»   »  ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ

ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ

Posted By:
Subscribe to Filmibeat Kannada
A R Rahman
ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ 81ನೇ ವಾರ್ಷಿಕ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗೆ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಭಾರತ ಮತ್ತು ಬ್ರಿಟನ್ನಿನ ಜಂಟಿ ನಿರ್ಮಾಣದ ಡ್ಯಾನಿ ಬಾಯ್ಲ್ ನಿರ್ದೇಶಿಸಿದ್ದಾರೆ.

'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದಾರೆ. 3 ಆಸ್ಕರ್ ಪ್ರಶಸ್ತಿಗೆ ನಾಮಕನಿರ್ದೇಶನಗೊಂಡ ಮೊದಲ ಭಾರತೀಯ ಎಂಬ ಹೆಮ್ಮೆಗೆ ಎ.ಆರ್.ರೆಹಮಾನ್ ಪಾತ್ರರಾಗಿದ್ದಾರೆ. ಒಟ್ಟು ಹತ್ತು ವಿಭಾಗಗಳಲ್ಲಿ ಆಸ್ಕರ್ ಗೆ ನಾಮಕರಣಗೊಳ್ಳುವ ಮೂಲಕ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಮತ್ತೊಂದು ದಾಖಲೆ ಬರೆದಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸ್ಯಾಮ್ಯ್ಯುಯಲ್ ಗೋಲ್ಡ್ ವಿನ್ ಚಿತ್ರಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿ ಪುರಷ್ಕೃತ ನಟ ಫಾರೆಸ್ಟ್ ವ್ಹಿಟಕರ್ ಅವರು ಈ ನಾಮನಿರ್ದೇಶನವನ್ನು ಪ್ರಕಟಿಸಿದರು. ಹಾಲಿವುಡ್ ನ ಕೋಡಕ್ ಚಿತ್ರಮಂದಿರದಲ್ಲಿ ಫೆಬ್ರವರಿ 22ರಂದು ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.

ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ: 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಆಸ್ಕರ್ ಗೆ ನಾಮಕರಣಗೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದೇವರು ನಿಜಕ್ಕೂ ದೊಡ್ಡವನು. ಈ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಳ್ಳಲು ಹಾರೈಸಿದಎಲ್ಲರಿಗೂ ನಾನು ಚಿರಋಣಿ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪ್ರತಿಕ್ರಿಯಿಸಿದ್ದಾರೆ. 10 ಆಸ್ಕರ್ ಪ್ರಶಸ್ತಿಗಳಿಗೆ ನಾಮಕರಣಗೊಂಡಿರುವುದು ನಿಜಕ್ಕೂ ನಂಬಲಸಾಧ್ಯವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ ಎಂದು ಸಹ ನಿರ್ದೇಶಕಿ ಲವೀಲಿನ್ ಟಂಡನ್ ಹರ್ಷಚಿತ್ತರಾಗಿದ್ದಾರೆ.

ನಾಮ ನಿರ್ದೇಶನಗಳು
1. ಅತ್ಯುತ್ತಮ ಚಿತ್ರ: ಸ್ಲಂಡಾಗ್ ಮಿಲಿಯನೇರ್
2.ಅತ್ಯುತ್ತಮ ನಿರ್ದೇಶನ: ಡ್ಯಾನಿ ಬಾಯ್ಲ್
3.ಅತ್ಯುತ್ತಮ ಚಿತ್ರಕತೆ: ಸಿಮನ್ ಬಿಫಾಯ್
4.ಅತ್ಯುತ್ತಮ ಹಿನ್ನೆಲೆ ಸಂಗೀತ: ಎ.ಆರ್.ರೆಹಮಾನ್
5.ಅತ್ಯುತ್ತಮ ಗೀತೆ: ರೆಹಮಾನ್, ಗುಲ್ಜರ್
6.ಅತ್ಯುತ್ತಮ ಗೀತೆ: ರೆಹಮಾನ್
7.ಅತ್ಯುತ್ತಮ ಛಾಯಾಗ್ರಹಣ: ಆಂಟನಿ ಡ್ಯಾಡ್ ಮ್ಯಾಂಟಲ್
8.ಅತ್ಯುತ್ತಮ ದೃಶ್ಯ ಸಂಕಲನ: ಕ್ರಿಸ್ ಡಿಕೆನ್ಸ್
9.ಅತ್ಯುತ್ತಮ ಧ್ವನಿ ಸಂಕಲನ: ಟಾಂ ಸೇಯರ್ಸ್
10: ಅತ್ಯುತ್ತಮ ಧ್ವನಿ ಮುದ್ರಣ: ಇಯಾನ್ ಟ್ಯಾಪ್, ರಿಚರ್ಡ್, ರಸೆಲ್ ಪುಕುಟಿ

(ಏಜೆನ್ಸೀಸ್)

ಪೂರಕ ಓದಿಗೆ

ಸ್ಲಂ ಡಾಗ್ ಚಿತ್ರ ವಿಮರ್ಶೆ:

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada