»   »  ವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್

ವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್

Subscribe to Filmibeat Kannada

ಜಾಗತಿಕ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಹ್ಯಾರಿ ಪಾಟರ್ ಮೊದಲ ಭಾಗ ತೆರೆಕಂಡು ಈಗ್ಗೆ ಒಂಭತ್ತು ವರ್ಷಗಳೇ ಜಾರಿವೆ. ಆದರೆ ಈ ಚಿತ್ರದ ಮತ್ತು ಪುಸ್ತಕದ ಬಗೆಗೆ ಪ್ರೇಕ್ಷಕರಲ್ಲಿ ಇರುವ ಆಸಕ್ತಿ ಕಿಂಚಿತ್ತೂ ಕುಗ್ಗಿಲ್ಲ. ಕೋಟ್ಯಂತರ ಸಿನಿ ಪ್ರೇಮಿಗಳನ್ನು ಮತ್ತು ಕಾದಂಬರಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದ ಹಿರಿಮೆ ಹ್ಯಾರಿ ಪಾಟರ್ ಗೆ ಸಲ್ಲಬೇಕು. ಸಲ್ಲುತ್ತದೆ.

ಹ್ಯಾರಿ ಪಾಟರ್ ನ ಮುಂದುವರೆದ ಭಾಗ ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ ಚಿತ್ರ ಈಗ ಬಿಡುಗಡೆ ಆಗಿದೆ. ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳಾಗಿದ್ದರೂ ಚಿತ್ರ ಬಿಡುಗಡೆ ಬಗೆಗಿನ ಪ್ರೇಕ್ಷಕರ ನಿರೀಕ್ಷೆ ಮಾತ್ರ ಕುಗ್ಗಲಿಲ್ಲ. ಹದಿಹರೆಯದವರನ್ನು ಮನೋವ್ಯಾಪಾರಗಳನ್ನು ಕುರಿತು ಹೆಣೆದ ಮಹತ್ವಾಕಾಂಕ್ಷೆಯ ಹಾಫ್ ಬ್ಲಡ್ ಪ್ರಿನ್ಸ್ ಒಂದು ಮನೋಜ್ಞ ಚಿತ್ರ.

ನಿರ್ದೇಶಕ ಡೇವಿಡ್ ಯೇಟ್ಸ್ ತನ್ನ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಎರಡು ವರ್ಷ ಕಾದರೂ ಪರವಾಗಿಲ್ಲ ಕಾದಿದ್ದು ಸಾರ್ಥಕ ಎಂಬ ಭಾವನೆ ಪ್ರೇಕ್ಷರಲ್ಲಿ ಮೂಡುವುದು ನಿಸ್ಸಂಶಯ. ತಮ್ಮ ಜೀವಿತಾವಧಿಯ ಹೆಚ್ಚೂಕಡಿಮೆ ಅರ್ಧದಷ್ಟನ್ನು ಹ್ಯಾರಿ ಚಿತ್ರದಲ್ಲೇ ಕಳೆದ ಪಾತ್ರಧಾರಿಗಳಾದ ಡೇನಿಯಲ್ ರಾಡ್ ಕ್ಲಿಫ್, ಎಮ್ಮ ವ್ಯಾಟ್ಸನ್ ಮತ್ತು ರೂಪರ್ಟ್ ಗ್ರಿಂಟ್ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಚಿತ್ರದ ಪೂರ್ಣ ವಿಮರ್ಶೆ ಓದಿ..

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada