ಟೈಟಾನಿಕ್ ಚೆಲುವೆ ಕೇಟ್, ಗಂಡಾಗಿ ನಟಿಸಬೇಕಂತೆ!
ಟೈಟಾನಿಕ್ ನಟಿ ಕೇಟ್ ವಿನ್ಸ್ಲೆಟ್ ತನ್ನ ಮನದಾಳದ ಬಯಕೆಯನ್ನು ಹೊರ ಹಾಕಿದ್ದಾರೆ. ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪದಕ ಗೆದ್ದ ೩೬ವರ್ಷದ ಪ್ರತಿಭಾವಂತೆಗೆ ಪುರುಷನ ಪಾತ್ರದಲ್ಲಿ ನಟಿಸುವ ಆಸೆಯಿದೆಯಂತೆ.
ಪುರುಷನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ ಹೇಗೆ ಎಂದು ನಾನು ಕನಸು ಕಾಣುತ್ತಿರುತ್ತೇನೆ. ಆ ಪಾತ್ರ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದರೆ, ಆ ರೀತಿ ಪಾತ್ರ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಪುರುಷನ ಪಾತ್ರದಲ್ಲಿ ನಟಿಸುವುದು ಮಾತ್ರ ನನಗೆ ಸವಾಲು ಎಂದು ಕಾಣುತ್ತದೆ ಎಂದು ಕೇಟ್ ಹೇಳಿದ್ದಾಳೆ.
ಈ ಮುಂಚೆ ಎಲಿಜಬೇತ್ ಟೇಲರ್ ಪಾತ್ರದಲ್ಲಿ ನಟಿಸುವಾಸೆ ಎಂದಿದ್ದ ಕೇಟ್ ವಿನ್ಸ್ ಲೆಟ್ ಈಗ ಪುರುಷನ ಪಾತ್ರದತ್ತ ವಾಲಿದ್ದಾಳೆ. ಮುಂದೆ ಯಾವ ಪಾತ್ರದ ಮೇಲೆ ಕಣ್ಣು ಹಾಕುವಳೋ ಗೊತ್ತಿಲ್ಲ.
More from Filmibeat
English summary
Hollywood actress Kate Winslet said playing a man would be the ultimate challenge. The 36-year-old actress previously said she would love to take on the part of the late Dame Elizabeth Taylor.


Click it and Unblock the Notifications











