»   » ಪುನೀತ್ ಗೆ 'ಜಾಮೂನು' ತಿನ್ನಿಸಿದ್ದ ಭಟ್ಟರು, ಗಣೇಶ್ ಗೂ 'ಜಾಮೂನು' ಕೊಟ್ಟರು!

ಪುನೀತ್ ಗೆ 'ಜಾಮೂನು' ತಿನ್ನಿಸಿದ್ದ ಭಟ್ಟರು, ಗಣೇಶ್ ಗೂ 'ಜಾಮೂನು' ಕೊಟ್ಟರು!

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ಟರಿಗೆ 'ಜಾಮೂನು' ಅಂದ್ರೆ ಪಂಚ ಪ್ರಾಣ ಅನ್ಸುತ್ತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, 'ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ' ಹೋಗುವಷ್ಟು ಇಷ್ಟ ಅಂದ್ರೆ ನಂಬಲೇಬೆಕು ಬಿಡಿ.

ಭಟ್ಟರು ಅಲ್ಲಿ ತಿನ್ನಿಸಿದ್ದ 'ಜಾಮೂನು' ಅಷ್ಟೇನೂ ಟೇಸ್ಟ್ ಇರಲಿಲ್ಲ ಅನ್ಸುತ್ತೆ. ಅದಕ್ಕೀಗ ಹೊಸ ರುಚಿಯನ್ನ ಕೊಡೋಕೆ ಮತ್ತೆ 'ಜಾಮೂನು' ತಗೊಂಡು ಬರ್ತಿದ್ದಾರೆ.[ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]

ಈ ಬಾರಿ ಯೋಗರಾಜ್ ಭಟ್ಟರು 'ಜಾಮೂನು' ತಿನ್ನಿಸಲು ಮುಂದಾಗಿರುವುದು ಬೇರೆ ಯಾರಿಗೂ ಅಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ. ಹೌದು, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಮಳೆ ಹುಡುಗ ಗಣೇಶ್ ಜುಗಲ್ ಬಂದಿಯಲ್ಲಿ 'ಜಾಮೂನು' ತಯಾರಾಗುತ್ತಿದ್ದು, ಹೇಗಿರುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಮುಂದೆ ಓದಿ....

ಗಣೇಶ್-ಭಟ್ಟರ ಹೊಸ ಚಿತ್ರ

ನಟ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಬರಲಿದೆ ಎನ್ನುವುದು ಈ ಮುಂಚೆನೇ ಕನ್ ಫರ್ಮ್ ಆಗಿದೆ. 'ಮುಂಗಾರು ಮಳೆ', 'ಗಾಳಿಪಟ' ಚಿತ್ರದ ನಂತರ ಮೂರನೇ ಭಾರಿ ಇವರಿಬ್ಬರು ಒಂದಾಗಿದ್ದು, ಸ್ಯಾಂಡಲ್ ವುಡ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.[ಗಣೇಶ್ ಮತ್ತು ಯೋಗರಾಜ್ ಭಟ್ ಅಡ್ಡದಿಂದ ಇದೀಗ ಬಂದ ಸುದ್ದಿ ]

ಸ್ಕ್ರಿಪ್ಟ್ ಗೆ ಪೂಜೆ

ಭಟ್-ಗಣೇಶ್ ಜೋಡಿಯ ಹ್ಯಾಟ್ರಿಕ್ ಚಿತ್ರಕ್ಕೀಗ ಅಧೀಕೃತವಾಗಿ ಚಾಲನೆ ದೊರಕಿದ್ದು, ಚಿತ್ರದ ಸ್ಕ್ರಿಪ್ಟ್ ವರ್ಕ್ ಬಹುತೇಕ ಮುಗಿದಿದೆ. ಹಾಗಾಗಿ ಯೋಗರಾಜ್ ಮತ್ತು ಗಣೇಶ್‌ ಇಬ್ಬರೂ ಇತ್ತೀಚೆಗೆ ದೇವಸ್ಥಾನಕ್ಕೆ ಹೋಗಿ ಸ್ಕ್ರಿಪ್ಟ್ ಗೆ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ಪತ್ನಿ ಶಿಲ್ಪ ಗಣೇಶ್‌ ಕೂಡ ಭಾಗಿಯಾಗಿದ್ದಾರೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

ಟೈಟಲ್ ಫಿಕ್ಸ್!

ಚಿತ್ರದ ಕಥೆಯನ್ನ ಕಂಪ್ಲೀಟ್ ಮಾಡಿ ಮುಗಿಸಿರುವ ಸ್ಟಾರ್ ಜೋಡಿಗಳು, ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಗಣೇಶ್ ಹಾಗೂ ಭಟ್ಟರ ಹೊಸ ಚಿತ್ರಕ್ಕೆ 'ಜಾಮೂನು' ಅಂತ ಶೀರ್ಷಿಕೆ ಇಡಲಾಗಿದೆಯಂತೆ.

ಭಟ್ಟರು 'ಜಾಮೂನೂ' ಪ್ರಿಯರು

'ಪರಮಾತ್ಮ' ಚಿತ್ರದ ಹಾಡೊಂದರಲ್ಲಿ ಪುನೀತ್ ರಾಜ್ ಕುಮಾರ್ ಬಾಯಿಂದ 'ಕತ್ತಲಲ್ಲಿ ಕರಿಡಿಗೆ ಜಾಮೂನು ತಿನ್ನಿಸೋಕೆ ಯಾವತ್ತು ಹೋಗಬಾರದು ರೀ' ಅಂತ 'ಜಾಮೂನಿ'ನ ಬಗ್ಗೆ ಫಿಲಾಸಫಿ ಹೇಳಿಸಿದ್ದರು. ಈಗ, ತಮ್ಮ ಮುಂದಿನ ಚಿತ್ರಕ್ಕೆ 'ಜಾಮೂನು' ಅಂತಾನೆ ಟೈಟಲ್ ಇಡಲು ಮುಂದಾಗಿದ್ದಾರಂತೆ.

ಏನಿದು 'ಜಾಮೂನು' ಕಥೆ

ಗಣಿ ಹಾಗೂ ಭಟ್ಟರ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲೆರೆಡು ಚಿತ್ರಗಳು ಅಪ್ಪ ಪ್ರೇಮಕತೆಯನ್ನ ಹೊಂದಿದ್ದವು. ಈಗ ಮೂರನೇ ಚಿತ್ರವೂ ಬಹುತೇಕ ಲವ್ ಸ್ಟೋರಿನೇ ಆಗಿದ್ದು, ಅದಕ್ಕೆ ತಕ್ಕಂತೆ ಈಗ 'ಜಾಮೂನು' ಅಂತ ಟೈಟಲ್ ಇಡಲಾಗಿದೆಯಂತೆ.

ನಾಲ್ವರು ನಾಯಕಿಯರು

ಗಣಿ-ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ನಾಲ್ವರು ನಾಯಕಿಯರ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. ನಾಲ್ವರು ಹೀರೋಯಿನ್ ಗಳ ಪೈಕಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಲೀಡಿಂಗ್ ಇರುವ ನಟಿ ಜೊತೆ ಹೊಸಬರಿಗೂ ಚಾನ್ಸ್ ಸಿಗಲಿದೆ ಎನ್ನಲಾಗಿತ್ತು. ಆದ್ರೆ, ಯಾರು ಅಂತಿಮವಾಗಿದ್ದಾರೆ ಎಂಬುದು ಬಹಿರಂಗವಾಗಿಲ್ಲ.[ಗಣೇಶ್-ಯೋಗರಾಜ್ ಭಟ್ ಹ್ಯಾಟ್ರಿಕ್ ಸಿನಿಮಾ: ನಾಯಕಿ ಯಾರು?]

ಜಂಟಿ ನಿರ್ಮಾಣ

ಈ ಚಿತ್ರವನ್ನ ಯೋಗರಾಜ್ ಮೂವೀಸ್‌ ಮತ್ತು ಗೋಲ್ಡನ್‌ ಮೂವೀಸ್‌ ಬ್ಯಾನರ್‌ನಡಿ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಣೆ ಹಾಗೂ ಭಟ್ ಸಾಹಿತ್ಯ ಬರೆಯಲಿದ್ದಾರೆ.

'ಜಾಮೂನು' ಪಕ್ಕಾ!

ಡಿಸೆಂಬರ್ ನಲ್ಲಿ ಸಿನಿಮಾ ಶುರು ಮಾಡುವ ತಯಾರಿಯಲ್ಲಿರುವ ಸ್ಟಾರ್ ಡೈರೆಕ್ಟರ್ ಹಾಗೂ ಸ್ಟಾರ್ ನಟ ಚಿತ್ರದ ಟೈಟಲ್ ಬಗ್ಗೆ ಹಾಗೂ ನಾಯಕಿಯರ ಬಗ್ಗೆ ಏನೂ ಸುಳಿವು ಬಿಟ್ಟುಕೊಟ್ಟಿಲ್ಲ. ಆದ್ರೆ, ಭಟ್ಟರ ಬಳಗದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಗಣೇಶ್ ಅವರಿಗೆ ಭಟ್ಟರು 'ಜಾಮೂನು' ತಿನ್ನಿಸೋದು ಖಚಿತ ಎನ್ನಲಾಗುತ್ತಿದೆ.

English summary
According to the sources, Director Yogaraj Bhat and Kannada Actor Ganesh's Hattrick Combination Movie is titled as 'Jaamunu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada