»   » ಅಮೆರಿಕನ್ ನಟಿಯ ಸಂದರ್ಶನಕ್ಕೆ ಐದು ಲಕ್ಷ ಡಾಲರ್

ಅಮೆರಿಕನ್ ನಟಿಯ ಸಂದರ್ಶನಕ್ಕೆ ಐದು ಲಕ್ಷ ಡಾಲರ್

Posted By:
Subscribe to Filmibeat Kannada

ಅಮೆರಿಕ ನಟಿ, ರೂಪದರ್ಶಿ ಹಾಗೂ ಪಾಪ್ ತಾರೆ ಲಿಂಡ್ಸೆ ಲೋಹನ್ ಗೆ ಮತ್ತೆ ತೊಂಬತ್ತು ದಿನಗಳ ಕಾರಾಗಾರ ಶಿಕ್ಷೆ ಜಾರಿಯಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಮತ್ತೆ ಶಿಕ್ಷೆಗೆ ಗುರಿಯಾಗಿದ್ದಾರೆ. ಜೈಲಿಗೆ ಹೋಗುವ ಮುನ್ನ ಆಕೆಯನ್ನು ಸಂದರ್ಶಿಸಿ ಅಂತರಂಗವನ್ನು ಬಿಚ್ಚಿಡಲು ಟಿವಿ ವಾಹಿನಿಯೊಂದು ಮುಂದಾಗಿದೆ.

ಅಮೆರಿಕ ಟಿವಿ ವಾಹಿನಿ ಲಿಂಡ್ಸೆಯನ್ನು ಸಂದರ್ಶಿಸಲು ಆಕೆಗೆ 500,000 ಡಾಲರ್ ಕೊಡಲು ತೀರ್ಮಾನಿಸಿದೆ. ಈ ವಿಶೇಷ ಸಂದರ್ಶನಕ್ಕೆ ದಾಖಲೆ ಮಟ್ಟದ ಹಣ ಕೊಡಲು ಯುಎಸ್ ಟಿವಿ ವಾಹಿನಿ ಮುಂದಾಗಿರುವುದಾಗಿ contactmusic.com ಎಂಬ ಅಂತರ್ಜಾಲ ತಾಣ ವರದಿ ಮಾಡಿದೆ.

ಲಿಂಡ್ಸೆ ಅವರಿಗೆ ಬೇಡಿಕೆಯಿದೆ. ಆಕೆ ಜೈಲಿಗೂ ಹೋಗುವ ಮುನ್ನ ಈ ಸಂದರ್ಶನವನ್ನು ಮಾಡಲಿದ್ದೇವೆ. ಹರಾಜು ಪ್ರಕ್ರಿಯೆ ಮುಗಿದಿದ್ದು 500,000 ಡಾಲರ್ ಗೆ ಒಪ್ಪಂದವಾಗಿದೆ. ಜೈಲಿನ ದಿನಚರಿ ಹಾಗೂ ಜೈಲಿಗೆ ತೆರಳುವುದಕ್ಕೂ ಮುಂಚಿನ ಸಂದರ್ಶನ ಒಟ್ಟಿಗೆ ಬಿಡುಗಡೆಯಾಲಿದೆ ಎಂದು ಟಿವಿ ವಾಹಿನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಲಿಂಡ್ಸೆ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಕಾರಣ 2007ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಆಕೆಯನ್ನು ಪೋಲಿಸರು ಬಂಧಿಸಿದ್ದರು. ಬೆವರ್ಲಿ ಬೆಟ್ಟಗಳಲ್ಲಿ ಆಕೆಯ ಮೆರ್ಸಿಡೆಸ್ ಕಾರು ಅಪಘಾತಕ್ಕೀಡಾಗಿತ್ತು.ನಟಿಯ ಕಾರಿನಲ್ಲಿ ಕೊಕೇನ್ ಮಾದಕ ದ್ರವ್ಯ ಸಿಕ್ಕಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆಕೆ ಮತ್ತೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಲ್ಲಿನ ಕೋರ್ಟ್ ಮತ್ತೆ 90 ದಿನಗಳ ಶಿಕ್ಷೆ ವಿಧಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada