»   » ವ್ಯಾಲೆಂಟೈನ್ಸ್ ಡೇ ಅದ್ಭುತ ಚಿತ್ರ ಪ್ರೆಟಿ ವುಮನ್

ವ್ಯಾಲೆಂಟೈನ್ಸ್ ಡೇ ಅದ್ಭುತ ಚಿತ್ರ ಪ್ರೆಟಿ ವುಮನ್

Posted By:
Subscribe to Filmibeat Kannada

ಹಾಲಿವುಡ್ ನ ಪ್ರಬುದ್ಧ ನಟಿ ಜೂಲಿಯಾ ರಾಬರ್ಟ್ಸ್ ಹಾಗೂ ಸುಂದರಾಂಗ ರಿಚರ್ಡ್ ಗೇರೆ ಅವರ ಅಭಿನಯದ 'ಪ್ರೆಟಿ ವುಮನ್ ' ಚಿತ್ರವನ್ನು ಪ್ರೇಮಿಗಳ ದಿನದ ವಿಶೇಷ ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರ ಎಂದು ಚಿತ್ರರಸಿಕರು ಆರಿಸಿದ್ದಾರೆ. ಮೋಹಕ ನಗೆಯಿಂದ ಎಲ್ಲರ ಹೃದಯ ಗೆದ್ದ ಜೂಲಿಯಾಗೆ ಇನ್ನೂ 41 ಪ್ಲಸ್ ಅಷ್ಟೇ. ಆದರೆ, ನಟನೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಈಕೆಗೆ ಸಾರಿ ಸಾಟಿ ನಿಲ್ಲಬಲ್ಲವರು ಬಹಳ ಕಮ್ಮಿ.

90 ರ ದಶಕದಲ್ಲಿ ತೆರೆಕಂಡ ಈ ಪ್ರಣಯಾಧರಿತ ಚಿತ್ರವು 'ಫೋರ್ ವೆಡ್ಡಿಂಗ್ ಅಂಡ್ ಎ ಫುನೆರಲ್', 'ಸ್ಲೀಪ್ ಲೆಸ್ ಇನ್ ಸೀಯಾಟೆಲ್' ಮತ್ತು 'ನಾಟಿಂಗ್ ಹಿಲ್'ಮುಂತಾದ ಜನಪ್ರಿಯ ಚಿತ್ರಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ ಎಂದು ಲಂಡನ್ ನ ಮಿರರ್ ವರದಿ ಮಾಡಿದೆ.

ಪ್ರೀತಿ, ಪ್ರೇಮ, ಪ್ರಣಯ, ಯಶಸ್ಸು ಎಲ್ಲವನ್ನು ಸಮನಾಗಿ ಹಂಚಿಕೊಂಡಿರುವ ಪ್ರೆಟಿ ವುಮನ್ ಚಿತ್ರದ ಚಿತ್ರಕಥೆಗೆ ಖ್ಯಾತ ವಿಮರ್ಶಕ ಬ್ಯಾರಿ ನಾರ್ಮನ್ ಕೂಡ ಸೈ ಎಂದಿದ್ದಾರೆ. ಟಾಪ್ ಟೆನ್ ಪಟ್ಟಿಯಲ್ಲಿ 'ವೆನ್ ಹ್ಯಾರಿ ಮೆಟ್ ಸ್ಯಾಲಿ' , ' ಸಮ್ ಲೈಕ್ ಇಟ್ ಹಾಟ್ ಹಾಗೂ 'ಅಮೇಲಿ' ಮುಂತಾದ ಚಿತ್ರಗಳಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada