»   » ನಗ್ನತೆ ಸ್ವತಂತ್ರತೆಯ ಸಂಕೇತ :ಕಿಮ್ ಕರ್ದೆಶಿಯಾನ್

ನಗ್ನತೆ ಸ್ವತಂತ್ರತೆಯ ಸಂಕೇತ :ಕಿಮ್ ಕರ್ದೆಶಿಯಾನ್

Posted By:
Subscribe to Filmibeat Kannada

ಹಾಲಿವುಡ್ ನಟಿ ಕಿಮ್ ಬೆತ್ತಲೆ ಚಿತ್ರಕ್ಕೆ ಭಾರಿ ಡಿಮ್ಯಾಂಡ್, ಹುಟ್ಟುಡುಗೆಯಲ್ಲಿ ಕಿಮ್ ಕರ್ದೆಶಿಯಾನ್ ರನ್ನು ಸೆರೆ ಹಿಡಿದಿದ್ದು ಖ್ಯಾತ ಫೋಟೋ ಗ್ರಾಫರ್ ಅಮಂಡಾ ಡಿ ಕಾಡೆನೆಟ್. 29 ವರ್ಷದ ಈ ನಟಿ ತಾನು ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಸ್ವತಂತ್ರತೆಯ ಸಂಕೇತ ಎಂದು ಎದ್ದೆಯುಬ್ಬಿಸಿ ಹೇಳುತ್ತಾಳೆ. ಒಟ್ಟಿನಲ್ಲಿ ಹಾರ್ಪರ್ ಬಜಾರ್ ಪತ್ರಿಕೆ ಬಿಸಿ ಮಸಾಲೆ ದೊಸೆಯಂತೆ ಖರ್ಚಾಗುತ್ತಿದೆ.

ಯೌವನಾವಸ್ಥೆಗೆ ಕಾಲಿಟ್ಟ ದಿನಗಳಲ್ಲಿ ಅಂಗಾಂಗಗಳು ಬಲಿಯುವ ಸಮಯದಲ್ಲಿ ನಾನು ಎಲ್ಲರಿಗಿಂತ ಉತ್ತಮವಾದ ಬಲಿಷ್ಠವಾದ ದೇಹ ನನ್ನದಾಗಲಿ ಎಂದು ಬಯಸುತ್ತಿದ್ದೆ. ಇದಕ್ಕಾಗಿ ದಿನವೂ ಪ್ರಾರ್ಥಿಸುತ್ತಿದ್ದೆ. ಈಗ ಅದೆಲ್ಲವೂ ನನಗೆ ಸಿಕ್ಕಿದೆ ಎಂದು ನಿಂತಲ್ಲೇ ದೇವರಿಗೆ ಧನ್ಯವಾದ ರೂಪದಿ ಫ್ಲೈಯಿಂಗ್ ಕಿಸ್ ನೀಡುತ್ತಾಳೆ.

ನಮ್ಮ ಬೆಂಗಾಲಿ ಬೆಡಗಿ ಬಿಪಾಶ ಬಸುಗೆ ಗಾಢ ಚುಂಬನದ ರುಚಿ ನೀಡಿದ್ದ ಖ್ಯಾತ ಪುಟ್ಬಾಲ್ ತಾರೆ ಕ್ರಿಸ್ಟಿಯನೋ ರೊನಾಲ್ಡೊ ಈಕೆಯ ಸದ್ಯದ ಚುಂಬನ ಪ್ರೇಮಿ. ರೊನಾಲ್ಡೋ ಕಿಸ್ ಗಿಂತ ಕಿಮ್ ಕೊಟುವ ಕಿಸ್ ಗ್ರೇಟ್ ಅಂತೆ ಹಾಗಂತ ಇಡೀ ಹಾಲಿವುಡ್ ನಲ್ಲಿ ಸುದ್ದಿ. ಕಿಸ್ ಜೊತೆಗೆ ಕಿಮ್ ಗೆ ತನ್ನ ಪೃಷ್ಠದ ಮೇಲೆ ಭಾರಿ ಹೆಮ್ಮೆ. ಯಾರಿಗೂ ಇಲ್ಲದ ಸುಂದರವಾದ ಶೇಪ್ ನನ್ನದು ಎಂದೇ ಆಕೆಯ ನಂಬಿಕೆ.

ಬಚ್ಚಿಟ್ಟಿ ಕೊಂಡರೆ ಏನು ಪ್ರಯೋಜನೆ ಬೆತ್ತಲಾದರಷ್ಟೇ ಸುದ್ದಿ ಎನ್ನುವ ಕಿಮ್, ಸಿನಿಮಾಗಿಂತ ಟಿವಿಯಲ್ಲೇ ಮಿಂಚಿತ್ತಿದ್ದಾರೆ. ಈಕೆ ನಡೆಸಿಕೊಡುವ Keeping Up with the Kardashians ಕಾರ್ಯಕ್ರಮ ಅತಿ ಜನಪ್ರಿಯ. 2007ರಲ್ಲಿ ಪ್ಲೇ ಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಕಿಮ್, ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಮಳಿಗೆ ಓನರ್ ಕೂಡ ಹೌದು. ಗೆಳೆಯ ರೇ ಜೆ ಜೊತೆಗಿನ ಸರಸಮಯ ದೃಶ್ಯಗಳ ವಿಡಿಯೋ ವೆಬ್ ಲೋಕಕ್ಕೆ ಸೇರಿ ಎಲ್ಲೆಡೆ ಹರಿದಾಡಿ ಕೊನೆಗೆ ಅದನ್ನು ಪ್ರಸಾರ ಮಾಡಿದ ಸಂಸ್ಥೆಯಿಂದ ಸುಮಾರು 5ಮಿಲಿಯನ್ ಡಾಲರ್ ಕಕ್ಕಿಸಿದ ಕೀರ್ತಿ ಕಿಮ್ ಗೆ ಸಲ್ಲುತ್ತದೆ.

ಕಿಮ್ ಥಾಮಸ್ ರನ್ನು 2000 ರಲ್ಲೇ ವರಿಸಿದ್ದಳು. ಆತನನ್ನು ವಿಚ್ಛೇದನ ಪಡೆದ ನಂತರ ರೇಜೆ, ರೆಗ್ಗಿ ಬುಷ್ ಜೊತೆ ಒಡನಾಟದ ನಂತರ ಈಗ ರೊನಾಲ್ಡೋ ಸರದಿ. ಪ್ಲೇ ಬಾಯ್ ಮ್ಯಾಗಜೀನ್ ಗಾಗಿ ಬೆತ್ತಲೆಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಕಿಮ್ , ಈಗಿನ ನಗ್ನ ಫೋಟೋ ಶೂಟ್ ಗೆ ಸಮರ್ಥನೆ ನೀಡಿದ್ದಾರೆ. ಆಗ ಗೊತ್ತಿಲ್ಲದೆ ಬೆತ್ತಲಾದೆ, ಈಗ ಗೊತ್ತಿದ್ದು ಬೆತ್ತಲಾಗಿದ್ದೀನಿ ಎಂದಿದ್ದಾರೆ. ಮರಿ ಬೆಕ್ಕೊಂದರನ್ನು ಎತ್ತಿ ಹಿಡುದು ಬೆಕ್ಕಿನ ನಡಿಗೆ ಇಟ್ಟಿದ್ದ ಕಿಮ್ ವಿರುದ್ಧ ಪೆಟಾ ಅನಿಮಲ್ ಕೇರ್ ನ ಸಿಟ್ಟಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿಮ್, ನಾನು ಯಾವುದೇ ಪ್ರಾಣಿಗಳಿಗೂ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ ಎಂದಿದ್ದರು. ಇದರಲ್ಲಿ ಮನುಷ್ಯ ಪ್ರಾಣಿಗಳು ಸೇರಿದಿಯೇ ಎಂದು ಯಾರು ಕೇಳಲಿಲ್ಲ ಸದ್ಯ!Embarassed

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada