»   » ಜುರಾಸಿಕ್ ಪಾರ್ಕ್ ಚಿತ್ರ ಭಾಗ 4 ರ ಟ್ರೈಲರ್

ಜುರಾಸಿಕ್ ಪಾರ್ಕ್ ಚಿತ್ರ ಭಾಗ 4 ರ ಟ್ರೈಲರ್

Posted By:
Subscribe to Filmibeat Kannada

ಜುರಾಸಿಕ್ ಪಾರ್ಕ್ ಎಂಬ ಹೆಸರು ಕೇಳಿದೊಡನೆ ದೈತ್ಯ ಸರೀಸೃಪಗಳು ಕಣ್ಣ ಮುಂದೆ ಬರುತ್ತವೆ. ಡೈನೋಸರಸ್, ರೈನೋಸರಸ್ ಗಳ ಜುರಾಸಿಕ್ ಪಾರ್ಕ್ ಹೆಸರಿನಲ್ಲಿ ಪುಸ್ತಕ ಬಂದು ದಾಖಲೆ ಮಾರಾಟವಾದ ಮೇಲೆ, ಸ್ಟೀವನ್ ಸ್ಪೀಲ್ ಬರ್ಗ್ ಎಂಬ ಸೃಜನಶೀಲ ನಿರ್ದೇಶಕನ ಕೈಗೆ ಕಥೆ ಸಿಕ್ಕಿ, ಅದ್ಭುತ ಸಿನಿಮಾಗಳಾಗಿದ್ದು ಈಗ ಇತಿಹಾಸ. ಜುರಾಸಿಕ್ ಪಾರ್ಕ್ ಭಾಗ 3 ರನ್ನು ಮಾತ್ರ ಜೋ ಜಾನ್ ಸ್ಟನ್ ನಿರ್ದೇಶಿಸಿದ್ದರು. 2001 ರಲ್ಲಿ ಬಂದ ಭಾಗ ಮೂರು ಕೂಡ ಯಶಸ್ವಿಯಾಯಿತು. ಆದರೆ ಭಾಗ 4 ಮಾತ್ರ ತಯಾರಾಗಲು ಸಾಕಷ್ಟು ಸಮಯ ತೆಗೆದುಕೊಂಡಿದ್ದು ಆಶ್ಚರ್ಯ.
ಭಾಗ-4ರ ವಿಶೇಷ ಎಂದರೆ, ಚಿತ್ರ ಕಾಡಿನ ಕಥೆ ಹೊಂದಿರುವುದಿಲ್ಲ ಬದಲಿಗೆ ಅದ್ಭುತ ವೈಜ್ಞಾನಿಕ ಹಾಗೂ ಸಾಹಸಭರಿತ ಕಥೆಯಿರುತ್ತದೆ ಎಂದು ಕಥೆಗಾರ ವಿಲಿಯಂ  ಮೊನಾಹನ್ ಹೇಳುತ್ತಾರೆ. ಆದರೆ  ಚಿತ್ರದ ನಿರ್ಮಾಪಕ ಸ್ಟೀಲ್ ಬರ್ಗ್ ಗೆ  ಚಿತ್ರಕಥೆಗಳು ಒಪ್ಪಿಗೆ ಆಗದೇ ಚಿತ್ರೀಕರಣ ವಿಳಂಬವಾಗುತ್ತಿದೆಯಂತೆ. ಈ ಮುಂಚೆಯ ಜುರಾಸಿಕ್ ಪಾರ್ಕ್ ಭಾಗಗಳಲ್ಲಿ ಕೆಲಸ ಮಾಡಿದ್ದ ತಂತ್ರಜ್ಞಾನ ಸಲಹೆಗಾರ ಜಾಕ್ ಹಾರ್ನರ್  ಹಾಗೂ ಸ್ಪೆಷಲ್ ಎಫೆಕ್ಟ್ ಕಲಾವಿದ ಸ್ಟಾನ್ ವಿನ್ ಸ್ಟನ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಖ್ಯಾತ ನಟ ರಿಚರ್ಡ್ಆಟೆನ್ ಬರೊ ಹಾಗೂ  ನಟಿ ಲೌರಾ ಡೆಮ್ ಭಾಗ 4 ರಲ್ಲಿ ನಟಿಸಲು  ಒಪ್ಪಿದ್ದಾರೆ.

ಎಲ್ಲಾ ವಿಘ್ನಗಳು ಸರಿಹೋದರೂ ಚಿತ್ರಕಥೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.  ಚಿತ್ರ ಬಿಡುಗಡೆ ಬಗ್ಗೆ ಕೂಡ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಭಾಗ4 ರ ಟ್ರೈಲರ್ ಎಲ್ಲೆಡೆ ಲಭ್ಯವಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ಗಾಳಿ ಸುದ್ದಿ ಬಂದಿದೆ. ಸದ್ಯಕ್ಕೆ ಹೊಸ ಚಿತ್ರದ ಟ್ರೈಲರ್ ಎಲ್ಲಾ ವಿಡಿಯೋ ತಾಣಗಳಲ್ಲಿ ಜನಪ್ರಿಯವಾಗಿದೆ. ಆದರೆ ಇದು ಅಧಿಕೃತವಾದ ಟ್ರೈಲರ್ ಅಲ್ಲಾ ಎಂಬುದು ಅನೇಕರ ಅನಿಸಿಕೆಯಾಗಿದೆ ಯಾವುದಕ್ಕೂ ಒಮ್ಮೆ ನೋಡಿ.

(ದಟ್ಸ್ ಕನ್ನಡ ವಿಡಿಯೋ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada