»   »  ಪಂಕಜ್ ಅದ್ವಾನಿಯ ಹಾಲಿವುಡ್ ಚಿತ್ರ

ಪಂಕಜ್ ಅದ್ವಾನಿಯ ಹಾಲಿವುಡ್ ಚಿತ್ರ

Subscribe to Filmibeat Kannada

ಬಿಲಿಯರ್ಡ್ಸ್ ನ ವಿಶ್ವಚಾಂಪಿಯನ್ ಪಂಕಜ್ ಅದ್ವಾನಿ ಹಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದೇನಿದು ಮೊನ್ನೆ ತಾನೆ ಬ್ರಿಟನ್ನಿನ ಲೀಡ್ಸ್ ನಲ್ಲಿ ಮಾರ್ಕ್ ರಸೆಲ್ ಅವರನ್ನು ಮಣಿಸುವ ಮೂಲಕ ವೃತ್ತಿಪರ ಬಿಲಿಯರ್ಡ್ಸ್ ವಿಶ್ವಚಾಂಪಿಯನ್ ಎನ್ನಿಸಿಕೊಂಡರಲ್ಲಾ! ಇಷ್ಟು ಬೇಗನೆ ನಿವೃತ್ತಿ ಘೋಷಿಸಿಕೊಂ ಡರಾ ಹೇಗೆ ಎಂದು ಅನುಮಾನವೇ?

ಹಾಗೇನಿಲ್ಲ, ಅವರದೇ ಜೀವನ ಕತೆ ಬೆಳ್ಳಿತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಅವರಲ್ಲದೇ ಇನ್ಯಾರು ಅಭಿನಯಿಸಲು ಸಾಧ್ಯ? ಈ ಚಿತ್ರವನ್ನು ಜೈನ್ ಮಹಾವಿದ್ಯಾಲಯದ ಉಪಕುಲಪತಿ ಆರ್ ಚೆನ್ನರಾಜ್ ಜೈನ್ ನಿರ್ಮಿಸುತ್ತಿದ್ದಾರೆ. ವಿಶ್ವಚಾಂಪಿಯನ್ ಕಿರೀಟವನ್ನು ತೊಟ್ಟಿರುವ ಪಂಕಜ್ ಮಂಗಳವಾರ ಬೆಂಗಳೂರಿಗೆ ಹಿಂತಿರುಗಿದ್ದು ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಂಕಜ್ ಕ್ಯಾಮೆರಾ ಎದುರಿಸುತ್ತಿರುವುದು ಇದೇ ಮೊದಲು. ಆದರೆ ಪ್ರೊಮೋಗಳಲ್ಲಿ ಪಂಕಜ್ ಈಗಾಗಲೇ ಕ್ಯಾಮೆರಾಗೆ ಮುಖಾಮುಖಿಯಾಗಿದ್ದಾರೆ. ಈ ಚಿತ್ರ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ಚೆನ್ನರಾಜ್ ಜೈನ್ ಅವರು ಈಗಾಗಲೇ ಜನಪ್ರಿಯ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಲಾಸ್ ಏಂಜಲೀಸ್ ಮತ್ತು ಮುಂಬೈನ ಚಿತ್ರಕತೆಗಾರರನ್ನು ಭೇಟಿ ಮಾಡಿ ಪೂರ್ವ ಸಿದ್ಧತೆ ಸಹ ಆಗಿದೆ.

ಅಂದಹಾಗೆ ಜೈನ್ ಕಾಲೇಜಿನ ಬಿ.ಕಾಂ ಪದವೀಧರ ಪಂಕಜ್. ಮುಂದೆ ಅವರು ಇದೇ ಕಾಲೇಜಿನಲ್ಲಿ ಎಂಬಿಎ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯಕ್ಕ್ಕೆ ಚಿತ್ರೀಕರಣಕ್ಕೆ ಪಂಕಜ್ ತಯಾರಿ ನಡೆಸಿದ್ದು ನೃತ್ಯ ಮತ್ತು ಅಭಿನಯ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada