»   » ನಾನು ಕಮಲ ನಯನೆ ಕಮಲವದನೆ :ಮೆಗನ್ ಫಾಕ್ಸ್

ನಾನು ಕಮಲ ನಯನೆ ಕಮಲವದನೆ :ಮೆಗನ್ ಫಾಕ್ಸ್

Posted By:
Subscribe to Filmibeat Kannada

ಟ್ರಾನ್ಸ್ ಫಾರ್ಮರ್ಸ್ ಸರಣಿಯ ಮೂರನೇ ಚಿತ್ರದ ಅವಕಾಶ ಕೈ ತಪ್ಪಿದ ದುಃಖದಲ್ಲಿರುವ ಹಾಲಿವುಡ್ ನಟಿ ಮೆಗನ್ ಫಾಕ್ಸ್ ಹೋದ ಕಡೆ ಎಲ್ಲಾ ಒಂದೇ ಪ್ರಶ್ನೆ ಎದುರಿಸುತ್ತಿದ್ದಳು.ನಿಮ್ಮ ಸೌಂದರ್ಯದ ರಹಸ್ಯವೇನು? ಬೊಟೆಕ್ಸ್ ಚಿಕಿತ್ಸೆ ಮಾಡಿಕೊಂಡ್ಯಾ ಹೇಗೆ? ಇಲ್ಲಾಂದ್ರೆ ಇಷ್ಟು ಚೆಂದ ಕಾಣಲು ಸಾಧ್ಯವಿಲ್ಲ ಬಿಡು...

25 ವರ್ಷದ ಹಾಲಿವುಡ್ ಬಾಲೆ ಫಾಕ್ಸ್ ಗೆ ಈಗ ತನ್ನ ತ್ವಚೆ ಪಕ್ಕಾ ಒರಿಜಿನಲ್ ಎಂದು ಸಾಬೀತು ಮಾಡುವ ಹುಚ್ಚು ಹಿಡಿದಿದೆ. ಇದಕ್ಕೆ ಈಗ 'Things You Can't Do With Your Face When You Have Botox" ಎಂಬ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ಫೋಟೊ ಆಲ್ಬಮ್ ಮಾಡಿದ್ದಾಳೆ. ಇದರಲ್ಲಿ ತನ್ನ ಮುಖರಾವಿಂದದ ಅಂದ ಚೆಂದವನ್ನು ಫುಲ್ ಜೂಮ್ ಹಾಕಿ ತೋರಿಸಿದ್ದಾಳೆ.

ಮುಖದ ಸುಕ್ಕು ನಿವಾರಣೆಗೆ ಯಾವುದೇ ಕ್ರೀಮ್ ಆಗಲಿ, ಇಂಜೆಕ್ಷನ್ ಆಗಲಿ ನಾನು ತೆಗೆದುಕೊಂಡಿಲ್ಲ. ನನ್ನ ಮುಖ ನೋಡಿ ನೀವೇ ನಿರ್ಧರಿಸಿ ಎಂದು ತನ್ನ ಹುಬ್ಬೇರಿಸಿದ ಮುಖದ ಕ್ಲೋಸ್ ಅಪ್ ಶಾಟ್ ಪ್ರದರ್ಶಿಸಿದ್ದಾಳೆ.

ಕೋಲು ಮುಖದ ಈ ಚೆಲುವೆ ಮೊಗವನ್ನು ಕಂಡ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಈ ಅಲ್ಬಮ್ ಗೆ 78,297 likes ಹಾಗೂ 14,780 ಪ್ರತಿಕ್ರಿಯೆಗಳು ಬಂದಿವೆ. ಒಟ್ಟಾರೆ ಮೆಗನ್ ಫಾಕ್ಸ್ ಪೇಜ್ ಅನ್ನು 26.949.738 ಜನ ಇಷ್ಟ ಪಟ್ಟಿದ್ದಾರೆ. ಟಾನ್ಸ್ ಫಾರ್ಮರ್ಸ್ ಸರಣಿಯ ಮೊದಲೆರಡು ಚಿತ್ರಗಳಲ್ಲಿ ನಟಿಸಿದ್ದ ಫಾಕ್ಸ್ ಮೂರನೇ ಚಿತ್ರದಲ್ಲಿ ನಟಿಸಿರಲಿಲ್ಲ. ಟ್ರಾನ್ಸ್ ಫಾರ್ಮರ್ಸ್ 3 ರಲ್ಲಿ ಫಾಕ್ಸ್ ಬದಲಿಗೆ ರೊಸ್ಸಿ ಹಂಟಿಂಗ್ಟನ್ ವೈಟ್ಲೆ ನಟಿಸಿದ್ದಾರೆ.

ಇತ್ತೀಚೆಗೆ ತನ್ನ ಇದೇ ರೀತಿ ತನ್ನ ಮಾದಕ ನಿತಂಬಗಳು ನೈಜವಾದವು ಎಂದು ಕಿಮ್ ಕದರ್ಶಿಯನ್ ಎಕ್ಸ್ ರೇ ಕಾಪಿ ಮಾಡಿ ಎಲ್ಲರ ಮುಂದಿಟ್ಟಿದ್ದಳು.

English summary
Actress Megan Fox has has posted an album entitled 'Things You Can't Do with Your Face when You Have Botox’ on twitter and Facebook account and rubbished reports that she has had Botox treatment

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada