For Quick Alerts
  ALLOW NOTIFICATIONS  
  For Daily Alerts

  ಮತ್ತೆ ಥಿಯೇಟರಿನಲ್ಲಿ 3D ಟೈಟಾನಿಕ್ ಮಹಾ ಮೋಡಿ!

  |
  <ul id="pagination-digg"><li class="previous"><a href="/hollywood/08-james-cameron-hollywood-movie-titanic-3d-aid0172.html">« Previous</a>

  ನಿರ್ದೇಶಕ ಜೇಮ್ಸ್ ಕ್ಯಾಮರೋನ್ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ. ಒಂದೊಂದು ದೃಶ್ಯಕ್ಕೂ ಅವರು ಮಾಡಿರಬಹುದಾದ ಹೋಮ್ ವರ್ಕ್ ಹಾಗೂ ಕಲ್ಪನೆಯ ಸಾಕಾರಕ್ಕೆ, ಅವರ ಅವಿರತ ಪ್ರಯತ್ನಕ್ಕೆ ಶಬ್ಧಗಳಲ್ಲಿ ಹೇಳಿದರೆ ಅದಕ್ಕೊಂದು ಅರ್ಥವೇ ಸಿಗಲಾರದು. 'ಸಿಂಪ್ಲಿ ಸೂಪರ್ಬ್...!' ಎಂದರೆ ನೋಡಿದ ಪ್ರೇಕ್ಷಕರೂ ಮರುಕಪಟ್ಟಾರು. 3D ತಂತ್ರಜ್ಞಾನದ ಈ ಚಿತ್ರವನ್ನು ನೋಡಿದರೆ ಶಬ್ಧಾತೀತ, ವರ್ಣನಾತೀತ ಎಂದು ಎನ್ನಿಸದಿರದು.

  ಮಾಮೂಲಿ ಸಿನಿಮಾಗಳಿಗಿಂತ ತೀರಾ ವಿಭಿನ್ನ ಪರಿಣಾಮವನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ಈ ಚಿತ್ರ ಸಾಮಾನ್ಯ ವರ್ಗಕ್ಕೆ ಸ್ವಲ್ಪ ದುಬಾರಿ ಎನ್ನಸಬಹುದು. ಆದರೂ, ಅದರಿಂದ ಸಿಗುವ ಖುಷಿಗೆ ಕೊಡುವ ಕಾಸು ಏನೇನು ಅಲ್ಲ ಎಂಬುದು ನೋಡಿ ಹೊರಬಂದ ಪ್ರೇಕ್ಷಕರ ಮನದಾಳದ ಮಾತು. ನೈಜ ಘಟನೆಯಾಧಾರಿತ ಈ ಚಿತ್ರ ಕೇವಲ ಒಂದು ಶತಮಾನದ ಹಿಂದೆ ನಡೆದದ್ದು.

  ಸರಿಯಾಗಿ ನೂರು ವರ್ಷಗಳ ಹಿಂದೆ (April 14, 1912) ನಡೆದ ಈ ಘೋರ ದುರಂತ, ಅದನ್ನು ಸಿನಿಮಾ ರೂಪದಲ್ಲಿ ನೋಡಿದರೂ ಮನಸ್ಸು ಭಾರವಾಗುವಷ್ಟರ ಮಟ್ಟಿಗೆ ಜನಜೀವನಕ್ಕೆ ಹತ್ತಿರವಾಗಿದೆ. ಹೃದಯದ ಮೂಲೆಮೂಲೆಯಲ್ಲೂ ಕಂಪನಗಳ ಮಹಾಪೂರ ಹರಿದುಬರುತ್ತದೆ. ಅದನ್ನು ಅನುಭವಿಸಿದವರ ಮನಸ್ಥಿತಿ ನಮ್ಮ ಮನಸ್ಸಿನ ಬಾಗಿಲಲ್ಲೇ ಬಂದು ನಿಲ್ಲುತ್ತದೆ.

  ಒಟ್ಟಿನಲ್ಲಿ ನಡೆಯಬಾರದಾಗಿದ್ದ ದುರಂತವೊಂದು ನಡೆದು ಹೋಗಿದೆ. ಅದು ಸಿನಿಮಾರೂಪದಲ್ಲಿ ಬಂದು ಎಚ್ಚರಿಕೆಯ ಕರೆಗಂಟೆ ಭಾರಿಸುವುದರೊಂದಿಗೆ ನೈಜ ಪ್ರೇಮಕಥೆಯೊಂದಕ್ಕೆ ಸಾಕ್ಷಿಯಾಗಿ ಜನರ ನಾಡಿ ಮಿಡಿತಕ್ಕೆ ಹೊಂದಿಕೊಳ್ಳುವ ಪರಿಗೆ ಶಬ್ಧದಲ್ಲಿ ಏನೆನ್ನೋಣ?!

  <ul id="pagination-digg"><li class="previous"><a href="/hollywood/08-james-cameron-hollywood-movie-titanic-3d-aid0172.html">« Previous</a>
  English summary
  Hollywood Move Titanic 3D Review. James Cameron Directed this and Leonardo DiCaprio, Kate Winslet played lead role. It is attracting now once again by its '3D' technology. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X