»   »  ಹಾಲಿವುಡ್ ಗೆ ಹಾರಲಿರುವಅಮೀರ್ ಖಾನ್

ಹಾಲಿವುಡ್ ಗೆ ಹಾರಲಿರುವಅಮೀರ್ ಖಾನ್

Subscribe to Filmibeat Kannada
Kate Winslet
2008ರ ಸಾಲಿನ ಆಸ್ಕರ್ ಪ್ರಸಸ್ತಿ ವಿಜೇತ ನಟಿ, ಟೈಟಾನಿಕ್ ಚಿತ್ರದ ಚೆಲುವೆ ಕೇಟ್ ವಿನ್ಸ್ ಲೇಟ್ ಜೊತೆಗೆ ಬಾಲಿವುಡ್ 'ಮಿಸ್ಟರ್ ಪರ್ಫೆಕ್ಟ್' ಎಂದೇ ಖ್ಯಾತಿಯಾಗಿರುವ ಅಮೀರ್ ಖಾನ್ ಅಂತಾರಾಷ್ಟ್ರೀಯ ಚಿತ್ರವೊಂದರಲ್ಲಿ ನಟಿಸುತ್ತಿರುವ ಸುದ್ದಿ ಲಂಡನ್ ನಿಂದ ಬಂದಿದೆ.

1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ನಡೆದ ಕುರಿತು ಸಾದತ್ ಹಸನ್ ಮಾಂಟೊ ಅವರು ಬರೆದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಸಾದತ್ ಹಸನ್ ಅವರು ರಾಜಾಶ್ರಯದಲ್ಲಿರುವ ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿಗಳ ಮೂಲಕ ವಿಡಂಬನಾತ್ಮಕವಾಗಿ ಕಥೆಯಲ್ಲಿ ವಿವರಿಸಿದ್ದಾರೆ.

ಅಮೀರ್ ಖಾನ್ ಚಿತ್ರದ ಕಥೆಯ ಬಗ್ಗೆ ಪ್ರಭಾವಿತನಾಗಿದ್ದಾರೆ. ರಾಜಾಶ್ರಯದಲ್ಲಿರುವ ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿಯ ಪಾತ್ರದಲ್ಲಿ ಅಮೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರವನ್ನು ಭಾರತೀಯ ಮೂಲದ ಚಿತ್ರ ನಿರ್ಮಾಪಕ ಪಾನ್ ನಳೀನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಸ್ಕರ್ ವಿಜೇತ ನಟಿ ಕೇಟ್ ವಿನ್ಸ್ ಲೆಟ್ ನಟಿಸಲು ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸವಿದೆ. ಒಂದು ವೇಳೆ ಅವರು ನಟಿಸಲು ನಿರಾಕರಿಸಿದರೆ, ರಚೆಲ್ ವೀಜ್ ರನ್ನು ಸಂಪರ್ಕಿಸುವ ಸಾಧ್ಯತೆಗಳಿವೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada