»   » ಜಲಪ್ರಳಯ ಕುರಿತ ಅದ್ಭತ ಹಾಲಿವುಡ್ ಚಿತ್ರ

ಜಲಪ್ರಳಯ ಕುರಿತ ಅದ್ಭತ ಹಾಲಿವುಡ್ ಚಿತ್ರ

Subscribe to Filmibeat Kannada
The Day the Earth Stood Still
ಸ್ಕಾಟ್ ಡೆರಿಕ್ ಸನ್ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ಟ್ವೆಂಟಿಯತ್ ಸೆಂಚುರಿ ಫಾಕ್ಸ್ ನಿರ್ಮಿಸಿರುವ ಅದ್ಧೂರಿ ಚಿತ್ರ 'The Day the Earth Stood Still' ಡಿ.12 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಹಿಂದಿ ಭಾಷೆಯಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಕಿನು ರೀವ್, ಜೆನ್ನಿಫರ್ ಕೊನೆಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಆಗಿದ್ದು, 1951ರಲ್ಲಿ ಇದೇ ಹೆಸರಿನೊಂದಿಗೆ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತ್ತು. ಈಗ ಆಧುನಿಕ ತಂತ್ರಜ್ಞಾನದೊಂದಿಗೆ ರೀಮೇಕ್ ಆಗಿ ಮತ್ತೆ ಬಿಡುಗಡೆಯಾಗುತ್ತಿದೆ.

ಜಲಪ್ರಳಯ ಸಂಭವಿಸಿದರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಅತ್ಯಂತ ಆಸಕ್ತಿಕರವಾಗಿ ಚಿತ್ರೀಕರಿಸಿದ್ದಾರೆ. ಜಾಗತಿಕ ತಾಪಮಾನ ಇಡೀ ವಿಶ್ವಕ್ಕೆ ಹೇಗೆ ಶಾಪವಾಗುತ್ತದೆ ಎಂಬುದರ ಸುತ್ತ ಕಥೆ ಸಾಗಲಿದೆ. ಕಿನು ರೀವ್ ನಟನೆ, ಜೆನ್ನಿಫರ್ ಕೊನೆಲ್ಲಿ ಆಕರ್ಷಣೆ ಚಿತ್ರಕ್ಕಿದೆ. ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೈನವಿರೇಳಿಸುವ ಗ್ರಾಫಿಕ್ಸ್ ಚಿತ್ರದ ಪ್ರಧಾನ ಆಕರ್ಷಣೆ. ಕ್ರಿಸ್ಮಸ್ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ವಿಶ್ವದಾದ್ಯಂತ ಪ್ರಳಯವನ್ನೇ ಸೃಷ್ಟಿಸಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...