಮೌಳಿ, ಕಾರ್ತಿ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ಧಾರಂತೆ. ಕಾರ್ತಿ ಕೂಡ ಕಥೆ ಕೇಳಿ ಥ್ರಿಲ್ಲಾಗಿದ್ದು, ನಟಿಸೋಕೆ ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. ನಟ ಸೂರ್ಯ ಸಹೋದರನಾಗಿರುವ ಕಾರ್ತಿ 'ತೀರನ್ ಅಧಿಗಾರಂ ಒಂಡ್ರು', 'ಕೈದಿ' ರೀತಿಯ ಸೆನ್ಸೇಷನಲ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತೆಲುಗಿನ 'ಊಪಿರಿ' ಚಿತ್ರದಲ್ಲೂ ನಟಿಸಿದ್ದಾರೆ. ಸದ್ಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ವಂದಿಯದೇವನ್ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಕಾರ್ತಿ ನಟನೆಯ ಮುಂದಿನ ಸಿನಿಮಾ 'ಸರ್ದಾರ್' ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

  will-tamil-actor-karthi-collaborate-with-mahesh-babu-for-ss-rajamouli-s-next

  ಆಫ್ರಿಕಾ ಕಾಡಿನ ಹಿನ್ನೆಲೆಯಲ್ಲಿ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಮೂಡಿ ಬರುತ್ತದೆ ಎನ್ನಲಾಗ್ತಿದೆ. ಇದರಲ್ಲಿ ಪ್ರಿನ್ಸ್ ಪ್ರಪಂಚವನ್ನು ಸುತ್ತುವ ಸಾಹಸಿಯಾಗಿ ನಟಿಸ್ತಾರೆ ಎಂದು ಮೌಳಿ ಹೇಳಿದ್ದಾರೆ. ಕಾರ್ತಿ ಜೊತೆಗೆ ಬಾಲಿವುಡ್ ಕಲಾವಿದರನ್ನು ಕೂಡ ಜಕ್ಕಣ್ಣ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಟ್ಟಾರೆ ಮುಂದಿನ ವರ್ಷದ ಆರಂಭದಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಸೆಟ್ಟೇರಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಅಡ್ವೆಂಚರಸ್ ಸಿನಿಮಾ ನಿರ್ಮಾಣ ಆಗಲಿದೆ.

  English summary
  Will Tamil Actor Karthi collaborate with Mahesh Babu for SS Rajamouli's next. S.S. Rajamouli one of the biggest filmmakers in India is planning to approach Karthi for a powerful role in his next film. know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X