»   » 'ಪೇಜ್ ಸಿಕ್ಸ್'ಗೆ ಬಟ್ಟೆ ಕಳಚಿದ ಗರ್ಭಿಣಿ ಪದ್ಮಾ ಲಕ್ಷ್ಮಿ

'ಪೇಜ್ ಸಿಕ್ಸ್'ಗೆ ಬಟ್ಟೆ ಕಳಚಿದ ಗರ್ಭಿಣಿ ಪದ್ಮಾ ಲಕ್ಷ್ಮಿ

Subscribe to Filmibeat Kannada

ಭಾರತೀಯ ಸಂಜಾತೆ, ಕುಕ್ ಬುಕ್ ನ ಲೇಖಕಿ,ನಟಿ ಮತ್ತು ರೂಪದರ್ಶಿ ಪದ್ಮಾ ಲಕ್ಷ್ಮಿ ಈಗ ಆರು ತಿಂಗಳ ತುಂಬು ಗರ್ಭಿಣಿ. ವಿಷಯ ಇದಲ್ಲ. ಈಕೆ ಆರು ತಿಂಗಳ ಗರ್ಭಿಣಿಯಾಗಿದ್ದರೂ ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ. ಇತ್ತೀಚೆಗೆ ಆಕೆ 'ಪೇಜ್ ಸಿಕ್ಸ್' ನಿಯತಕಾಲಿಕೆಗೆ ಬಟ್ಟೆ ಕಳಚಿ ಕ್ಯಾಮೆರಾ ಕಣ್ಣಿಗೆ ತನ್ನ ದೇಹಸೌಂದರ್ಯವನ್ನು ಒಡ್ಡಿದಳು. ಇದೀಗ ಆ ಚಿತ್ರಗಳು 'ಪೇಜ್ ಸಿಕ್ಸ್' ಪತ್ರಿಕೆಯನ್ನು ಅಲಂಕರಿಸಿವೆ.

'ಪೇಜ್ ಸಿಕ್ಸ್'ನ ಮುಖಪುಟದಲ್ಲೇ ಪದ್ಮಾ ಲಕ್ಷ್ಮಿಯ ನಗ್ನ ಚಿತ್ರಪಟ ಪ್ರಕಟವಾಗಿದೆ. ಸಂಪೂರ್ಣ ನಗ್ನಗೊಂಡಿರುವ ಆಕೆ ಮಂಡಿಯೂರಿ ಕುಳಿತು ತನ್ನದೇಹದ ಮುಂಭಾಗವನ್ನು ಮರೆ ಮಾಡಿದ ಭಂಗಿಯಲ್ಲಿ ಆ ಚಿತ್ರ ಪ್ರಕಟವಾಗಿದೆ. 'ಪೇಜ್ ಸಿಕ್ಸ್'ನ್ ಒಳಪುಟಗಳಲ್ಲಿ ಪದ್ಮಾ ಲಕ್ಷ್ಮಿಯ ಮತ್ತಷ್ಟು ಖತರ್ ನಾಖ್ ಚಿತ್ರಗಳು ರಾಚುತ್ತವೆ. ಈ ಹಿಂದೆ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಪದ್ಮಾ ಮದುವೆಯಾಗಿದ್ದರು.

''ನಗ್ನ ಚಿತ್ರಗಳಿಗೆ ನನ್ನ ಮೊದಲ ಆದ್ಯತೆ. ಬಟ್ಟೆ ತೊಡುವುದು ಎಂದರೆ ವ್ಯಕ್ತಿತ್ವಕ್ಕೆ ಬಟ್ಟೆ ತೊಡಿಸಿದಂತೆ. ಬಟ್ಟೆ ಎಂಬುದು ಗುಣವಾಚಕ ಮತ್ತು ಸೂಚನೆ ಇದ್ದಂತೆ. ಮೈಮೇಲೆ ಬಟ್ಟೆಯೇ ಇಲ್ಲ ಎಂದರೆ, ಆಗ ಕೇವಲ ನೀವಷ್ಟೇ ಕಾಣುತ್ತೀರಿ, ನೀವು ಏನನ್ನೂ ಮರೆಮಾಚಲು ಸಾಧ್ಯವಿಲ್ಲ'' ಎಂದು ಪದ್ಮಾ ಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿರುವ ಈಕೆ ಮಗುವಿನ ತಂದೆ ಯಾರು ಎಂಬುದನ್ನು ಬಹಿರಂಗಪಡಿಸುತ್ತಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada