»   » ಶ್ವಾನಗಳೊಂದಿಗೆ ಪಲ್ಲಂಗ ಹಂಚಿಕೊಂಡ ನಟಿ

ಶ್ವಾನಗಳೊಂದಿಗೆ ಪಲ್ಲಂಗ ಹಂಚಿಕೊಂಡ ನಟಿ

Posted By:
Subscribe to Filmibeat Kannada

ವಿಶ್ವಾಸದಲ್ಲಿ ಶ್ವಾನಕ್ಕಿಂತ ಮಿಗಿಲಾದ ಪ್ರಾಣಿ ಉಂಟೆ? ಶ್ವಾನಗಳೆಂದರೆ ಹೌಹಾರುವ ಮಂದಿಯೇ ಅಧಿಕ. ಅಂತಹುದ್ದರಲ್ಲಿ ಶ್ವಾನಗಳೊಂದಿಗೆ ಮಲಗುವುದೆಂದರೆ! ಅದೂ ಒಂಭತ್ತು ಶ್ವಾನಗಳ ಜೊತೆ ಪಲ್ಲಂಗ ಹಂಚಿಕೊಳ್ಳುವುದು ಸಾಮಾನ್ಯದ ಮಾತೆ. ಹಾಲಿವುಡ್ಡಿನ ಆಗರ್ಭ ಶ್ರೀಮಂತ ಸಿನಿಮಾ ನಟಿ, ಆಸ್ಕರ್ ಪ್ರಶಸ್ತಿ ವಿಜೇತೆ ಸಾಂಡ್ರಾ ಬುಲಕ್ ಗೆ ನಾಯಿಗಳೆಂದರೆ ಪಂಚಪ್ರಾಣ. ಆಕೆ ಒಂಭತ್ತು ಶ್ವಾನಗಳ ಒಡತಿ ಕೂಡಾ.

ವಿಷಯ ಇಷ್ಟೆ, ಆಕೆಗೆ ಶ್ವಾನಗಳ ಮೇಲೆ ಅಪಾರ ಪ್ರೀತಿ, ಮಮಕಾರ. ಅವೂ ಸಹ ಅಷ್ಟೆ ಅನ್ನ ಹಾಕಿದ ಯಜಮಾನಿ ಮೇಲೆ ಇನ್ನಿಲ್ಲದ ಪ್ರೀತಿಯನ್ನು ತೋರಿಸುತ್ತವೆ. ಪ್ರತಿನಿತ್ಯ ಸಾಂಡ್ರಾ ಬುಲಕ್ ಜೊತೆ ಅವೂ ಹಾಸಿಗೆ ಹಂಚಿಕೊಂಡು ಮಲಗುತ್ತವೆ. ಆಕೆಯ ಗಂಡ ಜೆಸ್ಸಿ ಜೇಮ್ಸ್ ಹಾಸಿಗೆ ಮೇಲೆ ಮಲಗಲು ಸ್ಥಳವಿಲ್ಲದೆ ದೂರವಾಗುವ ದಿನಗಳು ದೂರವಿಲ್ಲ ಎಂದು ಆತನ ಉಪಪತ್ನಿ ಮ್ಯಾಕ್ ಗೀ ಭವಿಷ್ಯ ನುಡಿದಿದ್ದಾಳೆ.

ಗಂಡನಿಗೆ ದ್ರೋಹ ಬಗೆದ ಆಪಾದನೆ ಮೇಲೆ ಜೆಸ್ಸಿ ಜೇಮ್ಸ್ ಹಾಗೂ ಮ್ಯಾಕ್ ಗೀ ಸಂಬಂಧ ಈ ಹಿಂದೆ ಮುರಿದು ಬಿದ್ದಿತ್ತು. ಬಳಿಕ ಆತ ಸಾಂಡ್ರಾರನ್ನು ವರಿಸಿದ್ದ. ಸಾಂಡ್ರಾ ಶ್ವಾನಗಳ ಜೊತೆ ಮಲಗುತ್ತಿರುವುದು ಆಕೆಯ ಗಂಡನಿಗೆ ಕಿರಿಕಿರಿಯಾಗುತ್ತಿದೆ. ಶೀಘ್ರದಲ್ಲೆ ಇವರಿಬ್ಬರ ಸಂಬಂಧ ಮುರಿದುಬೀಳಲಿದೆ ಎಂದು ಮ್ಯಾಕ್ ಹಿಡಿ ಶಾಪ ಹಾಕಿದ್ದಾಳೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada