»   »  ರು.100 ಕೋಟಿ ಬಜೆಟ್ ನಲ್ಲಿ ಅಶುತೋಷ್ 'ಬುದ್ಧ'

ರು.100 ಕೋಟಿ ಬಜೆಟ್ ನಲ್ಲಿ ಅಶುತೋಷ್ 'ಬುದ್ಧ'

Posted By:
Subscribe to Filmibeat Kannada

'ಲಗಾನ್', 'ಜೋಧಾ ಅಕ್ಬರ್' ಚಿತ್ರಗಳ ಸೃಷ್ಟಿಕರ್ತ ಅಶುತೋಷ್ ಗೋವರಿಕರ್ ಖುಷಿಯಾಗಿದ್ದಾರೆ. 'ಇಫಾ' ಸಮಾರಂಭದಲ್ಲಿ ತಮ್ಮ ಚಿತ್ರಗಳಿಗೆ ಸಿಕ್ಕ ಪುರಸ್ಕಾರಗಳನ್ನು ಕಂಡು ಅವರು ಮೈಮರೆತಿದ್ದಾರೆ. ಈ ಖುಷಿಯಲ್ಲೇ ಅವರು ಮತ್ತೊಂದು ಆಧ್ಯಾತ್ಮಿಕ ಆಂಗ್ಲ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ರು.100 ಕೋಟಿ ಭಾರಿ ಬಜೆಟ್ ನಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರಕ್ಕೆ 'ಬುದ್ಧ' ಹೆಸರಿಡಲು ಚಿಂತನೆ ನಡೆದಿದೆ. 2,500 ವರ್ಷಗಳಷ್ಟು ಹಿಂದಿನ ಕತೆಯನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ. ಮಾಂಕ್ ಥಿಚ್ ಬರೆದ 'ಓಲ್ಡ್ ಪಾತ್...ವೈಟ್ ಕ್ಲಾಡ್ಸ್' ಎಂಬ ಕೃತಿ ಆಧಾರವಾಗಿ ಈ ಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ.

ಸಿದ್ಧಾರ್ಥ ಎಂಬ ಯುವರಾಜ ಹೇಗೆ ಬುದ್ಧನಾದ? ಬೌದ್ಧ ಧರ್ಮವನ್ನು ಹೇಗೆ ಪ್ರಚಾರ ಮಾಡಿದ? ಎಂಬ ಕೋನಗಳಲ್ಲಿ ಚಿತ್ರ ಸಾಗಲಿದೆ. ಹಾಲಿವುಡ್ ನಟ ಸ್ಮಿತ್ ಮಗ ಜೇಡೆನ್ ಸ್ಮಿತ್ ಸಿದ್ಧಾರ್ಥನ ಪಾತ್ರದಲ್ಲಿ ಕಾಣಿಸಲಿದ್ದಾರೆ. 2010ರ ಮೇ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada