Father's dayಗೆ ಅಮ್ಮನಾದ ಕಿಮ್ ಕರ್ದಾಶಿಯನ್

ವೈದ್ಯರು ನೀಡಿದ ದಿನಾಂಕದ ಪ್ರಕಾರ, ಜುಲೈ 11ರಂದು ಕರ್ದಾಶಿಯನ್ ಮಗುವಿಗೆ ಜನ್ಮ ನೀಡಬೇಕಾಗಿತ್ತು, ಆದರೆ ನಿರೀಕ್ಷೆಗಿಂತಲೂ 5 ವಾರ ಮೊದಲೇ ಕರ್ದಾಶಿಯನ್ ಮಗುವಿಗೆ ಜನ್ಮ ನೀಡಿದ್ದಾರೆ.
ಮೂವತ್ಮೂರು ವರ್ಷದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿತ್ತು. ಆದರೆ ವರ್ಷದ ಹಿಂದೆ ಡೇಟಿಂಗ್ ಮಾಡುತ್ತಿದ್ದರು. ಅದಕ್ಕೂ ಮುನ್ನ ಕಿಮ್, ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ 72 ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು.
ಲಾಸ್ ಏಂಜಲೀಸ್ ನ Cedars Sinai Medical Centerನಲ್ಲಿ ಜೂನ್ 16ರಂದು ಕಿಮ್ ಮಗುವಿಗೆ ಜನ್ಮ ನೀಡಿದರು. ಈ ಸಂದರ್ಭದಲ್ಲಿ ಅವರ ಪತಿ ಕೇನ್ ಸೆಟ್ ಸನಿಹದಲ್ಲೇ ಇದ್ದರು.
ಮಗುವಿಗೆ ಈಗಾಗಲೇ ಹೆಸರಿಡಲಾಗಿದೆಯಾದರೂ Kim ದಂಪತಿ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆ ಹೆಸರು K ಅಕ್ಷರದಿಂದಲೇ ಆರಂಭವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದೇ ವೇಳೆ ಟ್ವಿಟ್ಟರ್ ಲೋಕದಲ್ಲಿ ಕಿಮ್ ಕರ್ದಾಶಿಯನ್ ಮತ್ತು ಕೇನ್ ಸೆಟ್ ದಂಪತಿಗೆ ಶುಭಾಶಗಳ ಹೊಳೆ ಹರಿದುಬಂದಿದೆ.


Click it and Unblock the Notifications











