For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಸದ್ಯಕ್ಕೆ 'ಆದಿಪುರುಷ್‌' ಮರೆತುಬಿಡಿ!

  |

  'ಬಾಹುಬಲಿ' ಸಿನಿಮಾ ನಂತರ ಯಾಕೋ ಪ್ರಭಾಸ್‌ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ. ರಿಲೀಸ್ ಆದ 2 ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 'ಸಾಹೋ' ಓಕೆ ಎನಿಸಿಕೊಂಡರೆ 'ರಾಧೇಶ್ಯಾಮ್' ಹೀನಾಯವಾಗಿ ಸೋಲುಂಡಿತ್ತು. ಕೊರೋನ ಹಾವಳಿಯಿಂದ 'ಆದಿಪುರುಷ್', 'ಸಲಾರ್' ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೇ ಮುಂದಕ್ಕೆ ಹೋಗುತ್ತಿದೆ.

  ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ವಿಚಾರದಲ್ಲಿ ಪ್ರಭಾಸ್‌ಗೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೂ ಯೂಟ್ಯೂಬ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೇ ಕಾರಣಕ್ಕೆ ಎಷ್ಟೇ ಖರ್ಚು ಆದರೂ ಪರವಾಗಿಲ್ಲ, ಚಿತ್ರವನ್ನು ಮತ್ತೆ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ಚಿತ್ರಕ್ಕಾಗಿ ರೀವರ್ಕ್ ಕೆಲಸ ಶುರುವಾಗಿದೆ. ರಾಮಾಯಣ ಕಾವ್ಯವನ್ನು ಪ್ರೇಕ್ಷಕರು ಒಪ್ಪುವಂತೆ ತೆರೆಗೆ ತರುವ ಪ್ರಯತ್ನ ಶುರುವಾಗಿದೆ. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ಜೂನ್ 12ಕ್ಕೆ ಚಿತ್ರತಂಡ ಮುಂದೂಡಿದೆ.

  ಸದ್ಯ ಫಿಲ್ಮ್‌ ನಗರ್‌ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಮುಂದಿನ ವರ್ಷವೂ 'ಆದಿಪುರುಷ್' ರಿಲೀಸ್ ಅನುಮಾನ ಎನ್ನಲಾಗುತ್ತಿದೆ. ಇಡೀ ಚಿತ್ರಕ್ಕೆ ಹೊಸ ಸ್ಪರ್ಶ ನೀಡುವ ಕೆಲಸ ನಡೀತಿದೆ. ಅದಕ್ಕಾಗಿ ರೀ ಶೂಟ್ ಮಾಡಲಾಗುತ್ತಿದೆ. ಹಾಗಾಗಿ ಜೂನ್ 12ಕ್ಕೆ ಸಿನಿಮಾ ತೆರೆಗೆ ಬರುವು ಕಷ್ಟ ಎನ್ನಲಾಗುತ್ತಿದೆ. ದಸರಾ ವೇಳೆಗೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ತೆರೆಗಪ್ಪಳಿಸಲಿದೆ. ಹಾಗಾಗಿ ಮುಂದಿನ ವರ್ಷ 'ಆದಿಪುರುಷ್' ರಿಲೀಸ್ ಆಗೋದೇ ಇಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯಕ್ಕೆ 'ಆದಿಪುರುಷ್' ಚಿತ್ರವನ್ನು ಮರೆತುಬಿಡುವುದೇ ಒಳ್ಳೆಯದು ಎಂದು ಕೆಲವರು ಹೇಳುತ್ತಿದ್ದಾರೆ.

  with-lot-of-re-shoot-work-adipurush-makers-are-planning-to-postpone-release-date-once-again

  'ಆದಿಪುರುಷ್' ಟ್ರೈಲರ್‌ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಚಿತ್ರದಲ್ಲಿ ಶ್ರೀರಾಮ, ರಾವಣ, ಆಂಜನೇಯ ಪಾತ್ರಗಳನ್ನು ಚಿತ್ರಿಸಿರುವ ಬಗ್ಗೆ ಕೆಲವರು ಚಕಾರ ಎತ್ತಿದ್ದರು. ಸಿನಿಮಾ ಬಾಯ್ಕಾಟ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ರಾವಣನ ಲುಕ್ಕು, ವೇಷಭೂಷಣ ಎಲ್ಲದರ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿತ್ತು. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡರೆ ಕೃತಿ ಸನೂನ್ ಸೀತಾಮಾತೆಯಾಗಿ ಮಿಂಚಿದ್ದಾರೆ.

  ಸನ್ನಿ ಸಿಂಗ್ ಲಕ್ಷ್ಮಣನಾಗಿ ಬಣ್ಣ ಹಚ್ಚಿದ್ದು, ರಾವಣನಾಗಿ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ. ರಾಮಾಯಣದ ಪಾತ್ರಗಳನ್ನು ವಕ್ರೀಕರಿಸಿ ಚಿತ್ರಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ನೋಟಿಸ್ ಜಾರಿ ಆಗಿತ್ತು. ಹಾಗಾಗಿ ಚಿತ್ರತಂಡ ಈಗಾಗಲೇ ಚಿತ್ರೀಕರಿಸಿದ್ದನ್ನು ಮತ್ತೆ ರೀ ಶೂಟ್ ಮಾಡಲು ಮುಂದಾಗಿದೆ. ಇನ್ನು ಗ್ರಾಫಿಕ್ಸ್ ಬಗ್ಗೆ ಟ್ರೋಲ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಇಡೀ ಗ್ರಾಫಿಕ್ಸ್ ಅನ್ನು ಬದಲಿಸಲಾಗುತ್ತಿದೆ. ಇದಕ್ಕೆ ಮತ್ತಷ್ಟು ಸಮಯ ಬೇಕಾಗಿದೆ. ಆದರೆ 'ಆದಿಪುರುಷ್' ಮತ್ತೆ ಪೋಸ್ಟ್‌ಪೋನ್ ಆಗುತ್ತೆ ಎನ್ನುವ ಸುದ್ದಿ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

  English summary
  With lot of reshoot work, Adipurush makers are planning to postpone Release Date once again. Know more.
  Monday, December 19, 2022, 6:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X