»   » ಲಿಜ್ ಟೇಲರ್ ನಗ್ನ ಚಿತ್ರದ ಸತ್ಯಕಥೆ

ಲಿಜ್ ಟೇಲರ್ ನಗ್ನ ಚಿತ್ರದ ಸತ್ಯಕಥೆ

Posted By:
Subscribe to Filmibeat Kannada

ಇತ್ತೀಚೆಗೆ ಸಾವನ್ನಪ್ಪಿದ ಹಾಲಿವುಡ್ ದಂತಕತೆ, ಕ್ಲಿಯೋಪಾತ್ರ ತಾರೆ ಎಲಿಜಬೆತ್ ಟೇಲರ್ ಅವರ ಅಪರೂಪದ ಬೆತ್ತಲೆ ಛಾಯಾಚಿತ್ರ ಹೊರಬಿದ್ದಿದೆ.ಆಕೆ ತನ್ನ ಇಪತ್ತನಾಲ್ಕನೇ ವಯಸ್ಸಿನಲ್ಲಿ ಈ ಚಿತ್ರವನ್ನು ತನ್ನ ಮಾಜಿ ಪ್ರಿಯಕರ ಹಾಗೂ ಮೂರನೇ ಪತಿ ನಟ ರೋಡಿ ಮೆಕ್ ಡೋವೆಲ್‌ನಿಂದ ತೆಗೆಸಿಕೊಂಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದು ನಿಜಕ್ಕೂ ಲಿಜ್ ಟೇಲರ್ ಅವರ ಚಿತ್ರನಾ? ಅವರು ಆ ರೀತಿ ಫೋಟೋ ತೆಗೆಸಿಕೊಳ್ಳಲು ಒಪ್ಪಿದ್ದರಾ? ಕ್ಲಿಯೋಪಾತ್ರದಂಥ ಬೋಲ್ಡ್ ಪಾತ್ರ ಮಾಡಿದ್ದ ಟೇಲರ್, ಈ ರೀತಿ ಬೋಲ್ಡ್ ಆಗಿ ಬೆತ್ತಲೆ ಆಗಿದ್ದರಾ ಎಂಬ ಕುತೂಹಲಕಾರಿ ಪ್ರಶ್ನೆಗಳಿಗಿಂತ ಆ ನಿಗೂಢ ಚಿತ್ರ ಇದುವರೆವಿಗೂ ಉಳಿದುಕೊಂಡು ಬಂದಿರುವ ಕಥೆ ರೋಚಕವಾಗಿದೆ.

ಮತೊಬ್ಬ ಮಾಜಿ ಪತಿ ನಿರ್ಮಾಪಕ ಮೈಕೇಲ್ ಟೋಡ್ ಅವರು ಪ್ರೇಮ ನಿವೇದಿಸಿ ಮದುವೆಯಾಗಲು ನಿಶ್ಚಿತಾರ್ಥ ಏರ್ಪಡಿಸಿದ ವೇಳೆ ಅವರಿಗೆ ಟೇಲರ್‌ಳ ತನ್ನ ಯೌವನದ ಮಾದಕ ನಗ್ನ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ದುರದೃಷ್ಟವಶಾತ್ ಟೋಡ್ ಅವರು ಮದುವೆಯಾಗಿ ಕೇವಲ ಹದಿಮೂರು ತಿಂಗಳಲ್ಲೇ ವಿಮಾನ ಅಪಘಾತದಲ್ಲಿ ನಿಧನರಾದರು.

ನಂತರ ಆ ಅಪರೂಪದ ಛಾಯಾಚಿತ್ರವನ್ನು ತನಲೇ ಇರಿಸಿಕೊಂಡಿದ್ದ ಟೇಲರ್ ಕೆಲವು ಸಮಯದ ನಂತರ ತನ್ನ ಆಪ್ತ ಸಹಾಯಕ ಮತ್ತು ಅಲಂಕಾರಿಕ ಕಲಾವಿದ ಪೆನ್ನಿ ಟೇಲರ್‌ಗೆ ನೀಡಿದರು. ನಂತರ ಆತನಿಂದ ಖಾಸಗಿ ಚಿತ್ರ ಸಂಗ್ರಹಗಾರ ಜಿಮ್ ಶಾವ್ಡೀಸ್ 1980 ರಲ್ಲಿ ಆ ನಗ್ನಚಿತ್ರವನ್ನು ಖರೀದಿಸಿದ. ಅಮೇಲೆ ಆ ಚಿತ್ರ ಅಷ್ಟಾಗಿ ಸುದ್ದಿ ಮಾಡಿರಲಿಲ್ಲ.

ನಂತರ ಆ ಅಪರೂಪದ ಚಿತ್ರ ಕಾಣೆಯಾಯಿತೆಂದೇ ಊಹಿಸಲಾಗಿತು. ಏಕೆಂದರೆ ನಗ್ನ ಚಿತ್ರಕ್ಕೆ ಸಂಬಂಧಿಸಿ ಯಾವುದೇ ಸುದ್ದಿಯನ್ನು ಆ ಚಿತ್ರ ಸಂಗ್ರಹಕಾರ ಹೊರಹಾಕಿರಲಿಲ್ಲ. ಆದರೆ, ಇತ್ತೀಚೆಗೆ ಎಲಿಜಬೆತ್ ಟೇಲರ್ ಹೃದಯ ನಿಷ್ಕ್ರಿಯಗೊಂಡು ಸಾವನ್ನಪ್ಪಿದಾಗ ಮೇಲೆ, ಆ ಚಿತ್ರವನ್ನು ಆಕೆಯ ಅಭಿಮಾನಿಗಳ ಅಭಿಲಾಷೆ ತೀರಿಕೆಗಾಗಿ ಸಾರ್ವಜನಿಕವಾಗಿ ಪದರ್ಶಿಸುತ್ತಿರುವುದಾಗಿ ಆತ ಹೇಳಿದ್ದಾನೆ ಎಂದು ಡೈಲಿಮೇಲ್ ಪತ್ರಿಕೆ ವರದಿ ಮಾಡಿದೆ.

English summary
Hollywood actress, Cleopatra star Elizabeth Taylor allegedly agreed to pose to nude snap when she was just 24. Liz Taylor nude image mystery is still haunting as its veracity is yet to be revealed by the sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada