»   » ಆರ್.ಜಿ.ವಿ ನಿರ್ದೇಶನದಲ್ಲಿ ಜಮೀರ್ ಪುತ್ರ ಬಾಲಿವುಡ್ಡಿಗೆ?

ಆರ್.ಜಿ.ವಿ ನಿರ್ದೇಶನದಲ್ಲಿ ಜಮೀರ್ ಪುತ್ರ ಬಾಲಿವುಡ್ಡಿಗೆ?

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ, ಚೆಲುವರಾಯಸ್ವಾಮಿ ಪುತ್ರ ಸಚಿನ್ ಮತ್ತು ಕಾಂಗ್ರೆಸ್ ನಾಯಕ ರೇವಣ್ಣ ಪುತ್ರ ಅನೂಪ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸುದ್ದಿ ಹಳೆಯದ್ದೇ.

ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ಕೂಡ ಇದೇ ಲಿಸ್ಟ್ ಗೆ ಸೇರುವ ತಯಾರಿಯಲ್ಲಿದ್ದಾರೆ ಅನ್ನುವ ಸುದ್ದಿಯನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಾಲ್ಕು ತಿಂಗಳ ಹಿಂದೆಯೇ ವರದಿ ಮಾಡಿತ್ತು. [ಈ ಜ್ಯೂನಿಯರ್ ರಣ್ಬೀರ್ ಕಪೂರ್ ಯಾರು ಹೇಳಿ?]

ಈಗ ಜಮೀರ್ ಅಹಮದ್ ಖಾನ್ ಪುತ್ರ ಬಾಲಿವುಡ್ ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ನಲ್ಲಿ ಮಗ ಗ್ರ್ಯಾಂಡ್ ಎಂಟ್ರಿ ಕೊಡ್ಬೇಕು ಅನ್ನೋದು ಜಮೀರ್ ಅಹಮದ್ ಖಾನ್ ಆಸೆ ಆಗಿದೆ. ಮುಂದೆ ಓದಿ....

ಜನವರಿ ವೇಳೆಗೆ ಶೂಟಿಂಗ್ ಸ್ಟಾರ್ಟ್?

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಜನವರಿ ವೇಳೆಗೆ ಝೈದ್ ಖಾನ್ ರವರ ಚೊಚ್ಚಲ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳ್ತಾರಾ ಅನ್ನೋದು ಖಾತ್ರಿ ಆಗಿಲ್ಲ. ಆದ್ರೆ, ವರ್ಮಾ ಸಾಹೇಬ್ರು ತಮ್ಮ ಮಗನ ಸಿನಿಮಾಗೆ ನಿರ್ದೇಶನ ಮಾಡಿದರೆ ಚೆನ್ನ ಅನ್ನೋದು ಜಮೀರ್ ಅಹಮದ್ ಖಾನ್ ರವರ ಬಯಕೆ.

'ಫ್ರೆಶ್ ಫೇಸ್ ಆಫ್ ದಿ ಇಯರ್' ಪ್ರಶಸ್ತಿ ಗಿಟ್ಟಿಸಿರುವ ಝೈದ್

ಗೋವಾದಲ್ಲಿ 'ಬ್ರ್ಯಾಂಡ್' ಅಕಾಡೆಮಿ ನಡೆಸಿದ ಬಾಲಿವುಡ್ ಹೊಸ ಮುಖಗಳ ಶೋಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಝೈದ್ ಖಾನ್ 'ಫ್ರೆಶ್ ಫೇಸ್ ಆಫ್ ದಿ ಇಯರ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಾಲಿವುಡ್ ನಿಂದ ರೆಡ್ ಕಾರ್ಪೆಟ್ ಸ್ವಾಗತ

ಜಮೀರ್ ಅಹಮದ್ ಖಾನ್ ಗೆ ಕಿಂಗ್ ಖಾನ್ ಶಾರುಖ್ ಪರಿಚಿತರು. ಶಾರುಖ್ ಮನೆಗೆ ಡಿನ್ನರ್ ಹೋಗಿದ್ದ ಸಂದರ್ಭದಲ್ಲಿ, ಅವರ ಒತ್ತಾಯದ ಮೇರೆಗೆ ಝೈದ್ ಫೋಟೋಶೂಟ್ ಮಾಡಿಸಿದ್ದರು. ಜಿಮ್ ನಲ್ಲಿ ಪ್ರತಿನಿತ್ಯ ಬೆವರು ಹರಿಸುತ್ತಿರುವ ಝೈದ್ ಖಾನ್ ಗೆ ಬಾಲಿವುಡ್ ನಿಂದ ಹೆಚ್ಚು ಆಫರ್ ಗಳು ಬರುತ್ತಿವೆ.

ದ್ವಿತೀಯ ಪಿಯುಸಿ ಓದುತ್ತಿರುವ ಝೈದ್ ಖಾನ್

ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್. ಓದಿನೊಂದಿಗೆ ಸಿನಿಮಾದ ಬಗ್ಗೆ ಝೈದ್ ಗೆ ಅಪಾರ ಆಸಕ್ತಿ ಇದೆ.

English summary
JDS's Leader Zameer Ahmed Khan's son Zaid Khan is all set to enter Bollywood. Zameer Ahmed Khan wants Ram Gopal Varma to direct his son's debut movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada