»   » ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!

ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!

Posted By: Pavithra
Subscribe to Filmibeat Kannada
ಮತ್ತೆ ಯಶ್ ಯೋಗಿ ಗೆಳೆತನ ಆರಂಭ | FIlmibeat Kannada

ಸ್ಯಾಂಡಲ್ ವುಡ್ ನಲ್ಲಿ ಕುಚುಕು ಗೆಳೆಯರಿಗೇನು ಕಡಿಮೆ ಇಲ್ಲ. ವಿಷ್ಣುವರ್ಧನ್-ಅಂಬರೀಶ್, ದರ್ಶನ್-ಸುದೀಪ್, ಶಿವರಾಜ್ ಕುಮಾರ್-ಉಪೇಂದ್ರ....ಹೀಗೆ ಆಲ್ ಟೈಂ ಫ್ರೆಂಡ್ಸ್ ಆಗಿ ಇರುವ ಸ್ಟಾರ್ ನಟ-ನಟಿಯರು ಚಂದನವನದಲ್ಲಿದ್ದಾರೆ.

ಈ ದಿಗ್ಗಜರ ಸಾಲಿನಲ್ಲಿದ್ದ ಮತ್ತೊಂದು ಜೋಡಿ ಲೂಸ್ ಮಾದ ಯೋಗಿ ಮತ್ತು ರಾಕಿಂಗ್ ಸ್ಟಾರ್ ಯಶ್. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇತ್ತಂದ್ರೆ, ಯಶ್ ಚಿತ್ರೀಕರಣದಲ್ಲಿದ್ದಾಗ ಶೂಟಿಂಗ್ ಸೆಟ್ ಗೆ ಯೋಗಿ ಭೇಟಿಕೊಟ್ಟು ಟೈಂ ಪಾಸ್ ಮಾಡ್ತಿದ್ರು. ಯೋಗಿ ಶೂಟಿಂಗ್ ನಲ್ಲಿದ್ದಾಗ ಯಶ್ ಭೇಟಿ ಕೊಟ್ಟು ಟೈಂ ಪಾಸ್ ಮಾಡ್ತಿದ್ರು.

ಇನ್ನು ಇಬ್ಬರಿಗೂ ಶೂಟಿಂಗ್ ಇಲ್ಲದ ಟೈಂನಲ್ಲಿ ಹೇಳೋದೆ ಬೇಡ ಬಿಡಿ. ಒಂದು ಕಾಲದಲ್ಲಿ ಹೀಗಿದ್ದ ಸ್ನೇಹಿತರು ಕೆಲ ವರ್ಷಗಳು ಕಳೆದಂತೆ ಇಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿತ್ತು. ಮುಂದೆ ಓದಿ.....

ಮುನಿಸಿಕೊಂಡಿದ್ದ ರಾಕಿಂಗ್ ಸ್ಟಾರ್-ಲೂಸ್ ಮಾದ

ಯಶ್ ಮತ್ತು ಯೋಗಿ ಇಬ್ಬರು ಒಂದೇ ಸಂದರ್ಭದಲ್ಲಿ ಅಂದ್ರೆ ಎರಡು ಮೂರು ವರ್ಷ ಅಂತರದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟವರು. ಇಬ್ಬರು ಒಂದೇ ವಯಸ್ಸಿನವರು ಆಗಿರೋದ್ರಿಂದ ಇಬ್ಬರು ಒಳ್ಳೆ ಫ್ರೆಂಡ್ಸ್ ಆಗಿದ್ದರು. ಆದ್ರೆ ವರ್ಷಗಳು ಕಳೆದಂತೆ ಇಬ್ಬರಲ್ಲಿ ಮನಸ್ಥಾಪಗಳು ಹೆಚ್ಚಾಗುವುದಕ್ಕೆ ಪ್ರಾರಂಭ ಆಯ್ತು.

ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!

'EGO' ಪ್ರಾಬ್ಲಂ ಕಾಡಿತ್ತಾ?

ಆ ಸಂದರ್ಭದಲ್ಲಿ ಇಬ್ಬರು ಹಿಟ್ ಚಿತ್ರಗಳನ್ನ ನೀಡುತ್ತಾ ಯಶಸ್ಸು ಕಂಡರು. ಆದ್ರೆ, ಇಬ್ಬರಲ್ಲೂ ಇದ್ದ ಸಣ್ಣ Ego ಇವರಿಬ್ಬರ ಸ್ನೇಹಕ್ಕೆ ಮುಳುವಾಯ್ತು ಎನ್ನುವ ಮಾತುಗಳು ಕೇಳಿ ಬಂದಿದ್ವು.

ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!

ಮಾಧ್ಯಮದವರನ್ನ ಬಕ್ರ ಮಾಡಿದ್ದ ಜೋಡಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜಧಾನಿ' ಚಿತ್ರ ತೆರೆಗೆ ಬಂದ ಸಂದರ್ಭದಲ್ಲಿ ಈ ಇಬ್ಬರ ಸ್ನೇಹ ಎಷ್ಟರ ಮಟ್ಟಿಗಿತ್ತು ಅಂದ್ರೆ ಪ್ರತಿ ದಿನ ಮೀಟ್ ಮಾಡೋದು, ಹರಟೆ ಹೊಡೆಯೋದು ಈ ಮಟ್ಟಕ್ಕೆ ಇಬ್ಬರು ಫ್ರೆಂಡ್ಸ್ ಆಗಿದ್ದರು. ಅದಷ್ಟೇ ಅಲ್ಲದೆ ಇಬ್ಬರನ್ನು ಏಪ್ರಿಲ್ ಫೂಲ್ ಮಾಡೋಕೆ ಹೋಗಿದ್ದ ಮಾಧ್ಯಮದವರನ್ನೇ ಪ್ಲಾನ್ ಮಾಡಿ ಬಕ್ರ ಮಾಡಿ ಎಂಜಾಯ್ ಮಾಡಿದ್ದರು ಯಶ್ ಮತ್ತು ಯೋಗಿ. ಅಷ್ಟು ಚೆನ್ನಾಗಿದ್ದ ಸ್ನೇಹಿತರು ನಂತರ ಒಬ್ಬರನೊಬ್ಬರು ಮುಖ ನೋಡದಂತೆ ಆಗಿಬಿಟ್ಟರು ಎನ್ನುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.

ಯಶ್ ಮದುವೆಗೆ ಬರಲಿಲ್ಲಾ ಯೋಗಿ

ರಾಕಿಂಗ್ ಸ್ಟಾರ್ ಯಶ್ ಮದುವೆಯಲ್ಲಿ ಯೋಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯೋಗಿಗೆ ಆಹ್ವಾನವೇ ಹೋಗಿರಲಿಲ್ವಾ ಅಥವಾ ಹೋಗಿದ್ದರು ಶೂಟಿಂಗ್ ಬಿಜಿ ಅಂತ ಬರಲಿಲ್ಲವಾ ಗೊತ್ತಿಲ್ಲ. ಆದ್ರೆ, ಮದುವೆ ಹಾಗೂ ಆರತಕ್ಷತೆಯಲ್ಲಿ ಯೋಗಿ ಗೈರು ಮಾತ್ರ ಎದ್ದು ಕಾಣಿಸಿತ್ತು. ಇದು ಕೂಡ ಇವರಿಬ್ಬರ ಮುನಿಸಿಗೆ ಸಾಕ್ಷಿಯಾಗಿತ್ತು.

ಲೂಸ್ ಮದುವೆಗೆ ಬಂದ ರಾಕಿಂಗ್ ಸ್ಟಾರ್

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗಿ ಮತ್ತು ಸಾಹಿತ್ಯ ಮದುವೆಗೆ ರಾಕಿಂಗ್ ಸ್ಟಾರ್ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೀಗಾಗಿ, ಇವರಿಬ್ಬರ ನಡುವಿನ ಸ್ನೇಹಕ್ಕೆ ಮತ್ತೆ ಮರು ಜೀವ ಬಂದಿದೆ ಎನ್ನಲಾಗಿದೆ. ಬಹುಕಾಲದ ಸ್ನೇಹಿತನಿಗೆ ಶುಭಾಶಯ ಹೇಳಿ ಸಿಹಿಯಾದ ಅಪ್ಪುಗೆ ಕೊಟ್ಟು ಎಲ್ಲವನ್ನು ಮರೆತು ಮುಂದುವರೆಯೋಣ ಎಂದಿದ್ದಾರೆ. ಒಟ್ನಲ್ಲಿ, ಇಷ್ಟು ದಿನ ಹರಿದಾಡ್ತಿದ್ದ ಅಂತೆ ಕಂತೆಗಳಿಗೆ ಯಶ್ ಮತ್ತು ಯೋಗಿ ಜೋಡಿ ತೆರೆ ಎಳೆದಿದ್ದಾರೆ.

ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗೀಶ್-ಸಾಹಿತ್ಯ

English summary
Its took more than 5 year rebuilt the friendship bridge between Yash and Yogi. ಐದು ವರ್ಷದ ನಂತ್ರ ನಟ ಯಶ್ ಮತ್ತು ಯೋಗೀಶ್ ನಡುವೆ ಸ್ನೇಹ ಚಿಗುರಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada