»   » ವಯಸ್ಸಿನೊಂದಿಗೆ ಜೂಲಿಯಾಗೆ ಚಿಂತೆಯಿಲ್ಲವಂತೆ!

ವಯಸ್ಸಿನೊಂದಿಗೆ ಜೂಲಿಯಾಗೆ ಚಿಂತೆಯಿಲ್ಲವಂತೆ!

Posted By:
Subscribe to Filmibeat Kannada

ಚಿತ್ರೋದ್ಯಮದ ಮಂದಿ ತಮ್ಮ ಅಸಲಿ ವಯಸ್ಸನ್ನು ಗುಟ್ಟಾಗಿ ಕಾಪಾಡುವುದರಲ್ಲಿ ನಿಸ್ಸೀಮರು.ತಮ್ಮ ನಿಜವಾದ ವಯಸ್ಸು ಗೊತ್ತಾದರೆ ಎಲ್ಲಿ ಅವಕಾಶಗಳಿಗೆ ಕೊಡಲಿ ಏಟು ಬೀಳುತ್ತದೊ ಎಂಬ ಅಳುಕು ಅವರನ್ನು ಸಾದಾ ಕಾಡುತ್ತಿರುತ್ತದೆ. ಹಾಗಾಗಿ ಅವರ ವಯಸ್ಸು 25 ರ ಗಡಿ ಮೀರುವುದೇ ಇಲ್ಲ! ನಮ್ಮ ಬಾಲಿವುಡ್ ಭಿನ್ನಾಣಗಿತ್ತಿಯರ ಕಥೆ ಬಿಡಿ, ಅವರಂತೂ ವರ್ಷದಲ್ಲಿ ಮೂರು ಸಲ ಹುಟ್ಟುಹಬ್ಬ ಆಚರಿಸಿಕೊಂಡಿರುತ್ತಾರೆ. ಆದರೆ ಹಾಲಿವುಡ್ ನಟಿಯರು ಮಾತ್ರ ತಮ್ಮ ವಯಸ್ಸಿನ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸತ್ಯವನ್ನೇ ಹೇಳುತ್ತಾರೆ.

ಹಾಲಿವುಡ್ ಚೆಲುವೆ ಜೂಲಿಯಾ ರಾಬರ್ಟ್ಸ್ ರನ್ನು ನೋಡಿದರೆ ಅವರ ವಯಸ್ಸು 25 ರಿಂದ 30 ರೊಳಗೆ ಇರಬಹುದು ಅನ್ನಿಸುತ್ತದೆ. ಆದರೆ ಆಕೆ ಇಬ್ಬರು ಮಕ್ಕಳು ತಾಯಿ, ಅವರಿಗೆ 41 ವರ್ಷ ವಯಸ್ಸಾಗಿದೆ ಅಂಥ ಗೊತ್ತಾಗುವುದೇ ಇಲ್ಲ. ಆಕೆ ಸತ್ಯ ಹೇಳಿದರೂ ಅಭಿಮಾನಿಗಳಿಗೆ ನಂಬಿಕೆನೇ ಹುಟ್ಟುವುದಿಲ್ಲ. ಹಾಲಿವುಡ್ ನ ಈ ಮೋಹಕ ಚೆಲುವೆಗೆ ವಯಸ್ಸಾಗುತ್ತಿರುವುದು ಆಕೆಯನ್ನು ಚಿಂತೆಗೀಡು ಮಾಡಿದೆಯೇ?

ಖಂಡಿತವಾಗಿಯೂ ಇಲ್ಲ ಎನ್ನುತ್ತಾರೆ ಜೂಲಿಯಾ! ''ನಾನು ನನ್ನ ನಲವತ್ತನೇ ಹುಟ್ಟುಹಬ್ಬ್ಬವನ್ನು ತುಂಬ ಸಂತೋಷದಿಂದ ಆಚರಿಸಿಕೊಂಡಿದ್ದೇನೆ. ಆ ದಿನವೆಲ್ಲಾ ನನ್ನ ಮಕ್ಕಳೊಂದಿಗೆ ಕುಣಿದಾಡುತ್ತಾ ಸಂತೋಷದಿಂದ ಕಳೆದೆ. ಹುಟ್ಟು ಹಬ್ಬದ ದಿನ ಕೊಂಚ ವಿರಾಮ ಪಡೆಯುತ್ತಿದ್ದೇನೆ ಎಂದು ನನಗನಿಸುತ್ತದೆ'' ಎಂದು ಜೂಲಿಯಾ ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ್ದಾರೆ. ವಯಸ್ಸಾಗುತ್ತಿರುವುದರ ಬಗ್ಗೆ ನನಗಂತೂ ಖುಷಿಯಾಗುತ್ತಿದೆ. ಒಂದು ರೀತಿ ಆರಾಮಾಗಿದ್ದೇನೆ. ವಯಸ್ಸಾದಂತೆಲ್ಲ ಕೆಲವು ಕೆಲಸಗಳಿಂದ ಮುಕ್ತಿ ದೊರೆಯುತ್ತಿದೆ ಎನ್ನುತ್ತಾರೆ.

ಜೂಲಿಯಾ ಈಗ ವೃತ್ತಿಗಿಂತಲೂ ವೈಯಕ್ತಿಕ ಬದುಕಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.ಪತ್ನಿ ರಾಬರ್ಟ್ ರೊಂದಿಗೆ ಸೇರಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ ಆಕೆಯ ಮೋನಾಲಿಸಾ ನಗೆ ಮಾತ್ರ ಅಭಿಮಾನಿಗಳ ಹೃದಯದಲ್ಲಿ ಕಿಚ್ಚು ಹೊತ್ತಿಸುತ್ತಲೇ ಇದೆ.

(ದಟ್ಸ್ ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada