For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ ಆಕ್ಷನ್ ಕಟ್ ನಲ್ಲಿ ಸುದೀಪ್

  By Rajendra
  |
  ಡ್ರಾಮಾ ಚಿತ್ರದ ಬಳಿಕ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಏನು ಮಾಡುತ್ತಾರೆ ಎಂಬ ಕುತೂಹಲ ಅವರ ಚಿತ್ರಗಳನ್ನು ಇಷ್ಟಪಡುವವರನ್ನು ಕಾಡುತ್ತಿದೆ. ಸ್ವಲ್ಪ ದಿನಗಳ ಹಿಂದೆ ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದ್ದು. ಅವರ ಮುಂದಿನ ಚಿತ್ರಕ್ಕೂ ರಾಕಿಂಗ್ ಸ್ಟಾರ್ ಯಶ್ ಹೀರೋ ಎನ್ನಲಾಗಿತ್ತು.

  ಆದರೆ ಈಗ ಕಿಚ್ಚ ಸುದೀಪ್ ನಾಯಕ ನಟ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ, ಭಟ್ಟರ ಮುಂದಿನ ಚಿತ್ರಕ್ಕೆ ಸುದೀಪ್ ನಾಯಕ ನಟ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಲೇಜು ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯುವುದರಲ್ಲಿ ಭಟ್ಟರು ಎತ್ತಿದ ಕೈ.

  ಆದರೆ ಸುದೀಪ್ ಮಾಸ್ ಹೀರೋ. ಅವರಿಗೆ ಯಾವ ರೀತಿ ಕಥೆ ಹೆಣೆಯುತ್ತಾರೋ ಏನೋ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಎನ್ ಕುಮಾರ್ ಹಾಗೂ ಕರಿಸುಬ್ಬು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಬಹುಶಃ ಇದೇ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ.

  ಯೋಗರಾಜ್ ಭಟ್ಟರು ಸುದೀಪ್ ಜೊತೆ ಚಿತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಂಗ ಎಸ್ಸೆಸ್ಸೆಲ್ಸಿ ಚಿತ್ರವನ್ನು ಮಾಡಿದ್ದರು. ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಇತ್ತಿಚೆಗೆ ಖಾಸಗಿ ವಾಹಿನಿಗಾಗಿ ಭಟ್ಟರು 'ಬಚ್ಚನ್' ಚಿತ್ರ ಕುರಿತು ಸುದೀಪ್ ಅವರನ್ನು ಸಂದರ್ಶಿಸಿದರು.

  ನಿರ್ಮಾಪಕ ಎನ್ ಕುಮಾರ್ ಅವರು ಸುದೀಪ್ ಡೇಟ್ಸ್ ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರಂತೆ. ಈಗ ಕಾಲ ಕೂಡಿಬಂದಿದೆ ಎನ್ನಿಸುತ್ತದೆ. ಹಾಗಾಗಿ ಯಶ್ ಅವರನ್ನು ಕೈಬಿಟ್ಟು ಸುದೀಪ್ ಅವರಿಗೆ ಮಣೆಹಾಕಲು ಮುಂದಾಗಿದ್ದಾರೆ ಎನ್ನುತ್ತದೆ ಗಾಂಧಿನಗರದ ಇನ್ನೊಂದು ಪಂಗಡ.

  ಇವೆಲ್ಲ ಬೆಳವಣಿಗೆಗಳನ್ನು ನೋಡಿದರೆ ಸುದೀಪ್ ಗೆ ಭಟ್ಟರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಅಂದಹಾಗೆ ಇದು ಏಪ್ರಿಲ್ ಫೂಲ್ ಸುದ್ದಿಯಂತೂ ಖಂಡಿತ ಆಗಲಿಕ್ಕಿಲ್ಲ. ಆದರೂ ಅಚ್ಚರಿಯಿಲ್ಲ! (ಏಜೆನ್ಸೀಸ್)

  English summary
  There are speculations that Kichcha Sudeep would be acting in the film directing by Yograj Bhat. M N Kumar and Karisubbu jointly producing the film. The film may be starts soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X