Don't Miss!
- News
ವಿಧಾನಸಭಾ ಚುನಾವಣೆ: ಮತ್ತೆ ರಾಜ್ಯಕ್ಕೆ ಅಮಿತ್ ಶಾ, ಮತ ಬೇಟೆಗೆ ಕುಂದಗೋಳದಲ್ಲಿ ಬೃಹತ್ ಸಾರ್ವಜನಿಕ ಸಭೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್ ಮನೆ ಬಾಡಿಗೆ ರಂಪ ; ಹಿಂದಿರುವ ಪಿತೂರಿ ಯಾರದ್ದು?
ರಾಕಿಂಗ್ ಸ್ಟಾರ್ ಯಶ್....ಸ್ಯಾಂಡಲ್ ವುಡ್ ನ ಸದ್ಯದ ಬಿಜಿಯೆಸ್ಟ್ ಸ್ಟಾರ್.! ಅಭಿಮಾನಿಗಳ ಬಳಗದಲ್ಲಾಗಲಿ, ಯಶಸ್ಸಿನ ಏಣಿಯಲ್ಲಾಗಲಿ, ಗೆಲ್ಲುವ ಲೆಕ್ಕಾಚಾರದಲ್ಲಾಗಲಿ, ಎಲ್ಲಾದರಲ್ಲೂ ಮಿಕ್ಕೆಲ್ಲಾ ಸ್ಟಾರ್ ಗಳಿಗಿಂತಲೂ ಈಗ ಒಂದು ಕೈ ಮೇಲಿರುವ ನಟ ಯಶ್..!
ಗಾಡ್ ಫಾದರ್ ಇಲ್ಲದೇ ಗಾಂಧಿನಗರಕ್ಕೆ ಕಾಲಿಟ್ಟ ಯಶ್, ರಾಕಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ಅಚ್ಚರಿ. ಇಂತಿಪ್ಪ ಸ್ಯಾಂಡಲ್ ವುಡ್ ನ ಯೂತ್ ಐಕಾನ್, ಇತ್ತೀಚೆಗೆ ಬೇಡದ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
ದಿಢೀರ್ ಅಂತ ಬಂದು ಯಾರೋ ಯಶ್ ಕಾರ್ ಮೇಲೆ ದಾಳಿ ನಡೆಸುತ್ತಾರೆ. ಗಾಂಧಿನಗರದ ಹಿಂದುಮುಂದು ಗೊತ್ತಿಲ್ಲದವರು 'ಮಂಡ್ಯ ಸ್ಟಾರ್' ನೆಪದಲ್ಲಿ ಯಶ್ ವಿರುದ್ಧ ಪ್ರತಿಭಟನೆ ಮಾಡ್ತಾರೆ. ವರ್ಷದಿಂದ ಸುಮ್ಮನಿದ್ದ ಮನೆ ಮಾಲೀಕರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. [ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"]
ಇದನ್ನೆಲ್ಲಾ ನೋಡುತ್ತಿರುವವರು, ''ಇದೆಲ್ಲಾ ಯಾರೋ ರೂಪಿಸಿರುವ ಮಾಸ್ಟರ್ ಪ್ಲಾನ್'. ಯಶ್ ಯಶಸ್ಸನ್ನ ಸಹಿಸಲಾಗದವರು ಪಿತೂರಿ ನಡೆಸುತ್ತಿದ್ದಾರೆ'' ಅಂತಲೇ ಮಾತನಾಡಿಕೊಳ್ಳುತ್ತಿದ್ದಾರೆ. ನೀವು ನಂಬುತ್ತೀರೋ, ಬಿಡುತ್ತೀರೋ...ಗಾಂಧಿನಗರದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿರುವ ವಿಚಾರ ಇದೇ. ಮುಂದೆ ಓದಿ....

ಯಾರ ತಂಟೆಗೂ ಯಶ್ ಹೋಗಲ್ಲ.!
ಕನ್ನಡ ಚಿತ್ರರಂಗಕ್ಕೆ ಯಶ್ ಕಾಲಿಟ್ಟು ಹತ್ತತ್ರ ಎಂಟು ವರ್ಷಗಳಾಗಿವೆ. ಇಷ್ಟು ದಿವಸಗಳಲ್ಲಿ ಯಾವುದೇ ವಿವಾದಗಳನ್ನ ಯಶ್ ಮೈಮೇಲೆ ಎಳೆದುಕೊಂಡಿಲ್ಲ. ಇನ್ನೊಬ್ಬ ಸ್ಟಾರ್ ವಿರುದ್ಧ ತೊಡೆ ತಟ್ಟಿ ನಿಂತಿಲ್ಲ. ಎಲ್ಲಾ ನಟರ ಜೊತೆ ಅನ್ಯೋನ್ಯವಾಗಿರುವ ಯಶ್ ಯಾವಾಗಲೂ ತಾನಾಯ್ತು, ತನ್ನ ಕೆಲಸ ಆಯ್ತು ಅಂತಿರುವ ವ್ಯಕ್ತಿ. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

ಯಾರ ದ್ವೇಷ ಕಟ್ಟಿಕೊಂಡಿಲ್ಲ.!
ತೆರೆ ಮೇಲೆ 'ಅಣ್ತಮ್ಮ' ಅಂತ ಬಾಯ್ತುಂಬ ಹೇಳುವ ಯಶ್ ನಿಜಜೀವನದಲ್ಲೂ ಅಷ್ಟೇ ಸ್ನೇಹಜೀವಿ. ಎಲ್ಲಾ ನಟರನ್ನೂ ಅಣ್ತಮ್ಮಂದಿರಂತೆ ಕಾಣುವ ಯಶ್, ಇಂಡಸ್ಟ್ರಿಯಲ್ಲಿ ಯಾರನ್ನೂ ದ್ವೇಷಿಸುತ್ತಿಲ್ಲ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಶೂಟಿಂಗ್ ಮಾಡುತ್ತಿರುವ ಸೆಟ್ ಗೆ ತೆರಳಿ ಯಶ್ ಮಾತನಾಡಿಸುತ್ತಾರೆ. ಸುದೀಪ್ ಅಭಿನಯದ 'ರನ್ನ' ಚಿತ್ರವನ್ನ ಅಭಿಮಾನಿಗಳ ಜೊತೆ ಕೂತು ವೀಕ್ಷಿಸಿದ್ದಾರೆ. 'ನಾವೆಲ್ಲರೂ ಒಂದೇ' ಅಂತ ಹೋದಲ್ಲೆಲ್ಲಾ ಅಭಿಮಾನಿಗಳಿಗೆ ಸ್ಪಷ್ಟ ಪಡಿಸುತ್ತಾರೆ. [ಬೀದಿಗಿಳಿದಿರುವ ನಿರ್ಮಾಪಕರ ಬಗ್ಗೆ ಯಶ್ ಹೇಳೋದೇನು?]

ಹಾಗಾದ್ರೆ, ಕಾರ್ ಮೇಲೆ ದಾಳಿ ಮಾಡಿದವರಾರು?
ಮೂಲಗಳ ಪ್ರಕಾರ, ಯಶ್ ಕಾರ್ ಮೇಲೆ ದಾಳಿ ಮಾಡಿದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು. ಹಾಗಂತ ಟಿವಿ 9 ಸುದ್ದಿ ವಾಹಿನಿ ವರದಿ ಮಾಡಿತ್ತು. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಂತ್ರ ಯಶಸ್ಸಿನ ಶಿಖರ ಏರಿರುವ ಯಶ್ ಮೇಲೆ ಏಕಾಏಕಿ ದಾಳಿ ಆದ ಬಳಿಕ ಗನ್ ಮ್ಯಾನ್ ಒಬ್ಬರನ್ನ ಯಶ್ ನೇಮಿಸಿಕೊಂಡಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

ನಡೆಯಿತು 'ಮಂಡ್ಯ ಸ್ಟಾರ್'ಗಳ ಮಸಲತ್ತು.!
'ಮಂಡ್ಯ ಸ್ಟಾರ್' ಸಿನಿಮಾ ಮಾಡ್ತೀವಿ. ನಾವೆಲ್ಲಾ ಹೊಸಬರು ಮತ್ತು ಯುವ ಪ್ರತಿಭೆಗಳು ಅಂತ ಹೇಳಿಕೊಂಡು ಬಂದ ಗಾಂಧಿನಗರದ ಪರಿಚಯವಿಲ್ಲದವರು ಯಶ್ ವಿರುದ್ಧ ಪ್ರತಿಭಟನೆ ಮಾಡಿದರು. ಮಂಡ್ಯ ಜನತೆಗೆ ಮತ್ತು ರೈತರಿಗೆ ಯಶ್ ಅವಮಾನ ಮಾಡಿದ್ದಾರೆ ಅಂತ ಒಂದು ದಿನ ಬೀದಿಗಿಳಿದ ಇವರೆಲ್ಲಾ ಈಗ ನಾಪತ್ತೆ.! [ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]

ಮನೆ ಬಾಡಿಗೆ ಗಲಾಟೆ ಈಗ ಯಾಕೆ?
ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಹೇಳುವ ಪ್ರಕಾರ, ಕಳೆದ ಒಂದು ವರ್ಷದಿಂದ ಯಶ್ ಮತ್ತು ಕುಟುಂಬ ಮನೆ ಬಾಡಿಗೆ ಕಟ್ಟಿಲ್ಲ. 2011ನೇ ಇಸವಿಯಿಂದಲೂ, ಸಮಯಕ್ಕೆ ಸರಿಯಾಗಿ ಬಾಡಿಗೆ ನೀಡುತ್ತಿಲ್ಲ. ಹಾಗಾದ್ರೆ, ಅಂದೇ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕಿತ್ತಲ್ಲವೇ. ಬಾಕಿ ಮೊತ್ತ 21 ಲಕ್ಷ ರೂಪಾಯಿ ಮುಟ್ಟುವವರೆಗೂ ಯಾಕೆ ಸುಮ್ಮನಿದ್ದರು? ['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

ಮನೆಯಲ್ಲಿ ಯಶ್ ಮತ್ತು ಕುಟುಂಬ ವಾಸವಿಲ್ಲ..!
ನಿಜಹೇಳ್ಬೇಕಂದ್ರೆ, ಇಂದು ವಿವಾದ ಸೃಷ್ಟಿಸುತ್ತಿರುವ ಬನಶಂಕರಿ 3ನೇ ಹಂತ, 3ನೇ ಬ್ಲಾಕ್, 5 ನೇ ಕ್ರಾಸ್ ನಲ್ಲಿರುವ 755 ನೇ ನಂಬರ್ ಮನೆಯಲ್ಲಿ ಯಶ್ ಮತ್ತು ಕುಟುಂಬ ವಾಸವಿಲ್ಲ. ಅಲ್ಲಿಂದ ಕೊಂಚ ದೂರದಲ್ಲಿ, ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಯಶ್ ಮತ್ತು ಕುಟುಂಬ ವಾಸವಿದೆ. ಈ ಮನೆ ಖಾಲಿ ಇದೆ.

ಮನೆ ಮಾಲೀಕರು ಹೇಳಿದ್ದೂ ಅದೇ..!
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡುತ್ತಾ, ಮನೆ ಮಾಲೀಕರಾದ ಡಾ.ವನಜಾ ಕೂಡ 'ಮನೆ ಖಾಲಿ ಇದೆ, ಒಳಗೆ ಕತ್ತಲು', ಅನ್ನುವ ಮಾತನ್ನ ಸ್ಪಷ್ಟವಾಗಿ ಹೇಳಿದರು.

ದ್ವಂದ್ವ ಹೇಳಿಕೆಗಳು..!
ಒಮ್ಮೆ 'ಮನೆ ಖಾಲಿ ಇದೆ' ಅಂತ ಡಾ.ವನಜಾ ಹೇಳುತ್ತಾರೆ. 'ಸಡನ್ನಾಗಿ ಮನೆ ಖಾಲಿ ಮಾಡಿ ಅಂದ್ರೆ ನಮಗೆ ಆಗಲ್ಲ, ಸಮಯ ಬೇಕು' ಅಂತ ತಮ್ಮ ಸ್ವಂತ ಮನೆಯಲ್ಲಿ ವಾಸ ಇರುವ ಯಶ್ ತಾಯಿ ಪುಷ್ಪ ಹೇಳಿಕೆ ನೀಡುತ್ತಾರೆ. ಈ ದ್ವಂದ್ವ ಹೇಳಿಕೆಗಳು ನೋಡುವವರ ತಲೆಯಲ್ಲಿ ಹುಳ ಬಿಟ್ಟ ಹಾಗಾಗಿದೆ.

ಒಳಾಂಗಣ ವಿನ್ಯಾಸಕ್ಕೆ 40 ಲಕ್ಷ ಖರ್ಚು..!
ಯಶ್ ತಾಯಿ ಪುಷ್ಪ ಹೇಳುವ ಪ್ರಕಾರ, ಬನಶಂಕರಿ ಮನೆಯ ಒಳಾಂಗಣ ವಿನ್ಯಾಸವನ್ನ ಮನೆ ಮಾಲೀಕರ ಸಮ್ಮತಿ ಮೇಲೆ ಮಾಡಿಸಿದ್ದಂತೆ. ಅದಕ್ಕಂತ ಯಶ್ ಬರೋಬ್ಬರಿ 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.

ಮನೆಯನ್ನ ಆಫೀಸ್ ಮಾಡುವ ಯತ್ನ..!
ಮೂಲಗಳ ಪ್ರಕಾರ, ಯಶ್ ಗೆ ಆ ಮನೆ ಮೇಲೆ ಅಟ್ಯಾಚ್ಮೆಂಟ್ ಇದೆ. ಮನೆ ಲಕ್ಕಿ ಅನ್ನುವ ಕಾರಣಕ್ಕೆ ಅದನ್ನ ಬಿಟ್ಟುಕೊಡುವ ಮನಸ್ಸು ಅವರಿಗಿಲ್ಲ. ಅದನ್ನ ಸ್ವಂತಕ್ಕೆ ಮಾಡಿಕೊಂಡು, ಆಫೀಸ್ ಆಗಿ ಪರಿವರ್ತಿಸಬೇಕು ಅನ್ನುವ ಪ್ಲಾನ್ ನಲ್ಲಿದ್ದಾರೆ.

ಮಾಲೀಕರ ಕಿವಿಗೆ ಊದಿದವರು ಯಾರು?
ಒಳಾಂಗಣ ವಿನ್ಯಾಸ ಬದಲಿಸಿದಾಗ ಯಶ್ ಮತ್ತು ಕುಟುಂಬದೊಂದಿಗೆ ಚೆನ್ನಾಗಿದ್ದ ಮನೆ ಮಾಲೀಕರು ಈಗ ಕ್ಯಾತೆ ತೆಗೆದಿದ್ದಾರೆ. ವರ್ಷದಿಂದ ಮನೆ ಖಾಲಿ ಇದ್ದರೂ, ಬಾಡಿಗೆ ಕೊಡುವುದಕ್ಕೆ ಯಶ್ ಮತ್ತು ಕುಟುಂಬ ರೆಡಿಯಿದೆ. ಆದ್ರೆ, ಅದನ್ನ ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ಮಾಲೀಕರು ಬಂದಿಲ್ಲವಂತೆ. 'ನಿಮ್ಮ ಮಗನ ಇಮೇಜ್ ಡ್ಯಾಮೇಜ್ ಮಾಡ್ತೀವಿ' ಅಂತ ಮಾಲೀಕರು ಹೇಳಿದ್ದಾರಂತೆ. ಅನ್ಯೋನ್ಯವಾಗಿದ್ದ ಮಾಲೀಕರು ಮತ್ತು ಬಾಡಿಗೆದಾರರ ಮಧ್ಯೆ ಯಾರೋ ಬತ್ತಿ ಇಟ್ಟಿದ್ದಾರೆ. ಅದಕ್ಕೆ ಇಷ್ಟೆಲ್ಲಾ! ಅನ್ನೋದು ಈಗ ಎದ್ದಿರುವ ಅನುಮಾನ.

ಸಮಸ್ಯೆ ಬಗೆಹರಿಸಿ ಅಂತ ಯಶ್ ಹೇಳಿದ್ದರಂತೆ..!
ಬಾಡಿಗೆ ವಿಷಯವಾಗಿ ಕಿತ್ತಾಟ ನಡೆದಾಗ, ಬಾಡಿಗೆ ಕ್ಲಿಯರ್ ಮಾಡ್ತೀವಿ. ನಮಗೆ ಮನೆ ಬೇಕು ಅಂತ ಯಶ್ ಹೇಳಿದ್ದರಂತೆ. ಆಗ, 'ಯಶ್ ಗೂ ಇದಕ್ಕೂ ಸಂಬಂಧ ಇಲ್ಲ. ಅವರ ಇಮೇಜ್ ಡ್ಯಾಮೇಜ್ ಮಾಡ್ತೀವಿ' ಅಂತ ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಗೆ ತೆರಳಿದವರು ಮನೆ ಮಾಲೀಕರು.

ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕ್ಲೋಸ್.!
ಮನೆ ಮಾಲೀಕರು ಮಾಡಿರುವ ಆರೋಪದಲ್ಲಿ ಸತ್ಯ ಇಲ್ಲ ಅನ್ನುವ ಕಾರಣಕ್ಕೆ ಗಿರಿನಗರ ಪೊಲೀಸ್ ಅಧಿಕಾರಿಗಳು ಮಾರ್ಚ್ ನಲ್ಲೇ ಕೇಸ್ ಕ್ಲೋಸ್ ಮಾಡಿದ್ದಾರೆ. ಹೀಗಿದ್ದರೂ, ಯಾರದ್ದೋ ಕುಮ್ಮಕ್ಕಿನಿಂದ ಮನೆ ಮಾಲೀಕರು ಕೋರ್ಟ್ ಮೆಟ್ಟಿಲೇರಿ ಸುಖಾಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ ಅನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು.

ಇದು ಯಾರ ಪಿತೂರಿ?
ಯಶ್ ಯಶಸ್ಸನ್ನ ಸಹಿಸಲಾಗದವರು ಗಾಂಧಿನಗರದಲ್ಲಿ ಯಾರ್ಯಾರಿದ್ದಾರೆ ಅನ್ನೋದು ನಮಗಂತೂ ಗೊತ್ತಿಲ್ಲ. ಯಾವ ಹುತ್ತದಲ್ಲಿ ಯಾವ ಹಾವಿದೆ ಅಂತ ಯಾರೂ ಹೇಳೋಕೆ ಆಗಲ್ಲ. ಆದ್ರೆ, ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುವ ನಟ, ಕೇವಲ ಬಾಡಿಗೆ ವಿಚಾರಕ್ಕೆ ಕೋರ್ಟ್ ವರೆಗೂ ಕುಟುಂಬವನ್ನ ಕರೆದು ತಂದು, ಬೀದಿಯಲ್ಲಿ ಅವಮಾನ ಮಾಡಿಸಿಕೊಳ್ತಾರೆ ಅಂದ್ರೆ ಯಾರೂ ಸುಲಭವಾಗಿ ನಂಬಲ್ಲ. ಬೆಂಕಿ ಇಲ್ಲದೆ ಹೊಗೆ ಆಡಲ್ಲ ನಿಜ. ಆದ್ರೆ, ಬೆಂಕಿ ಹಚ್ಚಿದು ಯಾರು? ಅನ್ನೋದು ಈಗೆಲ್ಲರ ತಲೆಯಲ್ಲಿ ಕಾಡುತ್ತಿರುವ ಪ್ರಶ್ನೆ.