»   » ರಾಗಿಣಿ ಬೆರಳಿಗೆ ಉಂಗುರ; ಯೋಗೇಶ್ ಮೇಲೆ ಕಣ್ಣು!

ರಾಗಿಣಿ ಬೆರಳಿಗೆ ಉಂಗುರ; ಯೋಗೇಶ್ ಮೇಲೆ ಕಣ್ಣು!

Posted By:
Subscribe to Filmibeat Kannada

ಲೂಸ್ ಮಾದ ಯೋಗೇಶ್ ಹಾಗೂ ರಾಗಿಣಿ ದ್ವಿವೇದಿ ನಟನೆಯ 'ಬಂಗಾರಿ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚಿಗೆ ನಡೆಯಿತು. ಆ ದಿನ ಆಡಿಯೋ ಬಿಡುಗಡೆಗಿಂತ ಹೆಚ್ಚು ಗಮನಸೆಳೆದಿದ್ದು ರಾಗಿಣಿ ಕೈಬೆರಳಲ್ಲಿರುವ ಉಂಗುರ. ಬೆರಳಿಗೆ ಉಂಗುರವನ್ನು ತುಂಬಾ ಮಂದಿ ಹಾಕಿಕೊಳ್ಳುತ್ತಾರೆ. ರಾಗಿಣಿ ಹಾಕಿಕೊಳ್ಳಬಾರದೇ ಎಂದು ಯಾರಾದರೂ ಕೇಳಬಹುದು.

ರಾಗಿಣಿಯೂ ಉಂಗುರವನ್ನು ಹಾಕಿಕೊಳ್ಳಲಿ ಬಿಡಿ. ಆದರೆ ಅವರು ಉಂಗುರವನ್ನು ಕಿರುಬೆರಳ ಪಕ್ಕದ ಬೆರಳಿಗೆ (ಉಂಗುರದ ಬೆರಳು) ಹಾಕಿಕೊಂಡಿದ್ದಾರೆ. ಆ ಬಗ್ಗೆ ಕೆಲವರು 'ಆ ಬೆರಳಲ್ಲಿ ಎಂಗೇಜ್ ಮೆಂಟ್ ಆದವರು ಉಂಗುರ ಹಾಕಿರುತ್ತಾರೆ' ಎಂದಿದ್ದೇ ತಡ, ಅಲ್ಲಿದ್ದವರ ಮೈಯಲ್ಲಿ ಮಿಂಚು ಹರಿದಂತಾಗಿ ಹಾಗಿದ್ದರೆ ರಾಗಿಣಿಗೆ ಎಂಗೇಜ್ ಮೆಂಟ್ ಆಗಿರಬಹುದೇ ಎಂಬ ಪ್ರಶ್ನೆ ಮೂಡಿದೆ.

ಇತ್ತೀಚಿಗೆ ರಾಗಿಣಿ ಮತ್ತು ಯೋಗೇಶ್ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬುದು ಗಾಂಧಿನಗರದ ಸುದ್ದಿ. ಅದಕ್ಕೆ ಪುಷ್ಟಿ ಕೊಡುವಂತೆ, ಜೀ ಕನ್ನಡ ವಾಹಿನಿಯಲ್ಲಿ ರಿಷಿಕಾ ಸಿಂಗ್ ನಡೆಸಿಕೊಡುತ್ತಿರುವ 'ರಗಳೆ ವಿದ್ ರಿಷಿಕಾ' ಕಾರ್ಯಕ್ರಮದಲ್ಲಿ ಇಬ್ಬರೂ ಜೊತಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ 'ತಮ್ಮಿಬ್ಬರಲ್ಲಿ ಗೆಳೆತನಕ್ಕೆ ಮೀರಿದ ಸಂಬಂಧವಿದೆ' ಎಂಬಂತೆ ಪರೋಕ್ಷವಾಗಿ ನುಡಿದಿತ್ತು ಈ ಜೋಡಿ.

ಆದರೆ ಈ ಬಗ್ಗೆ ಕೇಳಿದಾಗ ರಾಗಿಣಿ ನೇರವಾಗಿಯೇ ಉತ್ತರಿಸಿದ್ದಾರೆ. "ಇದು ವಿವಾಹ ನಿಶ್ಚಿತಾರ್ಥದ ಉಂಗುರವಲ್ಲ. ಯೋಗೇಶ್ ಕೊಟ್ಟಿದ್ದಂತೂ ಖಂಡಿತ ಅಲ್ಲ. ಈ ಉಂಗುರ ನನ್ನ ಅಮ್ಮ ಕೊಟ್ಟಿರೋ ಉಡುಗೊರೆ. ನಮ್ಮ ಜ್ಯೋತಿಷಿಗಳು ಹೇಳಿದಂತೆ ಈ ಉಂಗುರ ಹಾಕಿಕೊಂಡಿದ್ದೇನೆ. ಹಬ್ಬಿರುವ ಸುದ್ದಿ ಸಂಪೂರ್ಣ ಸುಳ್ಳು" ಎಂದು ಕಿಡಿಕಾರಿದ್ದಾರೆ.

ಅಂದಹಾಗೆ, ಲೂಸ್ ಮಾದ ಯೋಗೇಶ್ ಹಾಗೂ ರಾಗಿಣಿ ದ್ವಿವೇದಿ ಜೋಡಿಯ 'ಬಂಗಾರಿ' ಚಿತ್ರವನ್ನು ನಿರ್ದೆಶಿಸಿರುವವರು ಮಾ ಚಂದ್ರು. ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಎಂ ನೀಲ್. ಈ ಚಿತ್ರಕ್ಕೆ ನಿರಂಜನ ಬಾಬು ಕ್ಯಾಮರಾ ಕೈಚಳಕವಿದೆ. ಚಿತ್ರದಲ್ಲಿ ರಂಗಾಯಣ ರಘು ಅವರು ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಮುಂದಿನ ವರ್ಷ, 2013 ರಲ್ಲಿ ಚಿತ್ರವು ಬಿಡುಗಡೆ ಕಾಣಲಿದೆಯಂತೆ. 

ರಾಗಿಣಿ-ಯೋಗೇಶ್ ಮಧ್ಯೆ ಗೆಳೆತನಕ್ಕೆ ಮೀರಿದ ಸಂಬಂಧ?

ನಟಿ ರಾಗಿಣಿ ಹಾಗೂ ಯೋಗೇಶ್ ಮಧ್ಯೆ ಗೆಳೆತನಕ್ಕೆ ಮೀರಿದ ಸಂಬಂಧವಿದೆಯೇ? ಈ ಬಗ್ಗೆ ಕೆಲವರಿಗೆ ಗುಮಾನಿ ಶುರುವಾಗಿದೆ. ಇದು ಶುರುವಾಗಿದ್ದು ಜೀ ವಾಹಿನಿಯಲ್ಲಿ ರಿಷಿಕಾ ಸಿಂಗ್ ನಡೆಸಿಕೊಡುತ್ತಿರುವ 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮಕ್ಕೆ ಇಬ್ಬರೂ ಜೊತೆಯಾಗಿ ಬಂದು ಮಾತನಾಡಿದ ಮೇಲೆ ಎಂಬುದು ಸುದ್ದಿ.

ರಾಗಿಣಿ ಕೈಬೆರಳಲ್ಲಿರುವ ಉಂಗುರ ಯೋಗೇಶ್ ಕೊಟ್ಟಿದ್ದೇ?

ಲೂಸ್ ಮಾದ ಯೋಗೇಶ್ ಹಾಗೂ ರಾಗಿಣಿ ದ್ವಿವೇದಿ ನಟನೆಯ ಬಂಗಾರಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚಿಗೆ ನಡೆಯಿತು. ಆ ದಿನ ಆಡಿಯೋಗಿಂತ ಹೆಚ್ಚು ಗಮನಸೆಳೆದಿದ್ದು ರಾಗಿಣಿ ಕೈಬೆರಳಲ್ಲಿರುವ ಉಂಗುರ. ರಾಗಿಣಿ ಕೈಬೆರಳಲ್ಲಿರುವ ಉಂಗುರ ಯೋಗೇಶ್ ಕೊಟ್ಟಿದ್ದೇ ಎಂಬುದು ಹಲವರ ಪ್ರಶ್ನೆಯಾಗಿತ್ತು. ಅದು ಯೋಗಿ ಕೊಟ್ಟಿದ್ದಲ್ಲ, ನಮ್ಮಮ್ಮ ಕೊಟ್ಟಿದ್ದು ಎಂದಿದ್ದಾರೆ ರಾಗಿಣಿ.

ಬಂಗಾರಿ ಆಡಿಯೋ ಬಿಡುಗಡೆಯ ಫೋಟೋ ಇಲ್ಲಿದೆ, ನೋಡಿ

ಇತ್ತೀಚಿಗೆ, ಯೋಗೇಶ್ ಹಾಗೂ ರಾಗಿಣಿ ದ್ವಿವೇದಿ ಜೋಡಿಯ 'ಬಂಗಾರಿ' ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಇಲ್ಲಿದೆ ಅದರ ಫೋಟೋ, ನೋಡಿ...

ಆಡಿಯೋ ಬಿಡುಗಡೆ ವೇಳೆ ರಾಗಿಣಿ-ಯೋಗೇಶ್ ಫೋಟೋ ಝಲಕ್!

ಆಡಿಯೋ ಬಿಡುಗಡೆ ವೇಳೆ ರಾಗಿಣಿ-ಯೋಗೇಶ್ ಫೋಟೋ ಝಲಕ್!... ಅಂದಹಾಗೆ, ಲೂಸ್ ಮಾದ ಯೋಗೇಶ್ ಹಾಗೂ ರಾಗಿಣಿ ದ್ವಿವೇದಿ ಜೋಡಿಯ 'ಬಂಗಾರಿ' ಚಿತ್ರವನ್ನು ನಿರ್ದೆಶಿಸಿರುವವರು ಮಾ ಚಂದ್ರು. ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಎಂ ನೀಲ್. ಈ ಚಿತ್ರಕ್ಕೆ ನಿರಂಜನ ಬಾಬು ಕ್ಯಾಮರಾ ಕೈಚಳಕವಿದೆ. ಚಿತ್ರದಲ್ಲಿ ರಂಗಾಯಣ ರಘು ಅವರು ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಮುಂದಿನ ವರ್ಷ, 2013 ರಲ್ಲಿ ಚಿತ್ರವು ಬಿಡುಗಡೆ ಕಾಣಲಿದೆಯಂತೆ.

ವಿವಾಹ ನಿಶ್ಚಿತಾರ್ಥದ ಉಂಗುರವಲ್ಲ; ಯೋಗೇಶ್ ಕೊಟ್ಟಿದ್ದೂ ಅಲ್ಲ

ತಾವು ಹಾಕಿರುವ ಉಂಗುರದ ಬಗ್ಗೆ ರಾಗಿಣಿ ನೇರವಾಗಿಯೇ ಉತ್ತರಿಸಿದ್ದಾರೆ. "ಇದು ವಿವಾಹ ನಿಶ್ಚಿತಾರ್ಥದ ಉಂಗುರವಲ್ಲ. ಯೋಗೇಶ್ ಕೊಟ್ಟಿದ್ದಂತೂ ಖಂಡಿತ ಅಲ್ಲ. ಈ ಉಂಗುರ ನನ್ನ ಅಮ್ಮ ಕೊಟ್ಟಿರೋ ಉಡುಗೊರೆ. ನಮ್ಮ ಜ್ಯೋತಿಷಿಗಳು ಹೇಳಿದಂತೆ ಈ ಉಂಗುರ ಹಾಕಿಕೊಂಡಿದ್ದೇನೆ. ಹಬ್ಬಿರುವ ಸುದ್ದಿ ಸಂಪೂರ್ಣ ಸುಳ್ಳು" ಎಂದು ಕಿಡಿಕಾರಿದ್ದಾರೆ.

ರಾಗಿಣಿ ಮತ್ತು ಯೋಗೇಶ್ ಜೊತೆಯಾಗಿ ಓಡಾಡುತ್ತಿದ್ದಾರಾ?

ಇತ್ತೀಚಿಗೆ ರಾಗಿಣಿ ಮತ್ತು ಯೋಗೇಶ್ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬುದು ಗಾಂಧಿನಗರದ ಸುದ್ದಿ. ಅದಕ್ಕೆ ಪುಷ್ಟಿ ಕೊಡುವಂತೆ, ಜೀ ಕನ್ನಡ ವಾಹಿನಿಯಲ್ಲಿ ರಿಷಿಕಾ ಸಿಂಗ್ ನಡೆಸಿಕೊಡುತ್ತಿರುವ 'ರಗಳೆ ವಿದ್ ರಿಷಿಕಾ' ಕಾರ್ಯಕ್ರಮದಲ್ಲಿ ಇಬ್ಬರೂ ಜೊತಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ 'ತಮ್ಮಿಬ್ಬರಲ್ಲಿ ಗೆಳೆತನಕ್ಕೆ ಮೀರಿದ ಸಂಬಂಧವಿದೆ' ಎಂಬಂತೆ ಪರೋಕ್ಷವಾಗಿ ನುಡಿದಿತ್ತು ಈ ಜೋಡಿ.

ರಾಗಿಣಿ ಹಾಗೂ ಯೋಗೇಶ್ 'ಬಂಗಾರಿ' ಚಿತ್ರದ ಬಗ್ಗೆ ಬಹು ನಿರೀಕ್ಷೆ

ನಟಿ ರಾಗಿಣಿ ಹಾಗೂ ಯೋಗೇಶ್ ಒಟ್ಟಾಗಿ ನಟಿಸಿರುವ 'ಬಂಗಾರಿ' ಚಿತ್ರದ ಬಗ್ಗೆ ಪ್ರೇಕ್ಷಕರ ವಲಯ ಹಾಗೂ ಗಾಂಧಿನಗರದಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಆಡಿಯೋ ಬಿಡುಗಡೆ ವೇಳೆ ಸೀರೆಯುಟ್ಟು ಗಮನ ಸೆಳೆದ ರಾಗಿಣಿ

ತಮ್ಮ 'ಬಂಗಾರಿ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಸೀರೆಯುಟ್ಟು ಗಮನ ಸೆಳೆದರು ರಾಗಿಣಿ. ಇತ್ತೀಚಿಗೆ ಮೊದಲಿಗಿಂತ ಸಾಕಷ್ಟು ಸ್ಲಿಮ್ ಆಗಿ ಕಾಣುತ್ತಿರುವ ರಾಗಿಣಿ ಅಂದು ಸೀರೆಯುಟ್ಟು ಬಂದಾಗ ಸ್ಲಿಮ್ ಆಗಿದ್ದಕ್ಕೆ ಎಲ್ಲರಿಗೂ ಸಾಕ್ಷಿ ಸಿಕ್ಕಿತು.

ಆಡಿಯೋ ಬಿಡುಗಡೆ ವೇಳೆ ಜ್ಯೋತಿ ಬೆಳಗಿದ ರಾಗಿಣಿ, ಯೋಗೇಶ್

ಆಡಿಯೋ ಬಿಡುಗಡೆ ವೇಳೆ ಜ್ಯೋತಿ ಬೆಳಗಿದ ರಾಗಿಣಿ, ಯೋಗೇಶ್ ತಮ್ಮಿಬ್ಬರ ಜೋಡಿಯ 'ಬಂಗಾರಿ' ಚಿತ್ರವು ಚೆನ್ನಾಗಿ ಮೂಡಿ ಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಾಡುಗಳೂ ಕೂಡ ಚೆನ್ನಾಗಿವೆ ಎಂದರು. ಚಿತ್ರ ಸೂಪರ್ ಹಿಟ್ ಆಗುವುದು ಖಂಡಿತ ಎಂದರು.

ಬಂಗಾರಿ ಬಗ್ಗೆ ಭಾರಿ ನಿರೀಕ್ಷೆಯಲ್ಲಿರುವ ರಾಗಿಣಿ-ಯೋಗೇಶ್

ತಮ್ಮ ನಟನೆಯ, ಮುಂಬರುವ ಚಿತ್ರ 'ಬಂಗಾರಿ' ಬಗ್ಗೆ ಭಾರಿ ನಿರೀಕ್ಷೆಯಲ್ಲಿರುವ ರಾಗಿಣಿ ಹಾಗೂ ಲೂಸ್ ಮಾದ ಯೋಗೇಶ್, ಈ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವು ತಮ್ಮಿಬ್ಬರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬುದು ಅವರಿಬ್ಬರ ಅಂಬೋಣ.

English summary
Recently, the Kannada movie 'Bangari' Audio Launched. Loose Mada Yogesh and Ragini Dwivedi are acted in Lead Role for this movie. Ma Chandru Directed this movie which is going to release next year, on 2013. Now a days, gossip is spreading on Ragini and Yogesh pair. 
 
Please Wait while comments are loading...