»   » ಇಂಗ್ಲಿಷ್ ಚಿತ್ರದಲ್ಲಿ 'ನಾಗವಲ್ಲಿ'ವಿಮಲಾ ರಾಮನ್

ಇಂಗ್ಲಿಷ್ ಚಿತ್ರದಲ್ಲಿ 'ನಾಗವಲ್ಲಿ'ವಿಮಲಾ ರಾಮನ್

Posted By:
Subscribe to Filmibeat Kannada

ವಿಷ್ಣುವರ್ಧನ್ ಅಭಿನಯದ 200ನೇ ಚಿತ್ರ'ಆಪ್ತರಕ್ಷಕ'ದ ನಾಗವಲ್ಲಿ ವಿಮಲಾ ರಾಮನ್ ಇಂಗ್ಲಿಷ್ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಚಿತ್ರದ ಹೆಸರು 'Dame 999'. ಈ ಚಿತ್ರದ ಮೂಲಕ ನಟಿ ವಿಮಲಾ ರಾಮನ್ ಹಾಲಿವುಡ್ ನ ಹಲವು ಖ್ಯಾತ ನಾಮರ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಈ ಆಂಗ್ಲ ಚಿತ್ರದ ಕತೆ ಸಹ ಕುತೂಹಲಕರವಾಗಿದೆ. ಮಲಯಾಳಿ ಯುವತಿ ಹಾಗೂ ಆಂಗ್ಲ ಯುವಕನೊಬ್ಬನ ಪ್ರೇಮಕತೆಯೆ 'Dame 999'. ಮಾರ್ಚ್ 1ರಿಂದ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು. 'ಆಪ್ತರಕ್ಷಕ' ಚಿತ್ರದ ನಾಗವಲ್ಲಿ ಕಡೆಗೆ ಆಂಗ್ಲ ಭಾಷೆಗೆ ಅಡಿಯಿಟ್ಟಿದ್ದಾರೆ.

ಮೂಲತಃ ವಿಮಲಾ ರಾಮನ್ ರೂಪದರ್ಶಿ ಹಾಗೂ ಭರತ ನಾಟ್ಯ ಕಲಾವಿದೆ . ದಕ್ಷಿಣ ಭಾರತದ ಬಲು ಬೇಡಿಕೆಯ ನಟಿಯರಲ್ಲಿ ವಿಮಲಾ ಸಹ ಒಬ್ಬರು. ಹುಟ್ಟಿದ್ದು ಬೆಳೆದದ್ದು ಸಿಡ್ನಿಯಲ್ಲಿ. 2004ರಲ್ಲಿ 'ಮಿಸ್ ಇಂಡಿಯಾ ಆಸ್ಟ್ರೇಲಿಯಾ' ಹಾಗೂ 'ಮಿಸ್ ಇಂಡಿಯಾ ಆಸ್ಟ್ರೇಲಿಯಾ ಸೈಬರ್ ಕ್ವೀನ್' ಪ್ರಶಸ್ತಿಯನ್ನು ಪಡೆದಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada