For Quick Alerts
  ALLOW NOTIFICATIONS  
  For Daily Alerts

  ಕಿರಿಕ್ ತಾರೆ ಲಿಂಡ್ಸೆ ಮೇಲೆ ಫೋಟೋಗ್ರಾಫರ್ ಕೇಸ್

  By Rajendra
  |

  ಹಾಲಿವುಡ್‌ನ ಕಿರಿಕ್ ತಾರೆ ಎಂದೇ ಖ್ಯಾತರಾಗಿರುವ ಲಿಂಡ್ಸೆ ಲೋಹನ್ ಮೇಲೆ ಫೋಟೋಗ್ರಾಫರ್ ಒಬ್ಬ ಕೇಸು ಜಡಿದಿದ್ದಾನೆ. ಜನವರಿ 2010ನೇ ಸಾಲಿನಲ್ಲಿ ಫೋಟೋಗ್ರಾಫರ್ ಕಾರಿಗೆ ಲಿಂಡ್ಸೆ ಕಾರು ಡಿಕ್ಕಿ ಹೊಡೆದು ಪರಿಣಾಮ ತೀವ್ರ ನಷ್ಟವಾಗಿತ್ತು ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.

  ಹಾಲಿವುಡ್ ನೈಟ್‌ಕ್ಲಬ್‌ನಿಂದ ಹೊರಬಂದ ಲಿಂಡ್ಸೆ ತನ್ನ ಕಾರನ್ನು ಸ್ಪೀಡಾಗಿ ಓಡಿಸಿಕೊಂಡು ಬಂದು ತನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾಗಿ ಗ್ರಿಗಲ್ ಬಾಲ್ಯನ್ ಎಂಬ ಫೋಟೋಗ್ರಾಫರ್ ಆರೋಪಿಸಿದ್ದಾನೆ. ಆ ಸಂದರ್ಭದಲ್ಲಿ ಲಿಂಡ್ಸೆ ಕಾರು ಓಡಿಸುತ್ತಿರಲಿಲ್ಲವಾದರೂ ಆಕೆಯ ಮಾರ್ಗದರ್ಶನದಲ್ಲಿ ಸಹಾಯಕ ಓಡಿಸುತ್ತಿದ್ದ ಎಂದು ಫೋಟೋಗ್ರಾಫರ್ ಪರ ವಕೀಲ ನೀಲ್ ಸ್ಟೀನರ್ ಹೇಳಿದ್ದಾರೆ.

  ಲಿಂಡ್ಸೆ ವಿರುದ್ಧ ಇನ್ಸುರೆನ್ಸ್ ಕಂಪನಿಯೊಂದಿಗೆ ಮಾತನಾಡಿದ್ದು ತಮಗಾಗಿರುವ ನಷ್ಟವನ್ನು ಕಟ್ಟಿಕೊಡುವಂತೆ ಮನವಿ ಮಾಡಿದ್ದರು. ಆದರೆ ವಿಮಾ ಕಂಪನಿ ಇವರಿಗಾಗಿರುವ ಸಂಪೂರ್ಣ ನಷ್ಟವನ್ನು ತುಂಬಿಕೊಡಲು ಸಿದ್ಧವಿಲ್ಲ. ಈ ಘಟನೆಯಲ್ಲಿ ತಮ್ಮ ಕಕ್ಷಿದಾರನಿಗೆ ಗಾಯಗಳಾಗಿದ್ದು ಆತನಿಗಾದ ಸಂಪೂರ್ಣ ನಷ್ಟವನ್ನು ತುಂಬಿಕೊಡಬೇಕು ಎಂದು ವಕೀಲರು ಕೇಸು ಜಡಿದಿದ್ದಾರೆ. (ಏಜೆನ್ಸೀಸ್)

  English summary
  Hollywood actress Linday Lohan is being sued by a photographer who alleges that he was run over by her car in January 2010. Grigor Baylan is taking legal action against the 25-year-old after he was run over when the singer was trying to make a fast departure from a Hollywood nightclub.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X