»   » ಬಾಲಿವುಡ್ ಅಂಗಳಕ್ಕೆ ಗ್ಲಾಡಿಯೇಟರ್ ಎಂಟ್ರಿ

ಬಾಲಿವುಡ್ ಅಂಗಳಕ್ಕೆ ಗ್ಲಾಡಿಯೇಟರ್ ಎಂಟ್ರಿ

Posted By:
Subscribe to Filmibeat Kannada

ಹಾಲಿವುಡ್ ನ ಸ್ಟಾರ್ ಗಳೆಲ್ಲಾ ಬಾಲಿವುಡ್ ಗೆ ಬಂದು ಹಿಂದಿ ಮಾತನಾಡುವ ಕಾಲ ಬಂದಿದೆ. ಅಕ್ಷಯ್ ಕುಮಾರ್ ಚಿತ್ರದಲ್ಲಿ ಸಿಲ್ವೇಸ್ಟರ್ ಸ್ಟಲೋನ್ ಕೆಲ ದೃಶ್ಯದಲ್ಲಿ ಕಾಣಿಸಿಕೊಂಡ ಮೇಲೆ, ಹೃತಿಕ್ ರೋಷನ್ ಜೊತೆ ಕೈಟ್ಸ್ ಹಾರಿಸಲು ಬರ್ಬರಾ ಮೋರಿ ಬಂದಿಳಿದರು. ಈಗ ಗಂಭೀರ ವದನದ ಆಸ್ಕರ್ ವಿಜೇತ ನಟ ಗ್ಲಾಡಿಯೇಟರ್ ಖ್ಯಾತಿಯ ರಸೆಲ್ ಕ್ರೋವ್ ಬಾಲಿವುಡ್ ಅಂಗಳ ಕಾಲಿಟ್ಟಿದ್ದಾರೆ.

ಸುದಿಪ್ತೊ ಸೇನ್ ನಿರ್ದೇಶನದ ದ್ವಿಭಾಷಾ ಚಿತ್ರ 'ಕುಂಭ್ ಮೇಳ' ದಲ್ಲಿ ನಟಿಸಲು ಈ ಆಸೀಸ್ ಕಲಾವಿದ ಮನಸ್ಸು ಮಾಡಿದ್ದಾರೆ. ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ರಸೆಲ್ ಜರ್ಮನ್ ಲೇಖಕನ ಪಾತ್ರದಲ್ಲಿ ಕಾಣಿಸಲಿದ್ದಾರೆ. ವಿಮುಕ್ತಿ, ನಿರ್ವಾಣ ಪಡೆಯಲು ಜರ್ಮನಿಯಿಂದ ಭಾರತಕ್ಕೆ ಬರುವ ಲೇಖಕ, ಕೊನೆಗೆ ಇಲ್ಲಿನ ಯುವತಿಗೆ ಮನಸೋಲುತ್ತಾನೆ. ಮುಂದೆ, ಪ್ರೇಮವೋ ಅಥವಾ ನಿರ್ವಾಣವೋ ಯಾವುದಕ್ಕೆ ಗೆಲುವು ಕಾದು ನೋಡಿ ಎನ್ನುತ್ತಾರೆ ನಿರ್ದೇಶಕ ಸೇನ್

ಅಂದ ಹಾಗೆ, ಈ ಚಿತ್ರದಲ್ಲಿ ಆಸ್ಕರ್ ವಿಜೇತರ ದಂಡೇ ಸೇರಿದೆ. ಚಿತ್ರಕ್ಕೆ ಸ್ವರಮಾಂತ್ರಿಕ ಎಆರ್ ರೆಹಮಾನ್ ಸಂಗೀತ ಒದಗಿಸಿದ್ದಾರೆ. ರಸೆಲ್ ಪೂಕುಟ್ಟಿ ಧ್ವನಿ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಭಾನು ಅಥೈಯಾ ವಸ್ತ್ರ ವಿನ್ಯಾಸವಿದೆ. ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಸಂಕಲನಕಾರ ಕ್ರಿಸ್ ಡಿಕೆನ್ಸ್ ಈ ತಂಡದ ಹೊಚ್ಚ ಹೊಸ ಸೇರ್ಪಡೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada