»   » ಹ್ಯಾರಿ ಪಾಟರ್ ಖ್ಯಾತಿಯ ಎಮ್ಮಾಗೆ ಅಮ್ಮ ಆಗುವಾಸೆ

ಹ್ಯಾರಿ ಪಾಟರ್ ಖ್ಯಾತಿಯ ಎಮ್ಮಾಗೆ ಅಮ್ಮ ಆಗುವಾಸೆ

Posted By:
Subscribe to Filmibeat Kannada
Emma Watson
ಹ್ಯಾರಿ ಪಾಟರ್ ಸರಣಿ ಶುರುವಾದಾಗಿನಿಂದ  ನಾಯಕನ ಗೆಳತಿಯಾಗಿ ಕಾಣಿಸಿಕೊಂಡಿರುವ ಪುಟ್ಟ ಹುಡುಗಿ ಎಮ್ಮಾ ವ್ಯಾಟ್ಸನ್ ಎಲ್ಲರ ಗಮನ ಸೆಳೆದಿರುವುದು ಈಗ ಇತಿಹಾಸ. ಈಗ ಎಮ್ಮಾ ಹಾಲಿವುಡ್ ನ ತರುಣರ ಕನಸಿನ ಕನ್ಯೆಯಾಗುತ್ತಿದ್ದಾಳೆ.

ಹ್ಯಾರಿ ಪಾಟರ್ ನ ಗೆಳತಿ ಹರ್ಮೊನಿ ಗ್ರಾಂಜರ್ ಪಾತ್ರದ ಮೂಲಕ ಮನೆ ಮಾತಾಗಿರುವ ಎಮ್ಮಾಗೆ ಈಗ 21ರ ಹರೆಯ. ಮಕ್ಕಳೊಂದಿಗೆ ಕಾಲಕಳೆಯುವ ದೃಶ್ಯದಲ್ಲಿ ಅಭಿನಯಿಸಿದ್ದ ಎಮ್ಮಾ ನಿಜ ಜೀವನದಲ್ಲೂ ತನ್ನ ಪಾತ್ರದ ಛಾಯೆ ಉಳಿಸಿಕೊಳ್ಳುತ್ತಿದ್ದಾಳೆ. ಮಕ್ಕಳೆಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಎಮ್ಮಾ ಹೊಸ ಇಷ್ಟದ ಕಥೆ ಕೇಳಿ

ಇತ್ತೀಚೆಗೆ ಗೆಳೆಯ ಜಾನಿ ಜೊತೆ ತುಟಿಗೆ ತುಟಿಗೆ ಸೇರಿಸುವಾಗ ಸಿಕ್ಕಿಬಿದ್ದಿದ್ದ ಈ ತುಂಟಿ ಮಿಕ್ಕ ನಟಿಯರ ಹಾಗೆ ಬಿಂದಾಸ್ ಬಾಲೆಯಲ್ಲ. ಅಲ್ಪಸ್ವಲ್ಪ ಸಂಪ್ರದಾಯಬದ್ಧ ಹುಡುಗನನ್ನೇ ವರಿಸುವ ಕನಸು ಹೊತ್ತವಳು. ಆದರೆ, ವರನನ್ನು ಹುಡುಕುವ ಮೊದಲು ಈಕೆಗೆ ಅಮ್ಮನಾಗುವ ಬಯಕೆ ಹುಟ್ಟಿದೆಯಂತೆ.

ತನ್ನದೆ ಆದ ಒಂದು ಸುಖಿ ಕುಟುಂಬ, ಮನೆ ತುಂಬ ಮಕ್ಕಳು ಪಡೆಯಬೇಕು ಎಂಬ ಆತುರದಲ್ಲಿದ್ದಾಳೆ ಎಮ್ಮಾ. ಅಪ್ಪಟ ಭಾರತೀಯ ಹುಡುಗಿಯರ ಆದರ್ಶ ಪುರುಷನ ಕಲ್ಪನೆಯಂತಿರುವ ವರ ಸಿಕ್ಕರೆ ತಕ್ಷಣವೆ ಮದುವೆಯಾಗುತ್ತೇನೆ.

ಆತ ಜಾಣನಾಗಿದ್ದು, ಉತ್ತಮ ಗುಣ ಹೊಂದಿರಬೇಕು, ಆತ್ಮವಿಶ್ವಾಸಿಯಾಗಿದ್ದು, ನನಗೆ ಎಲ್ಲದರಲ್ಲೂ ಒತ್ತಾಸೆಯಾಗುವಂತಿರಬೇಕು ಎಂದಿದ್ದಾಳೆ. ನನಗೆ ತಾಯ್ತನದ ಸವಿ ಅನುಭವಿಸಬೇಕಿದೆ ಎಂದು ಎಮ್ಮಾ ಪತ್ರಿಕೆಯೊಂದಕ್ಕೆ ಹೇಳಿಕೊಂಡಿದ್ದಾಳೆ.

ವಿದೇಶಿ ನಟಿಯರೆಂದರೆ ಸದಾ ಡೇಟಿಂಗ್, ವಿವಾಹೇತರ ಸಂಬಂಧ, ಲಿವಿಂಗ್ ಟುಗೇದರ್ ಎನ್ನುವ ಕಾಲದಲ್ಲಿ ಅಪ್ಪಟ ಹದಿನಾರಾಣೆ ಬೆಂಗಳೂರಿನ ವಠಾರದ ಪುಟ್ಟ ಗೌರಿಯಂತೆ ಎಮ್ಮಾ ಹೇಳುತ್ತಿರುವುದು ಹಾಲಿವುಡ್ ಮಂದಿಗೂ ಕೊಂಚ ಅಚ್ಚರಿ ಎನಿಸಿದೆ.

English summary
Harry Potter Star Emma Watson wants to be mother soon. Recently she was caught with her boyfriend with liplock. 21 year old Emma is found to be imitating her on screeen character Hermione Granger.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada