»   » ಕ್ವಾಂಟಮ್ ಆಫ್ ಸೊಲೆಸ್ ಇಂದು ತೆರೆಗೆ

ಕ್ವಾಂಟಮ್ ಆಫ್ ಸೊಲೆಸ್ ಇಂದು ತೆರೆಗೆ

Posted By:
Subscribe to Filmibeat Kannada
daniel craig, james bond
ನವದೆಹಲಿ, ನ. 7 : ಜೇಮ್ಸ್ ಬಾಂಡ್ ಖ್ಯಾತಿಯ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ನಟನೆಯ 'ಕ್ವಾಂಟಮ್ ಆಫ್ ಸೊಲೆಸ್' ಚಿತ್ರವನ್ನು ಅಮೆರಿಕದಲ್ಲಿ ಬಿಡುಗಡೆಯಾಗುವ ಒಂದು ವಾರ ಮುಂಚಿತವಾಗಿ ಭಾರತದಲ್ಲಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.

ಭಾರತೀಯ ಚಿತ್ರ ಪ್ರೇಮಿಗಳು ನನ್ನ ಚಿತ್ರದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ನನ್ನ ನಟನೆಯ ಎಲ್ಲ ಚಿತ್ರಗಳು ಭಾರತದಲ್ಲಿ ಭಾರಿ ಜಯಪ್ರಿಯತೆ ಗಳಿಸಿವೆ. ಅಲ್ಲಿನ ಪ್ರೇಕ್ಷಕರು ಕ್ವಾಂಟಮ್ ಆಫ್ ಸೊಲೆಸ್ ಚಿತ್ರವನ್ನು ಕಾತುರದಿಂದ ಕಾಯುತ್ತಿದ್ದಾರೆ. ಆದ್ದರಿಂದ ಅಮೆರಿಕದಲ್ಲಿ ಬಿಡುಗಡೆಯಾಗುವ ಒಂದು ವಾರ ಮುಂಚಿತವಾಗಿ ಭಾರತದಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಈ-ಮೇಲ್ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಜೆಮ್ಸ್ ಬಾಂಡ್ ಚಿತ್ರ ಭಾರತದಲ್ಲಿ ಮಾಸ್ ಹಿಟ್ ಆಗಿತ್ತು. ಪ್ರತಿ ಭಾರತೀಯನೂ ಆ ಚಿತ್ರವನ್ನು ನೋಡಿ ಆನಂದಿಸಿದ್ದರು. ಪ್ರೇಕ್ಷಕರ ಒತ್ತಾಸೆ ಜೊತೆಗೆ ವ್ಯವಹಾರವನ್ನು ಗಮನದಲ್ಲಿರಿಸಿಕೊಂಡು ಒಂದು ವಾರ ಮುಂಚಿತವಾಗಿ ಇಂಡಿಯಾದಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂದು ಡೇನಿಯಲ್ ವಿವರಿಸಿದರು. ಭಾರತೀಯ ಚಿತ್ರಗಳ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಾನು, ಅವಕಾಶ ಒದಗಿದರೆ ಹಿಂದಿ ಚಿತ್ರಗಳಲ್ಲಿ ನಟಿಸುವುದಾಗಿ ಅವರು ಹೇಳಿದರು.

ಭಾರತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಅಲ್ಲಿನ ವಿವಿಧ ಸಂಸ್ಕೃತಿಗಳ ಗೊತ್ತಿವೆ ಎಂದ ನಟ ಡೇನಿಯಲ್, ಆದರೆ ಭಾರತೀಯ ನಟರ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಹಾಲಿವುಡ್ ಚಿತ್ರಗಳಿಗೂ ಭಾರತೀಯ ಚಿತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಭಾರತದ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ಅವಕಾಶ ಕಳೆದುಕೊಳ್ಳದೆ, ಖಂಡಿತವಾಗಿಯೂ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದಾಗಿ ಡೇನಿಯಲ್ ಹೇಳಿದರು.

ಕ್ವಾಂಟಮ್ ಆಫ್ ಸೊಲೆಸ್ ಚಿತ್ರವನ್ನು ಮಾರ್ಕ್ ಪೋಸ್ಟರ್ ನಿರ್ದೇಶಿಸಿದ್ದು, ಡೇನಿಯಲ್ ಕ್ರೇಗ್, ಒಲ್ಗಾ ಕುರಿಲೆಂಕೋ, ಗೆಮ್ಮ ಅರ್ಟರ್ ಟನ್, ಜೂಡಿ ಡೆಂಚ್, ಮಾಥ್ಯೋ ಅಮಲ್ ರಿಕ್ ಜಫ್ರೀ ರೈಟ್ ಮುಖ್ಯ ತಾರಾಬಳಗದಲ್ಲಿದ್ದಾರೆ.

ಬೆಂಗಳೂರಿನ 13 ಚಿತ್ರ ಮಂದಿರಗಳಲ್ಲಿ ಕ್ವಾಂಟಮ್ ಆಫ್ ಸೊಲೆಸ್ ಚಿತ್ರ ಬಿಡುಗಡೆ:
ಪಿವಿಆರ್ ಚಿತ್ರಮಂದಿರ (4 ಆಟ), ಮಾಗ್ರತ್ ರಸ್ತೆಯ ಐನಕ್ಸ್ (4 ಆಟ), ಫೇಮ್ ಲಿಡೋ ಚಿತ್ರಮಂದಿರ (4 ಆಟ), ತ್ರಿಭುವನ್ (4 ಆಟ), ರೆಕ್ಸ್ (4 ಆಟ), ಜಯನಗರದ ಐನಕ್ಸ್ (4 ಆಟ), ಫನ್ ಚಿತ್ರಮಂದಿರ (4 ಆಟ), ಉರ್ವಶಿ, ಅಪ್ಸರಾ, ಕಾವೇರಿ, ರಾಧಾ ಕೃಷ್ಣ ಹಾಗೂ ವೀರೇಶ ಚಿತ್ರಮಂದಿರಗಳಲ್ಲಿ ಇಂದು ಚಿತ್ರ ತೆರೆ ಕಂಡಿದೆ.

(ದಟ್ಸ್ ಸಿನಿಮಾ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada