For Quick Alerts
  ALLOW NOTIFICATIONS  
  For Daily Alerts

  ವಿಶ್ವದ ಅತ್ಯಂತ ಸುಂದರ ಮಹಿಳೆ ಜೆನ್ನಿಫರ್ ಲೋಪೆಜ್

  By Rajendra
  |

  ಪಾಪ್ ತಾರೆ ಹಾಗೂ ಹಾಲಿವುಡ್ ಬೆಡಗಿ ಜೆನ್ನಿಫರ್ ಲೋಪೆಜ್ ವಿಶ್ವದಲ್ಲೇ ಅತ್ಯಂತ ಸ್ಫುರದ್ರೂಪಿ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 'ಪೀಪಲ್' ನಿಯತಕಾಲಿಕೆ ಆಕೆಗೆ ಈ ಕಿರೀಟವನ್ನು ತೊಡಿಸಿದೆ. ಬೆಯಾನ್ಸ್ ನೋಲ್ಸ್, ಅನ್ನೆ ಮಾಥ್‌ವೆ‌ಯಂತಹ ಯುವ ಸುಂದರಿಯರನ್ನೂ ಹಿಂದಿಕ್ಕಿ ಜೆನ್ನಿಫರ್ ಈ ಸ್ಥಾನವನ್ನು ತಮ್ಮ ಕೈವಶ ಮಾಡಿಕೊಂಡಿರುವುದು ವಿಶೇಷ.

  ಈ ಪುರಸ್ಕಾರ ತಮಗೆ ಲಭಿಸಿದ ಗೌರವ ಎಂದು 41 ವರ್ಷದ ಜೆನ್ನಿಫರ್ ಪ್ರತಿಕ್ರಿಯಿಸಿದ್ದಾರೆ. ಈ ವಯಸ್ಸಿನಲ್ಲಿ ತಾವು ಈ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆ ಎನ್ನಿಸುತ್ತಿದೆ. "ನನಗೆ ನಿಜಕ್ಕೂ ಸಂತಸ ಹಾಗೂ ಹೆಮ್ಮೆ ಒಟ್ಟಿಗೆ ಆಗುತ್ತಿವೆ. ನನ್ನ ವಯಸ್ಸು ಇನ್ನೂ 25ರ ಹರೆಯ ಅಲ್ಲವಲ್ಲ. ಅದಕ್ಕೇ ಇದು ಹೆಮ್ಮೆ." ಎಂದು ವಿವರಿಸಿದರು.

  ಪ್ರಸ್ತುತ 'ಅಮೆರಿಕನ್ ಐಡಲ್‌'ಗೆ ತೀರ್ಪುಗಾರರಾಗಿ ಜೆನ್ನಿಫರ್ ಲೋಪೆಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಗಂಡ ಮಾರ್ಕ್ ಆಂಟೋನಿ, ಮೂರು ವರ್ಷದ ಅವಳಿ ಜವಳಿ ಮಕ್ಕಳೊಂದಿಗೆ ಮನೆಯಲ್ಲಿ ಕಳೆಯುವ ಕ್ಷಣಗಳೇ ತನ್ನ ಪಾಲಿಗೆ ಆನಂದದಾಯಕ ಕ್ಷಣಗಳು ಎಂದು ಜೆನ್ನಿಫರ್ ತಿಳಿಸಿದ್ದಾರೆ.

  English summary
  Jennifer Lopez, who recently earned the title of World''s Most Beautiful Woman from People mag, has confessed that she started going grey at 23. the Latino singer, who is also a judge on American Idol, as saying on a US radio show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X