For Quick Alerts
  ALLOW NOTIFICATIONS  
  For Daily Alerts

  ಕುರಾನ್ ಸುಡುವುದನ್ನು ಖಂಡಿಸಿದ ಜೋಲಿ

  By Mahesh
  |

  ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿ ಅಗತ್ಯ ನೆರವು ನೀಡಿ ಮೆಚ್ಚುಗೆಗೆ ಪಾತರ್ವಾಗಿರುವ ಬಾಲಿವುಡ್ ನ ಸೌಂದರ್ಯದ ಖನಿ ಏಂಜಲಿನಾ ಜೋಲಿ, ನ್ಯೂಯಾರ್ಕ್ ನ ಚರ್ಚ್ ವೊಂದರ ಮೇಲೆ ಕಿಡಿ ಕಾರಿದ್ದಾರೆ.

  ಸೆಪ್ಟೆಂಬರ್ 11 ರ ದುರಂತದ 9 ನೇ ವಾರ್ಷಿಕೋತ್ಸವದ ಅಂಗವಾಗಿ ಫ್ಲೋರಿಡಾದ ಕ್ರಿಶ್ಚಿಯನ್ ಚರ್ಚ್ ಡೋವ್ ವರ್ಲ್ಡ್ ಔಟ್ ರೀಚ್ ಸೆಂಟರ್ ನವರು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ನ ಪ್ರತಿಗಳನ್ನು ಸುಟ್ಟು ಹಾಕುವ ಯೋಜನೆ ರೂಪಿಸಿರುವುದಕ್ಕೆ ಏಂಜಲಿನಾ ತೀವ್ರ ಶೋಕ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.

  ಪರಧರ್ಮದವರು ಕಷ್ಟದಲ್ಲಿದ್ದಾಗ ಬಗ್ಗೆ ಒಂದಿಷ್ಟು ಸಹಾನೂಭೂತಿ ತೋರದೆ ಎಂದೋ ಸಂಭವಿಸಿದ ದುರಂತದ ನೆನಪಿಗಾಗಿ ಆ ಧರ್ಮದ ವ್ಯಕ್ತಿಗಳು ಕಾರಣ ಎಂದು ಹೇಳಿ ಪವಿತ್ರ ಗ್ರಂಥಗಳನ್ನು ಸುಡುವುದು ಅಕ್ಷಮ್ಯ ಎಂದು ಜೋಲಿ ಪ್ರತಿಕ್ರಿಯಿಸಿದ್ದಾರೆ.

  35 ವರ್ಷದ ಹಾಲಿವುಡ್ ನಟಿ ಹಾಗೂ ಬ್ರಾಡ್ ಪಿಟ್ ಒಡಗೂಡಿ ವಿಶ್ವದಾದ್ಯಂತ ಕಷ್ಟ ಜೀವಿಗಳ ಸುಖ ದುಃಖ ವಿಚಾರಿಸುವುದರ ಜೊತೆಗೆ ಐದಾರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. UNHCR ನ ರಾಯಭಾರಿಯಾಗಿರುವ ಜೋಲಿ, ವಿಶ್ವದಾದ್ಯಂತ ನಿರಾಶ್ರಿತರಿಗೆ ನೆರವಾಗುತ್ತಿದ್ದಾರೆ.

  ಕುರಾನ್ ಗ್ರಂಥ ಸುಡುವುದರ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಗೃಹ ಸಚಿವ ಪಿ ಚಿದಂಬರಂ ವಿಷಯವನ್ನು ಗಂಭೀರಗೊಳಿಸದಂತೆ ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.

  ಪಾದ್ರಿಯ ಕೃತ್ಯವನ್ನು ಅಮೆರಿಕದ ಆಡಳಿತ ಸಹಿತ ವಿಶ್ವದಾದ್ಯಂತ ಬಹುತೇಕ ಧಾರ್ಮಿಕ ಮುಖಂಡರು ಖಂಡಿಸಿದ್ದಾರೆ. ''ಮುಂದಿನ ಎರಡು ದಿನಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಅಧಿಕ ಪ್ರಮಾಣದಲ್ಲಿ ಸಹಕರಿಸಬೇಕಾಗಿ ನಾವು ವಿನಂತಿಸುತ್ತೇವೆ'" ಎಂದು ಗೃಹ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

  'ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ಗೆ ಅಪಚಾರವೆಸಗುವುದು ಒಂದು 'ವಿಧ್ವಂಸಕ" ಹಾಗೂ ಅಪಾಯ ಕಾರಿ ಕೃತ್ಯವಾಗಿದೆ"" ಎಂದು ಒಬಾಮ ಬಣ್ಣಿಸಿದ್ದಾರೆ. 'ನಮ್ಮ ರಾಷ್ಟ್ರವು ಧಾರ್ಮಿಕ ನಂಬಿಕೆ ಹಾಗೂ ಧಾರ್ಮಿಕ ಸಹಿಷ್ಣುತೆಗಳ ಮೇಲೆ ನಿರ್ಮಾಣಗೊಂಡಿದೆ"" ಎಂದು ಅಮೆರಿಕ ಅಧ್ಯಕ್ಷ ನುಡಿದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X