For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ 'ಅವತಾರ್' ನಿರ್ದೇಶಕ ಜೇಮ್ಸ್ ಕೆಮೆರಾನ್

  By Rajendra
  |

  'ಟೈಟಾನಿಕ್', 'ದಿ ಟರ್ಮಿನೇಟರ್', 'ಏಲಿಯನ್ಸ್', 'ಅವತಾರ್'ನಂತಹ ಅದ್ಭುತ ಚಿತ್ರಗಳನ್ನು ಕೊಟ್ಟಂತಹ ಕೆನಡಿಯನ್ ನಿರ್ದೇಶಕ ಜೇಮ್ಸ್ ಕೆಮೆರಾನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬಂದಂತಹ ಇತ್ತೀಚಿನ 'ಅವತಾರ್' ಚಿತ್ರ ಅವರ ಹಿಂದಿನ 'ಟೈಟಾನಿಕ್' ಚಿತ್ರದ ಬಾಕ್ಸಾಫೀಸ್ ಗಳಿಕೆಯನ್ನು ಚಿಂದಿಮಾಡಿತ್ತು.

  ಅಂದಹಾಗೆ ಯಾವುದೇ ಚಿತ್ರವನ್ನು ನಿರ್ದೇಶಿಸಲು ಕೆಮರಾನ್ ಭಾರತಕ್ಕೆ ಬರುತ್ತಿಲ್ಲ. ಮಹಾರಾಷ್ಟ್ರದ ಲವಾಸದಲ್ಲಿ ಡಿಸೆಂಬರ್ 10 ರಿಂದ 12ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಮನರಂಜನೆ ಬಗ್ಗೆ ಕೆಮರಾನ್ ಮಾತನಾಡಲಿದ್ದಾರೆ.

  ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ರೂಪಿಸಿದ ಸೂಪರ್ 30 ಕಾರ್ಯಕ್ರಮ ವಿಶ್ವದಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತ ಶಿಕ್ಷಣ ನೀಡಲು ಈ ಕಾರ್ಯಕ್ರಮ ನೆರವಾಗುತ್ತಿದೆ. ಕೆಮರಾನ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವ ಬಗ್ಗೆ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Well Known Hollywood film director James Cameron to visit India to attend an international conference at Lavasa, Maharashtra, from December 10-12. He speak about technology and entertainment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X