»   » ಆಧುನಿಕ ದ್ರೌಪದಿಯಾಗಿ ರಸಿಕರ ರಾಣಿ ಏಂಜಲಿನಾ

ಆಧುನಿಕ ದ್ರೌಪದಿಯಾಗಿ ರಸಿಕರ ರಾಣಿ ಏಂಜಲಿನಾ

Posted By:
Subscribe to Filmibeat Kannada

ಎವರ್ ಗ್ರೀನ್ ಮಹಾಕಾವ್ಯ ಮಹಾಭಾರತ ಸಾಕಷ್ಟು ಸಿನಿಮಾ ಕತೆಗಳಿಗೆ ಸ್ಫೂರ್ತಿಯಾಗಿದೆ. ಒಂದಿಲ್ಲೊಂದು ಭಾಷೆಯಲ್ಲಿ ಮಹಾಭಾರತದ ಕತೆಯಾಧಾರಿತ ಚಿತ್ರಗಳು ಬರುತ್ತಲೇ ಇವೆ. ಬಾಲಿವುಡ್ ನಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಸಾಕಷ್ಟು ಚಿತ್ರಗಳು ಬಂದಾಗಿದೆ. ಇದೀಗ ಹಾಲಿವುಡ್ ಆಧುನಿಕ ದ್ರೌಪದಿ ಚಿತ್ರ ಸೆಟ್ಟೇರಲು ಸಿದ್ಧತೆ ನಡೆಸಿದೆ.

ಮಹಾಭಾರತದ ಅತಿಮುಖ್ಯ ಸ್ತ್ರೀ ಪಾತ್ರ ದ್ರೌಪದಿ. ಇಂತಹ ಪಾತ್ರವನ್ನು ಹಾಲಿವುಡ್ ಗೆ ಪರಿಚಯಿಸಬೇಕೆಂಬುದು ಬಾಲಿವುಡ್ ನಿರ್ದೇಶಕನ ಕನಸು. ಹಾಲಿವುಡ್ ನ ಕಲಾವಿರನ್ನು ಬಳಸಿಕೊಂಡು ಚಿತ್ರವನ್ನು ನಿರ್ಮಿಸಲಿದ್ದಾರೆ. 'ರಾಜ ನೀತಿ' ಚಿತ್ರದ ಯಶಸ್ಸಿನ ಸಂತಸದಲ್ಲಿರುವ ಪ್ರಕಾಶ್ ಜಾ ಈ ಆಧುನಿಕ ದ್ರೌಪದಿಯ ಸೂತ್ರಧಾರ. ದ್ರೌಪದಿಯಾಗಿ ಹಾಲಿವುಡ್ ತಾರೆ ಏಂಜಲಿನಾ ಜೋಲಿ ಕಾಣಿಸಲಿದ್ದಾರೆ.

"ಭಾರತ ನನಗೆ ಇಷ್ಟವಾದ ದೇಶ. ಪುರಾಣ ಕತೆಗಳಲ್ಲಿ ಅಭಿನಯಿಸಲು ಖುಷಿಯಾಗುತ್ತಿದೆ" ಎಂದು ಏಂಜಲಿನಾ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರಕ್ಕೆ ದ್ರೌಪದಿಯಾಗಿ ಮಾಧುರಿ ದೀಕ್ಷಿತ್ ಅಭಿನಯಿಸಬೇಕಾಗಿತ್ತು. ಆದರೆ ಚಿತ್ರ ಹಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಕಾರಣ ತಾರಾಗಣವೂ ಬದಲಾಗಿ ಏಂಜಲಿನಾ ಜೋಲಿ ಆಯ್ಕೆಯಾಗಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X