For Quick Alerts
ALLOW NOTIFICATIONS  
For Daily Alerts

23 ನೇ ಜೇಮ್ಸ್ ಬಾಂಡ್ ಚಿತ್ರಕ್ಕೂ ಕ್ರೆಗ್ ಹೀರೋ

By Mahesh
|

ವಿಶ್ವಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಂಜಿಎಂನ ಆರ್ಥಿಕ ಪರಿಸ್ಥಿತಿ ಇದೀಗ ಸುಧಾರಿಸಿದ್ದು, ಸೋನಿ ಎಂಟರ್ ಟೈನ್ಮೆಂಟ್ ಜೊತೆ ಸೇರಿ ಜೇಮ್ಸ್ ಬಾಂಡ್ ಚಿತ್ರ ಸರಣಿಯ 23 ನೇ ಚಿತ್ರದ ಬಿಡುಗಡೆ ಮಹೂರ್ತವನ್ನು ಫಿಕ್ಸ್ ಮಾಡಿದೆ. 2010 ರಲ್ಲಿ ತೀವ್ರ ಆರ್ಥಿಕ ಹಿಂಜರಿತ ಅನುಭವಿಸಿದ್ದ ಎಂಜಿಎಂ, ಜೇಮ್ಸ್ ಬಾಂಡ್ ಚಿತ್ರವನ್ನು ತಡೆಹಿಡಿದಿತ್ತು. ಈಗ 2012 ರ ನವೆಂಬರ್ 9 ರಂದು ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಸಾಹಸಭರಿತ ಕುತೂಹಲಕಾರಿ ಚಿತ್ರದ ಪ್ರಿಮಿಯರ್ ಶೋ ಓಡಿಯನ್ ಲಿಸ್ಟೇಸ್ಟರ್ ಸ್ಕ್ವಯರ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಸೋನಿ ಸಂಸ್ಥೆ ಹೇಳಿದೆ. ನಟ ಡೇನಿಯಲ್ ಕ್ರೇಗ್ ಮೂರನೇ ಬಾರಿಗೆ ಲೈಸನ್ಸ್ ಟು ಕಿಲ್ ಎಂದು ಸೂಚಿಸಲಾಗಿದ್ದು, ಇನ್ನೂ ಹೆಸರಿಡದ ಚಿತ್ರದಲ್ಲಿ ಮತ್ತೊಮ್ಮೆ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅಮೆರಿಕನ್ ಬ್ಯೂಟೀ ಹಾಗೂ ರೆವಲ್ಯೂಷನರಿ ರೋಡ್ ಚಿತ್ರ ಖ್ಯಾತಿಯ ಸ್ಯಾಮ್ ಮೆಂಡೆಸ್ ಅವರು ಮಾರ್ಕ್ ಫೊಸ್ಟರ್ ಅವರಿಂದ ನಿರ್ದೇಶಕನ ಹುದ್ದೆಯನ್ನು ಕಸಿದುಕೊಂಡಿದ್ದಾರೆ. 2008ರಲ್ಲಿ ಕ್ವಾಂಟಮ್ ಆಫ್ ಸೊಲಸ್ ನಿರ್ದೇಶಿಸಿದ್ದ ಮಾರ್ಕ್ ಬದಲಿಗೆ ಮೆಂಡೆಸ್ ಬಂದಿದ್ದಾರೆ.

ಇಸ್ರೇಲಿ ಮಾಡೆಲ್ ಎಸ್ಟಿ ಜಿಂಜ್ಬರ್ಗ್ ಗೆ ಬಾಂಡ್ ಜೊತೆ ರೋಮಾನ್ಸ್ ಮಾಡುವ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಆನ್ ಲೈನ್ ನಲ್ಲಿ ಭಾರಿ ಚರ್ಚೆ ನಡೆದಿದೆ. ಆದರೆ, ಬಾಂಡ್ ಗರ್ಲ್ ಯಾರೂ ಎಂಬುದು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಖ್ಯಾತ ಸಿನಿಮಾ ಛಾಯಾಗ್ರಾಹಕ ರೋಜರ್ ಡಿಕಿನ್ಸ್ ಜೇಮ್ಸ್ ಬಾಂಡ್ ನ ಸಾಹಸ, ಪ್ರಣಯ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರೆ.

English summary
MGM and Sony Pictures Entertainment have announced 23rd ‘James Bond’ film will be released late next year. Actor Daniel Craig would return for his third stint as the agent with a license to kill in the as-yet-untitled film.Israeli model Esti Ginzburg is a hot favorite to become the next Bond girl.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more