»   »  ಹಾಲಿವುಡ್ ಗೆ ಹಾರಿದ ಅನಿಲ್ ಅಂಬಾನಿ

ಹಾಲಿವುಡ್ ಗೆ ಹಾರಿದ ಅನಿಲ್ ಅಂಬಾನಿ

Posted By:
Subscribe to Filmibeat Kannada
Anil ambani
ನ್ಯೂಯಾರ್ಕ್, ಜು. 16 : ಖ್ಯಾತ ಉದ್ಯಮಿ ರಿಲೈಯನ್ಸ್ ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿ ಹಾಗೂ ಹಾಲಿವುಡ್ ಚಿತ್ರ ನಿರ್ಮಾಪಕ ಸ್ಟೀವನ್ ಸ್ಫೀಲ್ ಬರ್ಗ್ ಜೊತೆಗೂಡಿ 825 ಮಿಲಿಯನ್ ಡಾಲರ್ ವೆಚ್ಚದಲ್ಲಿ ಡ್ರೀಮ್ ವರ್ಕ್ಸ್ ಸ್ಟುಡಿಯೋ ಎಂಬ ನೂತನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅನಿಲ್ ಅಂಬಾನಿ ಅವರ ಜಾಗತಿಕ ಮಟ್ಟದ ಚಿತ್ರಸಂಸ್ಥೆಯ ಕನಸು ಸಾಕಾರಗೊಂಡಿದ್ದು, ಜಾಗತಿಕ ಮಟ್ಟದ ಪ್ರೇಕ್ಷಕರಿಗಾಗಿ ಪ್ರತಿ ಆರು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಅಂಬಾನಿ ಹಾಗೂ ಸ್ಟೀವನ್ ಸ್ಫೀಲ್ ಬರ್ಗ್, ಲಾಸ್ ಎಂಜಲೀಸ್ ನಲ್ಲಿ ಡ್ರೀಮ್ ವರ್ಕ್ಸ್ ಸ್ಟುಡಿಯೋವನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ 6 ಚಿತ್ರಗಳ ನಿರ್ಮಾಣದ ಗುರಿಯಿರಿಸಿಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಚಿತ್ರಗಳ ಹಂಚಿಕೆಯ ಹೊಣೆಯನ್ನು ಡಿಸ್ನಿ ವಾಲ್ಟ್ ಸಂಸ್ಥೆಗೆ ನೀಡಲಾಗುವುದು.

ಡ್ರೀಮ್ ವರ್ಕ್ಸ್ ಸಂಸ್ಥೆಗಳ ಚಿತ್ರಗಳನ್ನು ಭಾರತದಲ್ಲಿ ಬಿಗ್ ಟಿವಿ ಎಂಟರ್ ಟೇನ್ ಮಂಟ್ ಸಂಸ್ಥೆ ಸಂಪೂರ್ಣ ಹಕ್ಕು ಹಾಗೂ ಹಂಚಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದರು. ಸುಮಾರು 825 ಮಿಲಿಯನ್ ಡಾಲರ್ ವೆಚ್ಚದಲ್ಲಿ ಡ್ರೀಮ್ ವರ್ಕ್ಸ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಜಾಗತಿಕ ಮಟದಲ್ಲಿ ಅತ್ಯಂತ ದೊಡ್ಡ ಹೂಡಿಕೆಯಾಗಿದೆ ಅನಿಲ್ ಅಂಬಾನಿ ಹೇಳಿದರು.

ನಂತರ ಮಾತನಾಡಿದ ನಿರ್ಮಾಪಕ ಸ್ಟೀವನ್ ಸ್ಫೀಲ್ ಬರ್ಗ್, ಶೀಘ್ರದಲ್ಲಿ ಡ್ರೀಮ್ ವರ್ಕ್ಸ್ ಸ್ಟುಡಿಯೋ ಸಂಸ್ಥೆಯಿಂದ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಹೇಳಿದರು. ಚಿತ್ರದ ತಾರಾಗಣದ ಆಯ್ಕೆಗಾಗಿ ಶೀಘ್ರವೇ ಭಾರತಕ್ಕೆ ಭೇಟಿ ನೀಡಲಾಗುವುದು. ಇದು ನನ್ನ ವೃತ್ತಿಜೀವನದಲ್ಲಿ ಸಿಕ್ಕ ಅದ್ಭುತ ಅವಕಾಶ. ಜನರ ಅಭಿರುಚಿಗೆ ತಕ್ಕಂತೆ ಉತ್ತಮ ಚಿತ್ರ ನೀಡುವುದು ನನ್ನ ಅಧ್ಯತೆ ಮತ್ತು ಕರ್ತವ್ಯ ಎಂದರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada