For Quick Alerts
  ALLOW NOTIFICATIONS  
  For Daily Alerts

  ದಿಲ್ ರಾಜುಗಾಗಿ ಮತ್ತೆ ಒಂದೇ ವೇದಿಕೆ ಏರುತ್ತಾರಾ ಯಶ್-ಸೂರ್ಯ?

  |

  'ಕೆಜಿಎಫ್ 2' ಸಿನಿಮಾ ಬಳಿಕ ಯಶ್ ಪ್ಯಾನ್‌ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಈಗ ಯಾವುದೇ ಭಾಷೆಯ ಸಿನಿಮಾವಿದ್ದರೂ ಅಲ್ಲಿ ರಾಕಿಂಗ್ ಸ್ಟಾರ್ ಯಶ್ ಇರಲೇಬೇಕು. ಇತ್ತೀಚೆಗೆ 'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದರು.

  ಈಗ ಯಶ್ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರೋ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ಯಶ್ ಹಾಗೂ ಸೂರ್ಯ ಇಬ್ಬರೂ ಒಂದೇ ವೇದಿಕೆ ಹಂಚಿಕೊಳ್ಳುತ್ತಿರೋ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಸುದ್ದಿ ಓಡಾಡುತ್ತಿದೆ.

  'ಇಡೀ ಕರ್ನಾಟಕಕ್ಕೆ ಕರ್ನಾಟಕದ ಮಗ ಅನ್ನೋ ಫೀಲಿಂಗ್.. ಅಪ್ಪುಗೆ ಮಾತ್ರ ಸಿಗೋದು'-ಯಶ್'ಇಡೀ ಕರ್ನಾಟಕಕ್ಕೆ ಕರ್ನಾಟಕದ ಮಗ ಅನ್ನೋ ಫೀಲಿಂಗ್.. ಅಪ್ಪುಗೆ ಮಾತ್ರ ಸಿಗೋದು'-ಯಶ್

  ಟಾಲಿವುಡ್‌ನ ಸ್ಟಾರ್ ನಿರ್ಮಾಪಕ ದಿಲ್‌ ರಾಜುಗಾಗಿ ಯಶ್ ಹಾಗೂ ತಮಿಳಿನ ಸ್ಟಾರ್ ಹೀರೊ ಸೂರ್ಯ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಅಷ್ಟಕ್ಕೂ ಆ ಯಾವ ಕಾರ್ಯಕ್ರಮ ಯಾವುದು? ಯಾವ ಸಿನಿಮಾಗಾಗಿ ಬರುತ್ತಿದ್ದಾರೆ? ಟಾಲಿವುಡ್‌ನಲ್ಲಿ ಓಡಾಡುತ್ತಿರೋ ಸುದ್ದಿಯೇನು? ಅಂತ ತಿಳಿಯಲು ಮುಂದೆ ಓದಿ.

  ಒಂದೇ ವೇದಿಕೆಯಲ್ಲಿ ಯಶ್-ಸೂರ್ಯ

  ಒಂದೇ ವೇದಿಕೆಯಲ್ಲಿ ಯಶ್-ಸೂರ್ಯ

  ದಿಲ್ ರಾಜು ಎರಡು ಬಿಗ್ ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ದಳಪತಿ ವಿಜಯ್ ಅಭಿನಯದ 'ವಾರಸುಡು'. ಇನ್ನೊಂದು ರಾಮ್‌ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ 'ಆರ್‌ಸಿ 15'. ಈ ಎರಡೂ ಸಿನಿಮಾಗಳೂ ಟಾಲಿವುಡ್‌ನ ಬಿಗ್ ಬಜೆಟ್‌ ಸಿನಿಮಾಗಳು. ರಾಮ್‌ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ ಸಿನಿಮಾ 'ಆರ್‌ಸಿ 15' ಮೇಲೆ ನಿರೀಕ್ಷೆ ಹೆಚ್ಚಿದೆ. ಸದ್ಯ ಈ ಸಿನಿಮಾದ ಟೈಟಲ್‌ ಇನ್ನೂ ಅನೌನ್ಸ್ ಆಗಿಲ್ಲ. ಈ ಟೈಟಲ್‌ ಲಾಂಚ್‌ಗೆ ಮುಖ್ಯ ಅತಿಥಿಗಳಾಗಿ ಯಶ್ ಹಾಗೂ ಸೂರ್ಯ ಕಾಣಿಸಿಕೊಳ್ಳಲಿದ್ದಾರಂತೆ.

  'ಆರ್‌ಸಿ 15' ಟೈಟಲ್ ಲಾಂಚ್ ಹೈಲೈಟ್

  'ಆರ್‌ಸಿ 15' ಟೈಟಲ್ ಲಾಂಚ್ ಹೈಲೈಟ್

  ಶಂಕರ್ ಸಿನಿಮಾ ಶುರುವಾಗುವುದಕ್ಕಿಂತ ಮುನ್ನವೇ ಟೈಟಲ್ ಅನೌನ್ಸ್ ಮಾಡುತ್ತಾರೆ. ಆದರೆ, ಈ ಬಾರಿ ಇನ್ನೂ ಟೈಟಲ್ ಘೋಷಣೆ ಮಾಡಿಲ್ಲ. ಹೀಗಾಗಿ ಈ ರೇರ್ ಕಾಂಬಿನೇಷನ್‌ ಸಿನಿಮಾದ ಟೈಟಲ್ ಏನು? ಅನ್ನೋ ಕುತೂಹಲವಿದೆ. ಆದರೆ, ಟೈಟಲ್ ಲಾಂಚ್‌ ಕಾರ್ಯಕ್ರಮವನ್ನು ಅನ್ನುಹೈದರಾಬಾದ್ ಹಾಗೂ ಮುಂಬೈನಲ್ಲಿ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಯಶ್ ಹಾಗೂ ಸೂರ್ಯರನ್ನು ಮುಖ್ಯ ಅತಿಥಿಗಳಾಗಿ ಕರೆದುಕೊಂಡು ಬರುವುದಕ್ಕೆ ಮುಂದಾಗಿದ್ದಾರೆ.

  ಆರ್‌ಸಿ 15 ಟೈಟಲ್ ಲಾಂಚ್ ಯಾವಾಗ?

  ಆರ್‌ಸಿ 15 ಟೈಟಲ್ ಲಾಂಚ್ ಯಾವಾಗ?

  ದಿಲ್‌ ರಾಜು ಒಮ್ಮೆಗೆ ಎರಡೆರಡು ಸಿನಿಮಾಗಳಿಗೆ ಕೈ ಹಾಕಿದ್ದಾರೆ. ಮೊದಲು ದಳಪತಿ ವಿಜಯ್ ನಟಿಸುತ್ತಿರುವ 'ವಾರಸುಡು' ಚಿತ್ರವನ್ನು ರಿಲೀಸ್ ಮಾಡಲಿದ್ದಾರೆ. ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು, 2023 ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ 'ವಾರಸುಡು' ಸಿನಿಮಾ ರಿಲೀಸ್ ಆಗುವುದಕ್ಕೆ ಕಾಯುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ 'ಆರ್‌ಸಿ 15' ಬಿಡುಗಡೆ ಟೈಟಲ್ ಹಾಗೂ ಫಸ್ಟ್‌ ಲುಕ್ ಅನ್ನು ರಿಲೀಸ್ ಮಾಡಲಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಯಶ್ ಆಗಲಿ, ದಿಲ್ ರಾಜು ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

  'ವಾರಸುಡು' ಭರ್ಜರಿ ಬ್ಯುಸಿನೆಸ್

  'ವಾರಸುಡು' ಭರ್ಜರಿ ಬ್ಯುಸಿನೆಸ್

  ದಿಲ್ ರಾಜು ಈಗಾಗಲೇ 'ವಾರಸುಡು' ಸಿನಿಮಾದಿಂದ ಭರ್ಜರಿ ಹಣ ಜೇಬಿಗಿಳಿಸಿಕೊಂಡಿದ್ದಾರೆ ಅನ್ನೋ ಚರ್ಚೆ ಕೂಡ ಆಗುತ್ತಿದೆ. ಕೇವಲ ಓವರ್‌ಸೀಸ್ ಹಕ್ಕುಗಳೇ ಸುಮಾರು 15 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಸ್ಯಾಟಲೈಟ್ ಹಾಗೂ ಇತರೆ ಹಕ್ಕುಗಳು ಸುಮಾರು 400 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ. ಇತ್ತ ಯಶ್ ಹಾಗೂ ಸೂರ್ಯ ಮತ್ತೆ ಒಂದೇ ವೇದಿಕೆ ಏರುತ್ತಿರುವ ಬಗ್ಗೆ ಟಾಲಿವುಡ್‌ನಲ್ಲಿ ವರದಿಯಾಗಿದೆ. ಹೀಗಾಗಿ 2023 ಆರಂಭದಲ್ಲಿ ದಿಲ್ ರಾಜ್‌ ಫುಲ್ ಬ್ಯುಸಿ ಅನ್ನೋದು ಕನ್ಫರ್ಮ್ ಆಗಿದೆ.

  ಬಾಲಿವುಡ್ ಅಂಗಳಕ್ಕೆ ಜಿಗಿತ್ತಾರಾ ಯಶ್? ದೇವ್ ಅಥವಾ ಕರ್ಣ ಆಗ್ತಾರಾ ರಾಕಿಂಗ್ ಸ್ಟಾರ್?ಬಾಲಿವುಡ್ ಅಂಗಳಕ್ಕೆ ಜಿಗಿತ್ತಾರಾ ಯಶ್? ದೇವ್ ಅಥವಾ ಕರ್ಣ ಆಗ್ತಾರಾ ರಾಕಿಂಗ್ ಸ್ಟಾರ್?

  English summary
  Yash And Surya Will Be The Chief Guest For Ram Charan Shankar Movie RC15 Title Launch, Know More.
  Monday, October 31, 2022, 19:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X