twitter
    For Quick Alerts
    ALLOW NOTIFICATIONS  
    For Daily Alerts

    ಹಿಂದು ದೇವಾಲಯಕ್ಕೆ ಏಂಜಲೀನಾ ಜೋಲಿ ಹೆಸರು

    By Rajendra
    |

    ಇತಿಹಾಸ ಪ್ರಸಿದ್ಧ ಹಿಂದು ದೇವಾಲಯಕ್ಕೆ ಹಾಲಿವುಡ್ ತಾರೆ ಏಂಜಲೀನಾ ಜೋಲಿ ಹೆಸರಿಡಲಾಗಿದೆ. ಕಾಂಬೋಡಿಯಾದಲ್ಲಿರುವ ಈ ಮಂದಿರವು 12ನೇ ಶತಮಾನದ್ದಾಗಿದ್ದು, ಟಾ ಪ್ರೋಮ್ (Ta Prohm) ಎಂದು ಕರೆಯಲಾಗುತ್ತದೆ. ಹಾಗೆಂದರೆ ಹಳೆ ಬ್ರಹ್ಮ ಮಂದಿರ ಎಂಬ ಅರ್ಥವಿದೆಯಂತೆ.

    ಇತಿಹಾಸ ಪ್ರಸಿದ್ಧವಾದ ಈ ಮಂದಿರಕ್ಕೆ ಈಗ 'ಏಂಜಲೀನಾ ಜೋಲಿ ಮಂದಿರ' ಎಂದು ನಾಮಕರಣ ಮಾಡಲಾಗಿದೆ. ಹಾಳಾಗುತ್ತಿರುವ ಈ ಮಂದಿರವನ್ನು ಉಳಿಸುವ ಸಲುವಾಗಿ ಏಂಜಲಿನಾ ಹೆಸರಿಡಲಾಗಿದೆ ಎಂದು ಹಿಂದೂಧರ್ಮ ವಿಶ್ವವ್ಯಾಪಿ ಸೊಸೈಟಿ ಅಧ್ಯಕ್ಷ ರಾಜನ್ ಜೇಡ್ Imdb.com ಅಂತರ್ಜಾಲ ತಾಣಕ್ಕೆ ತಿಳಿಸಿದ್ದಾರೆ.

    ಐತಿಹಾಸಿಕ ಮಹತ್ವವುಳ್ಳ ಈ ಮಂದಿರವನ್ನು ಉಳಿಸುವಂತೆ ಏಂಜಲಿನಾ ಜೋಲಿ ಅವರನ್ನು ಒತ್ತಾಯಿಸಲಾಗಿದೆ. ವಿಶ್ವಪ್ರಸಿದ್ಧ ಈ ಮಂದಿರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ದೇವಸ್ಥಾನವನ್ನು ಲೂಟಿ ಮಾಡಲಾಗುತ್ತಿದ್ದು ಅದರ ಸುತ್ತಮುತ್ತಲಿನ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಮಂದಿರವನ್ನು ಉಳಿಸುವ ಸಲುವಾಗಿ ಏಂಜಲಿನಾ ಹೆಸರನ್ನು ಇಡಲಾಗಿದೆ ಎಂದು ರಾಜನ್ ಅಂತರ್ಜಾಲ ತಾಣಕ್ಕೆ ತಿಳಿಸಿದ್ದಾರೆ.

    ಹಾಲಿವುಡ್‌ನ ಜನಪ್ರಿಯ 'ಟಾಂಬ್ ರೈಡರ್' ಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಏಂಜಲೀನಾ ಜೋಲಿ ಸನ್ಯಾಸಿನಿಯಾಗಿ ಕಾಣಿಸಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಆಕೆಯ ಹೆಸರನ್ನು ಮಂದಿರಕ್ಕೆ ಇಡಲಾಗಿದೆ ಎನ್ನುತ್ತಾರೆ ರಾಜನ್. ಜೂಲಿ ದತ್ತು ಪುತ್ರ ಮಡಾಕ್ಸ್ ಕೂಡ ಕಾಂಬೋಡಿಯಾದವ ಎಂಬುದು ಮತ್ತೊಂದು ಆಸಕ್ತಿಕರ ಸಂಗತಿ.

    English summary
    A Hindu temple in Cambodia has been named after Hollywood actress Angelina Jolie. It is otherwise known as Old Brahma temple. Now it is popularly called the Angelina Jolie Temple. The actress has been urged to help maintain the ancient site.
    Thursday, November 25, 2010, 18:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X