Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ 3ಡಿ ಲೈಂಗಿಕ ಚಿತ್ರಕ್ಕೆ ಭರ್ಜರಿ ಓಪನಿಂಗ್
32 ಲಕ್ಷ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಹಿರೊ ಹಾಯನಾ ನಾಯಕನಟನಾಗಿದ್ದಾನೆ. ಜಪಾನಿನ ಯುವ ನಟಿಯರಾದ ಯುಕಿಕೊ ಸುವೊ ಮತ್ತು ಸಾವೊರಿ ಹರ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಉದ್ಯೋಗಿಗಳು, ನಿವೃತ್ತರು, ವಿದ್ಯಾರ್ಥಿಗಳು ಎನ್ನದೆ ಎಲ್ಲ ವಯೋಮಾನದ ಹೈಕಳುಗಳು ಚೀನಾದ ದಕ್ಷಿಣ ಭಾಗದಲ್ಲಿರುವ ಹಾಂಕಾಂಗ್ ನ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. 3ಡಿ ಆಕ್ಷನ್ ಅನ್ನು ಕಣ್ತುಂಬಿಸಿಕೊಳ್ಳುವ ತವಕ ಅವರಲ್ಲಿ ತುಳುಕುತ್ತಿದೆ.
ಕುತೂಹಲಕಾರಿ ಸಂಗತಿಯೆಂದರೆ ಅನೇಕ ಮಹಿಳೆಯರೂ ಕ್ಯೂನಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹತ್ ಪರದೆಯ ಮೇಲೆ 3ಡಿ ಆಕ್ಷನ್ ನಲ್ಲಿ ಲೈಂಗಿಕತೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನೋಡುವ ಕುತೂಹಲದಿಂದಾಗಿ ಥಿಯೇಟರ್ ಗೆ ಬಂದಿರುವೆ ಎಂದು ಕ್ಯೂನಲ್ಲಿ ನಿಂತಿದ್ದ ಯುವತಿಯೊಬ್ಬಳು ಪ್ರತಿಕ್ರಿಯಿಸಿದ್ದಾಳೆ. ಹಾಂಕಾಂಗ್ ನಲ್ಲಿ ಇಂದಿಗೂ ತುಂಬಿದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿರುವ 1981ರ Sex and Zen ಸಿನಿಮಾದ ಕಥೆಯನ್ನೇ ಈಗ 3ಡಿ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಯಶಸ್ಸನ್ನು ಕಂಡು ಹಾಂಕಾಂಗ್ ನ ಇತರೆ ನಿರ್ಮಾಕರೂ ಈಗಾಗಲೇ ಹೊಸ 3ಡಿ ಲೈಂಗಿಕ ಸಿನಿಮಾಗಳ ನಿರ್ಮಾಣಕ್ಕೆ ಬುಕ್ ಮಾಡಿಸಿದ್ದಾರಂತೆ.
ಚಿತ್ರವು ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಯುರೋಪ್ ಹಾಗೂ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಶುಕ್ರವಾರ ಬಿಡುಗಡೆಯ ಭಾಗ್ಯ ಕಾಣಲಿದೆ. ಚೀನಾದಲ್ಲಿ ಅಶ್ಲೀಲ ಸಿನಿಮಾಗಳಿಗೆ ನಿಷೇಧ ಇದೆ. ಆದ್ದರಿಂದ ಚೀನಾದ ಸಿನಿ ಪ್ರಿಯರಿಗಾಗಿ ಟೂರ್ ಆಪರೇಟರ್ ಗಳು ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಸನಿಮಾ ದರ್ಶನಕ್ಕಾಗಿಯೇ ಪ್ರವಾಸದ ಏರ್ಪಾಟು ಮಾಡಿದ್ದಾರೆ.