For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆ ಅಲಂಕರಿಸಲಿದೆ ಲಾಡೆನ್ ಮಟಾಷ್ ಸ್ಟೋರಿ

  By Rajendra
  |

  ಸೌದಿ ಅರೇಬಿಯದ ಶ್ರೀಮಂತ ಬಿನ್ ಲಾಡೆನ್ ಪರಿವಾರದ ಸದಸ್ಯ, ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವದ್ ಬಿನ್ ಲಾಡೆನ್. ಅಮೆರಿಕಾದ 9/11ರ ಮಾಸ್ಟರ್‌ಮೈಂಡ್. ಈತನನ್ನು ಯುಎಸ್‌ನ ನೇವಿ ಸೀಲ್ಸ್ ಯಮಲೋಕಕ್ಕೆ ಕಳುಹಿಸಿದ್ದು ಗೊತ್ತೇ ಇದೆ.

  ಲಾಡೆನನ್ನು ಹೇಗೆ ಬಲಿಹಾಕಲಾಯಿತು? ಕಳೆದ ಹತ್ತು ವರ್ಷಗಳಿಂದ ಸಿಗದ ಲಾಡೆನ್‌ನನ್ನು ಕೇವಲ 40 ನಿಮಿಷಗಳಲ್ಲಿ ಪರಲೋಕಕ್ಕೆ ಕಳುಹಿಸಿದ್ದು ಹೇಗೆ. ಈ ರೀತಿಯ ಅಂಶಗಳನ್ನು ಇಟ್ಟುಕೊಂಡು ಚಿತ್ರಕತೆಯಾಗುತ್ತಿದೆ. 'ದಿ ಹರ್ಟ್ ಲಾಕರ್' ಚಿತ್ರದ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿ ಪುರಸ್ಕೃತ ಕತ್ರಿನ್ ಬಿಗೆಲೋ ಆಕ್ಷನ್ ಕಟ್ ಹೇಳಲಿದ್ದಾರೆ.

  ಜೋಲಿ ಎಡ್‌ಗರ್ಟನ್ ಚಿತ್ರದ ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಉಳಿದ ಪಾತ್ರವರ್ಗದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಲಾಡೆನ್ ಹತ್ಯೆ ಓದಲು ಎಷ್ಟು ರೋಚಕವಾಗಿತ್ತೋ ಚಿತ್ರದ ಬಗ್ಗೆಯೂ ಅದೇ ರೀತಿಯ ನಿರೀಕ್ಷೆಗಳಿವೆ. (ಏಜೆನ್ಸೀಸ್)

  English summary
  Infamous incident of 9/11 mastermind Osama Bin Laden's killing operation carried out by U.S special forces in Pakistan will be made into a movie which will be directed by Oscar winning The Hurt Locker director Kathryn Bigelow. Talks are on with Joel Edgerton for the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X