For Quick Alerts
  ALLOW NOTIFICATIONS  
  For Daily Alerts

  ಜಗತ್ತಿನ ಪ್ರಪ್ರಥಮ ಕಾಮಪ್ರಚೋದಕ ತ್ರಿಡಿ ಚಿತ್ರ

  By Rajendra
  |

  ಕಾಮಪ್ರಚೋದಕ ತ್ರಿಡಿ ಚಿತ್ರವೊಂದನ್ನು ತೆರೆಗೆ ತರಲು ಹಾಂಕಾಂಗ್ ಚಿತ್ರ ನಿರ್ಮಾಪಕರು ಮುಂದಾಗಿದ್ದಾರೆ. ಇದು ಜಗತ್ತಿನ ಪ್ರಪ್ರಥಮ ಕಾಮಪ್ರಚೋದಕ ತ್ರಿಡಿ ಚಿತ್ರವಾಗಲಿದೆ. ಚಿತ್ರದ ಹೆಸರು 'Sex and Zen: Extreme Ecstasy'.

  ಈ ಚಿತ್ರವನ್ನು 3.2 ದಶಲಕ್ಷ ಯುಎಸ್ ಡಾಲರ್ ನಲ್ಲಿ ನಿರ್ಮಿಸಲಾಗುತ್ತಿದೆ. ಮುಂಬರುವ ಮೇ ತಿಂಗಳಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ತ್ರಿಡಿ ಅನುಭವದ ಜೊತೆಗೆ ಕಾಮಪ್ರಚೋದಕ ಚಿತ್ರವಾಗಿರುವ ಕಾರಣ ಈ ಚಿತ್ರದ ಬಗ್ಗೆ ಜಗತ್ತಿನಾದ್ಯಂತ ಉತ್ಕಂಠ ಪರಿಸ್ಥಿತಿ ಉಂಟಾಗಿದೆ.

  ಏಷ್ಯಾ, ಯೂರೋಪ್ ಮತ್ತು ಅಮೆರಿಕ ಖಂಡಗಳ ಚಿತ್ರ ನಿರ್ಮಾಪಕರು ಈ ಚಿತ್ರವನ್ನು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ ಎಂದು 'ಸಂಡೆ ಮಾರ್ನಿಂಗ್ ಪೋಸ್ಟ್ ' ಪತ್ರಿಕೆ ವರದಿ ಮಾಡಿದೆ. ನೈಜ ಸನ್ನಿವೇಶಗಳೊಂದಿಗೆ ಕಾಮಪ್ರಚೋದಕ ಗ್ರಾಫಿಕ್ ದೃಶ್ಯಗಳು ಚಿತ್ರದಲ್ಲಿವೆಯಂತೆ.

  ಈ ಚಿತ್ರವನ್ನು ಚೀನಾ ನಿಷೇಧಿಸಬಹುದು. ಆದರೆ ಜಪಾನ್, ಕೊರಿಯಾ, ಆಗ್ನೇಯಾ ಏಷ್ಯಾ ಸೇರಿದಂತೆ ಹಾಂಕಾಂಗ್ ಟಿವಿ ಚಾನಲ್ ಗಳಲ್ಲಿ ಮಾರುಕಟ್ಟೆಯಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಸ್ಟೀಪನ್ ಶಿಯು. ಈ ಚಿತ್ರ ಸಮಾಜದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X