»   » ಹೀರೋಯಿನ್ ಎದೆಗೆ ಕೈಹಾಕಿದ ಹೀರೋ !

ಹೀರೋಯಿನ್ ಎದೆಗೆ ಕೈಹಾಕಿದ ಹೀರೋ !

By: ರವಿಕಿಶೋರ್
Subscribe to Filmibeat Kannada

ತೆರೆಯ ಮೇಲೆ ಅದೆಷ್ಟೋ ಸಾಹಸ, ಪ್ರೇಮ, ವಿರಸ, ಸರಸ ಸನ್ನಿವೇಶಗಳನ್ನು ನೋಡಿರುತ್ತೀರಾ. ಆದರೆ ಈ ರೀತಿಯ ಸೀನ್ ಬಹುಶಃ ನೋಡಿರಲಿಕ್ಕಿಲ್ಲ. ಹೀರೋಯಿನ್ ಎದೆಗೆ ಕೈಹಾಕುವುದು ಎಂದರೇನು? ಈಗ ಈ ಸೀನ್ ಭಾರಿ ವಾದ-ವಿವಾದ, ಚರ್ಚೆಗೆ ಕಾರಣವಾಗಿದೆ.

ಅರ್ಶದ್ ವರ್ಸಿ, ವಿವೇಕ್ ಒಬೆರಾಯ್, ಸಂಜಯ್ ದತ್, ಮಿನಿಷಾ ಲಾಂಬಾ ಮುಂತಾದವರು ಮುಖ್ಯಭೂಮಿಕೆಯಲ್ಲಿರುವ ಬಾಲಿವುಡ್ ಚಿತ್ರ 'ಜಿಲ್ಲಾ ಘಜಿಯಾಬಾದ್'. ಈ ಚಿತ್ರಕ್ಕೆ ಸಂಬಂಧಿಸಿದ ವಿವಾದಿತ ಭಾಗ ಈಗ ಬಾಲಿವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಈ ಚಿತ್ರದಲ್ಲಿ ಹೀರೋ ಅರ್ಶದ್ ವರ್ಸಿ ನಾಯಕಿ ಮಿನಿಷಾ ಲಾಂಬಾ (ಚಿತ್ರಪಟ) ಎದೆ ಭಾಗವನ್ನು ಕೈಯಲ್ಲಿ ಸ್ಪರ್ಶಿಸಿದ ಫೋಟೋ ಎಲ್ಲರ ಹುಬ್ಬೇರಿಸಿದೆ. ಚಿತ್ರದ ಈ ಸನ್ನಿವೇಶದ ಮಹತ್ವದ ಬಗ್ಗೆ ನಿರ್ದೇಶಕ ಆನಂದ್ ಕುಮಾರ್ ಈ ರೀತಿ ಹೇಳಿಕೊಂಡಿದ್ದಾರೆ.

"ಇಷ್ಟಕ್ಕೂ ಚಿತ್ರದಲ್ಲಿ ಈ ರೀತಿಯ ಸೀನ್ ಬೇಕೆ, ಅದರ ಅವಶ್ಯಕತೆ ಎಷ್ಟು, ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಮೊದಲೇ ನಾಯಕ, ನಾಯಕಿಯರ ಬಳಿ ಚರ್ಚಿಸಿದ್ದೆವು. ಆದರೆ ಈ ಸನ್ನಿವೇಶದ ಚಿತ್ರೀಕರಣವರೆಗೂ ಚಿತ್ರತಂಡಕ್ಕೆ ಸ್ವಲ್ಪವೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ" ಎಂದಿದ್ದಾರೆ.

ನಿರ್ದೇಶಕರು ಆಕ್ಷನ್ ಕಟ್ ಎನ್ನುತ್ತಿರುವಂತೆ ಮಿನಿಷಾ ಎದೆಗೆ ಅರ್ಶದ್ ಕೈಹಾಕಿದ್ದಾರೆ. ಇದನ್ನು ನೋಡಿದ ಚಿತ್ರತಂಡ ಶಾಖ್ ಆಗಿದೆ. ಇದು ರೀಲಾ ಅಥವಾ ರಿಯಲಾ ಎಂಬ ಗೊಂದಲ ಅವರನ್ನು ಕ್ಷಣ ಕಾಲ ಕಾಡಿದೆ. ಬಳಿಕ ಇದು ರೀಲ್ ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ಈ ರೀತಿಯ ಸನ್ನಿವೇಶವನ್ನು ಚಿತ್ರದ ಕಥೆ ಬಯಸುತ್ತದೆ. ಹಾಗಾಗಿ ಅನಿವಾರ್ಯವಾಗಿ ಚಿತ್ರೀಕರಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಅದೇನು ಕಥೆನೋ ಏನೋ. ಈ ಚಿತ್ರದಲ್ಲಿ ಚಾರ್ಮಿ ಕೌರ್ ಸಹ ಅಭಿನಯಿಸಿದ್ದಾರೆ. ಜೊತೆಗೆ ಶ್ರಿಯಾ, ಗೀತಾ ಬಸ್ರಾ ಸಹ ಹಾಟ್ ಸ್ಟೆಪ್ಸ್ ಹಾಕಿದ್ದಾರೆ.

ವಿನೋದ್ ಬಚನ್ ಹಾಗೂ ಶೋಮ್ಯಾನ್ ಇಂಟರ್ ನ್ಯಾಶನಲ್ ಸಂಸ್ಥೆ ಜಂಟಿಯಾಗಿ ರು.60 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದೆ. ಫೆಬ್ರವರಿ 22ಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಎರಡು ಗುಂಪುಗಳ ನಡುವಿನ ಗ್ಯಾಂಗ್ ವಾರ್ ಗೆ ಸಂಬಂಧಿಸಿದ ಕಥಾಹಂದರದ ಚಿತ್ರ ಇದು. (ಏಜೆನ್ಸೀಸ್)

English summary
‘Zilla Ghaziabad’ movie : Arshad and Minissha’s proximity cross the limit and the actor with very ease touched Minissha’s chest. The scene shows Minissha in lehenga-choli holding a gun and aiming at Arshad while the actor holds her breast through her blouse. At first the unit members got confused but later understood that it is the demand of the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada