For Quick Alerts
  ALLOW NOTIFICATIONS  
  For Daily Alerts

  ರೀಲ್‌ಗೆ ರಾಜಕುಮಾರಿ ಡಯಾನಾ ರಿಯಲ್ ಸ್ಟೋರಿ

  By Rajendra
  |

  1997ರ ಆಗಸ್ಟ್ 31ರಂದು ನಡೆದ ಕಾರು ಅಪಘಾತದಲ್ಲಿ ರಾಜಕುಮಾರಿ ಡಯಾನಾ ಮತ್ತು ಆಕೆಯ ಪ್ರಿಯಕರ ದೋಡಿ ಅಲ್ ಫಾಯೆದ್‌ ದುರಂತ ಸಾವಪ್ಪಿದ್ದರು. ಇದು ಆತ್ಮಹತ್ಯೆಯೋ, ಪಿತೂರಿಯೇ ಅಥವಾ ಆಕಸ್ಮಿಕವೇ ಎಂಬ ಸಂಶಯಗಳಿಗೆ ಇಂದಿಗೂ ಸೂಕ್ತ ಉತ್ತರ ಸಿಕ್ಕಿಲ್ಲ. ವೇಲ್ಸ್‌ನ ರಾಜಕುಮಾರಿಯ ಸತ್ಯಕತೆಯನ್ನು ಆಧರಿಸಿ ಚಿತ್ರವೊಂದು ಸೆಟ್ಟೇರಲಿದೆ.

  ಡಯಾನಾ ಅಂಗರಕ್ಷಕ ಕೆನ್ ವಾರ್ಫೆ ಬರೆದಿರುವ "Diana: Closely Guarded Secret" ಎಂಬ ಕೃತಿ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಹಾಲಿವುಡ್ ನಿರ್ಮಾಪಕ ಸ್ಟೀಫನ್ ಇವಾನ್ ನಿರ್ಮಿಸುತ್ತಿರುವ ಚಿತ್ರವಿದು. ಬ್ರಿಟೀಷ್ ರಾಣಿಯ ಪಾತ್ರಕ್ಕೆ ಹಾಲಿವುಡ್ ತಾರೆಯೊಬ್ಬರು ಆಯ್ಕೆಯಾಗುವ ಸಾಧ್ಯತೆಗಳಿವೆ.

  ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಇದಕ್ಕೂ ಕೆಲವು ಸಮಯದ ಮುಂಚೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಂದ ಡಯಾನಾ ವಿಚ್ಛೇದನ ಪಡೆದಿದ್ದರು. ಹಾಲಿವುಡ್‌ನಲ್ಲಿ ಕುತೂಹಲ ಕೆರಳಿಸಿರುವ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)

  English summary
  Princess Diana’s life is set to be made into a movie, and producer Stephen Evans is lining up a Hollywood actress to play the late British royal. Diana’s film will be based on her bodyguard Ken Wharfe’s memoirs from his book Diana: Closely Guarded Secret.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X