»   » ದೆವ್ವಗಳ ಪ್ರಣಯಭರಿತ ಚಿತ್ರ ನೋಡಿ ಯುವಕನ ಸಾವು

ದೆವ್ವಗಳ ಪ್ರಣಯಭರಿತ ಚಿತ್ರ ನೋಡಿ ಯುವಕನ ಸಾವು

Posted By:
Subscribe to Filmibeat Kannada

ದೆವ್ವಗಳ ಪ್ರಣಯಭರಿತ ಚಿತ್ರ "ದಿ ಟ್ವಿಲೈಟ್ ಸಾಗಾ: ಎಕ್ಲಿಪ್ಸ್" ಎಂಬ ಹಾಲಿವುಡ್ ಚಿತ್ರವನ್ನು ವೀಕ್ಷಿಸುತ್ತಾ 23 ವರ್ಷದ ಯುವಕನೊಬ್ಬ ಸಾವಪ್ಪಿದ್ದಾನೆ. ಈ ಘಟನೆ ಭಾನುವಾರ ರಾತ್ರಿ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ದೆವ್ವ, ಭೂತ ಪ್ರೇತಗಳ ಚಿತ್ರ ಇದಾಗಿದ್ದು ಹೃದಯ ಬಡಿತ ಹೆಚ್ಚಿಸುದ ಸಾಕಷ್ಟು ಪ್ರಣಯಭರಿತ ಸನ್ನಿವೇಶಗಳು ಚಿತ್ರದಲ್ಲಿವೆ ಎನ್ನಲಾಗಿದೆ.

ರೀಡಿಂಗ್ ಕಾಂಪ್ಲೆಕ್ಸ್ ನಲ್ಲಿರುವ ಚಿತ್ರಮಂದಿರದಲ್ಲಿ ಯುವಕ ಚಿತ್ರ ನೋಡುತ್ತಿರಬೇಕಾದರೆ ರಾತ್ರಿ 8.30ರ ಸುಮಾರಿಗೆ ಸಾವಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವಕನ ಸಾವಿಗೆ ಚಿತ್ರದಲ್ಲಿನ ಪ್ರಣಯಭರಿತ ಹಾಗೂ ರೋಮಾಂಚಕ ಸನ್ನಿವೇಶಗಳೇ ಕಾರಣ ಎಂದು ಶಂಕಿಸಲಾಗಿದೆ.

ಯುವಕನ ಶವ ಪರೀಕ್ಷೆ ನಡೆಸಲಾಗುತ್ತಿದೆ ಎಂದು ನ್ಯೂಜಿಲ್ಯಾಂಡ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಶವದ ಮಹಜರ್ ರಿಪೋರ್ಟ್ ಸಿದ್ಧಪಡಿಸಲಾಗುತ್ತಿದ್ದು ಸದ್ಯಕ್ಕೆ ಚಿತ್ರಮಂದಿರವನ್ನು ಮುಚ್ಚಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚಿತ್ರದ ಸನ್ನಿವೇಶಗಳು ಯುವಕನ ಸಾವಿಗೆ ಕಾರಣವಾಗಿರವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada